ಚಿಕ್ಕಬಳ್ಳಾಪುರ: ಜೆಡಿಎಸ್ನವರು (JDS) ಗೆದ್ದೆತ್ತಿನ ಬಾಲ ಹಿಡಿತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಹೇಳಿಕೆಗೆ ಇಂದು ಬಾಗೇಪಲ್ಲಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ತಿರುಗೇಟು ನೀಡಿದ್ದಾರೆ. ಹೌದು, ನಾವು ಗೆದ್ದೆತ್ತಿನ ಬಾಲ ಹಿಡಿತಿವಿ, ಆದ್ರೆ ಕಾಂಗ್ರೆಸ್ (Congress) ಯಾಕೆ ಸೋಲೆತ್ತಿನ ಬಾಲ ಹಿಡಿಯೋದು. ಜೆಡಿಎಸ್ ಮೈತ್ರಿಗೆ (Congress-JDS Government) ಮುಂದಾಗಿದ್ದ ಕಾಂಗ್ರೆಸ್‌ಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ತೆವಲು ಹೇಳಿಕೆಗಳಿಗೆ ಮುಂದೆ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು. ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್ (Minister Sudhakar)s ವಿರುದ್ಧ ಕೆಂಡಾಮಂಡಲರಾದ ಕುಮಾರಸ್ವಾಮಿ, ಅವರಿಗೆ ಹಣದ ಮದ ಏರಿದೆ. ಚಿಲ್ಲರೆ ರಾಜಕಾರಣ ಮಾಡೋದು ಬಿಡಬೇಕು ಎಂದು ಕಿಡಿಕಾರಿದರು.
ಶಾಸಕಿ ಅನಿತಾ ಕುಮಾರಸ್ವಾಮಿ (MLA Anitha Kumaraswamy) ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸ್ಫರ್ಧೆ ಎಂಬ ಸುಧಾಕರ್ ಹೇಳಿಕೆಗೆ ಕಿಡಿಕಾರಿದ ಹೆಚ್.ಡಿ.ಕುಮಾರಸ್ವಾಮಿ, ನನಗೇನು ಹುಚ್ಚಾ ಅನಿತಾ ಕುಮಾರಸ್ವಾಮಿ ಅವರನ್ನು ಇಲ್ಲಿ ನಿಲ್ಲಿಸೋಕೆ. ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಜೆಡಿಎಸ್ ಚರಿತ್ರೆ ಗೊತ್ತಿಲ್ಲ. ನಮ್ಮ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡೋದು ಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ಕೃಷ್ಣ ಭೈರೇಗೌಡರ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಮಾಜಿ ಸಚಿವ ಕೃಷ್ಣ ಭೈರೇಗೌಡರೇ ನಿಮ್ಮ ತಂದೆ ಜೆಡಿಎಸ್ ಜೊತೆ ಹೇಗಿದ್ರು ಅಂತಾ ನಿಮ್ಮ ತಾಯಿಯನ್ನು ಕೇಳಿ ನೋಡಿ. ಅವರಿನ್ನು ಜೀವಂತವಾಗಿದ್ದಾರೆ, ಒಮ್ಮೆ ಕೇಳಿನೋಡಿ.ಕೋಲಾರಕ್ಕೆ ನಿಮ್ಮ ಕೊಡುಗೆ ಏನು? ಟೊಮಾಟೊ ಬೆಳೆಗಾರರಿಗೆ ನೆರವಾಗಿದ್ದು ನಾನು ಎಂದು ಹೇಳಿದರು.
ಜಮೀರ್ ಹೇಳಿಕೆಗೆ ರೇವಣ್ಣ ಪ್ರತಿಕ್ರಿಯೆ
ಜೆಡಿಎಸ್ ಗೆ ಮತ ಹಾಕಿದ್ರೆ ಅದು ಬಿಜೆಪಿಗೆ ಹಾಕಿದ ಹಾಗೆ ಎಂಬ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಸನದಲ್ಲಿ ಟಾಂಗ್ ನೀಡಿದ್ದಾರೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಬಸ್ ನಿಂತೋಗಿದೆ. ಎಷ್ಟು ರಾಜ್ಯದಲ್ಲಿದ್ದ ಕಾಂಗ್ರೆಸ್ ಇವತ್ತು ಏನಾಗಿದೆ. ಎ ಟೀಂ, ಬಿ ಟೀಂ ಅನ್ನೋದಾದ್ರೆ, ಒಬ್ಬ ಬಿಜೆಪಿಯ ಸಂಸದರು ಹೇಳ್ತಿದ್ದಾರೆ.
ದೇವೇಗೌಡರು ಸೋಲಿಸಲು 83 ಸಾವಿರ ವೋಟು ಹಾಕಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ವೋಟು ಹಾಕಿ ಅಂತಾ ಬಿಜೆಪಿ ಸಂಸದರು ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್‌ಗೆ ರೇವಣ್ಣ ಪ್ರಶ್ನೆ
ಇನ್ನೊಂದು ಕಡೆ ಆರು ಜನ ಎಂಎಲ್‌ಎಗಳು ಇದ್ದಾರೆ ಅಂತ ಬಿಜೆಪಿ ಮುಖಂಡರು ಹೇಳ್ತಾರೆ. ಆರು ಜನ ಎಂಎಲ್‌ಎ ಇದ್ರು ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಕೋಲಾರ, ಮಂಡ್ಯ, ತುಮಕೂರಿನಲ್ಲಿ ಕೆಲಸ ಮಾಡದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ತಾಕತ್ ಇದೆಯಾ ಕಾಂಗ್ರೆಸ್ ಮುಖಂಡರಿಗೆ ಎಂದು ಹೆಚ್.ಡಿ.ರೇವಣ್ಣ ಪ್ರಶ್ನೆ ಮಾಡಿದರು.
ಇದನ್ನೂ ಓದಿ: BBMP: ತೆರಿಗೆ ವಿನಾಯ್ತಿ ಪಡೆಯುತ್ತಿದ್ದ ಆಸ್ತಿ ಮಾಲೀಕರಿಗೆ ಶಾಕ್ ನೀಡಲು ಬಿಬಿಎಂಪಿ ಪ್ಲಾನ್!
ಪ್ರಾದೇಶಿಕ ಪಕ್ಷಗಳನ್ನು ತೆಗೆಯಲು ಹೋಗಿ ಕಾಂಗ್ರೆಸ್ ಸತ್ತು ಹೋಗಿದೆ. 2023 ಕ್ಕೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ನೋಡಿ ಯಾವುದು ಬಿ ಟೀಂ, ಯಾವುದು ಎ ಟೀಂ ಎಂದು ಜನವೇ ತೀರ್ಮಾನ ಮಾಡ್ತಾರೆ. ಅವರಿಗೆ ಏನಾಗಿದೆ ಅಂದರೆ ಮುಸಲ್ಮಾನರಿಗೂ ಟೋಪಿ ಹಾಕಿದ್ರು. ಹಾಸನದಲ್ಲಿ ಎ ಟೀಂ ಬಿ ಟೀಂ ಅಂದು ಬಿಜೆಪಿ ಗೆಲ್ತು. ತುಮಕೂರಿನಲ್ಲಿ ದೇವೇಗೌಡರ ಮೇಲೆ ಎ ಟೀಂ ಬಿ ಟೀಂ ಅಂದ್ರು, ಓಪನ್ ಆಗಿ ಮಾಡಿದ್ರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ