ಮತ್ತೆ ಸಿಎಂ ಆಗಲಿದ್ದಾರೆ ಕುಮಾರಸ್ವಾಮಿ; ಭವಿಷ್ಯ ನುಡಿದ ಮುಸ್ಲಿಂ ಜ್ಯೋತಿಷಿ

ಆಂಧ್ರಪ್ರದೇಶದಲ್ಲಿ ಜಗನ್​ ಮೋಹನ್​ ರೆಡ್ಡಿ ಭಾರೀ ಬಹುಮತದೊಂದಿಗೆ ಸಿಎಂ ಆಗುತ್ತಾರೆ ಎಂದೂ ಸಹ ಭವಿಷ್ಯ ನುಡಿದಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಎಚ್​ಡಿಕೆ ಬಗ್ಗೆ ಹೇಳಿರುವ ಭವಿಷ್ಯ ನಿಜವಾಗಬಹುದು ಎನ್ನಲಾಗುತ್ತಿದೆ.

Latha CG | news18
Updated:July 24, 2019, 12:47 PM IST
ಮತ್ತೆ ಸಿಎಂ ಆಗಲಿದ್ದಾರೆ ಕುಮಾರಸ್ವಾಮಿ; ಭವಿಷ್ಯ ನುಡಿದ ಮುಸ್ಲಿಂ ಜ್ಯೋತಿಷಿ
ಸಿಎಂ ಕುಮಾರಸ್ವಾಮಿ
  • News18
  • Last Updated: July 24, 2019, 12:47 PM IST
  • Share this:
ಬೆಂಗಳೂರು,(ಜು.24): ಒಂದೆಡೆ ವಿಶ್ವಾಸಮತ ಸಾಬೀತು ಮಾಡಲಾಗದೇ ಎಚ್.ಡಿ.ಕುಮಾರಸ್ವಾಮಿ ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ಗೆಲುವನ್ನು ಸಂಭ್ರಮಿಸುತ್ತಿದ್ದು, ಅಧಿಕಾರ ಹಿಡಿಯಲು ಉತ್ಸುಕರಾಗಿದ್ದಾರೆ. ಆದರೆ ಈ ನಡುವೆ ಎಚ್​ಡಿಕೆ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಪ್ರಸಿದ್ಧ ಮುಸ್ಲಿಂ ಜ್ಯೋತಿಷಿ ಮಹಮ್ಮದ್ ರಹೀಂ ಉಲ್ಲಾ ಖಾನ್ ನಿಯಾಜಿ ಆಗಮಿಸಿದ್ದರು. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದಿದ್ಧಾರೆ. ಜೊತೆಗೆ ಸಿಎಂ ಕುಮಾರಸ್ವಾಮಿ ಅವರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಮೈತ್ರಿ ಸರ್ಕಾರ ಪತನವಾದ ಎರಡೇ ದಿನಕ್ಕೆ ಎಚ್​ಡಿಕೆಗೆ ಗುಡ್​ ನ್ಯೂಸ್​​​ ಸಿಕ್ಕಿದೆ. ಎಚ್​.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.

ಹೈದರಾಬಾದ್​​ನಿಂದ  ಬಂದಿರುವ ಈ ಜ್ಯೋತಿಷಿ ಬಿಜೆಪಿ ಸರ್ಕಾರದ ಆಯುಷ್ಯ ತೀರಾ ಕಡಿಮೆ ಎಂದು ಹೇಳಿದ್ಧಾರೆ.ಈ ಬಿಜೆಪಿ ಸರ್ಕಾರದ ಆಯಸ್ಸು ತುಂಬಾ ಕಡಿಮೆ.   ಮುಂಬರುವ ದಿನಗಳಲ್ಲಿ ಬಿಜೆಪಿ ನಾಯಕರಲ್ಲಿಯೇ ಆಂತರಿಕ ಕಲಹ ಉಂಟಾಗುತ್ತದೆ. ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ. ಮುಂದಿನ ವರ್ಷವೇ ಮರು ಚುನಾವಣೆ ನಡೆಯುತ್ತದೆ. ಮತ್ತೆ ಎಚ್​.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸರ್ಕಾರ ರಚನೆಗೆ ಆತುರ ತೋರದ ಬಿಎಸ್​ವೈ; 2008ರ ಇತಿಹಾಸ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಭಾವಿ ಸಿಎಂ!

ಈ ಮುಸ್ಲಿಂ ಜ್ಯೋತಿಷಿ ಹಿಂದೆ ನುಡಿದಿದ್ದ ಭವಿಷ್ಯಗಳು ನಿಜವಾಗಿವೆ ಎನ್ನಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಬಿಜೆಪಿ ಪಕ್ಷ ಏಕಪಕ್ಷವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು ಎನ್ನಲಾಗಿದೆ. ಇಷ್ಟೇ ಅಲ್ಲದೇ, ಆಂಧ್ರಪ್ರದೇಶದಲ್ಲಿ ಜಗನ್​ ಮೋಹನ್​ ರೆಡ್ಡಿ ಭಾರೀ ಬಹುಮತದೊಂದಿಗೆ ಸಿಎಂ ಆಗುತ್ತಾರೆ ಎಂದೂ ಸಹ ಭವಿಷ್ಯ ನುಡಿದಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಎಚ್​ಡಿಕೆ ಬಗ್ಗೆ ಹೇಳಿರುವ ಭವಿಷ್ಯ ನಿಜವಾಗಬಹುದು ಎನ್ನಲಾಗುತ್ತಿದೆ.

First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ