Ramanagara: ಮಳೆ ಅವಾಂತರಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಕಾರಣ: HDK ಆರೋಪ

ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಕೆರೆ ಕೋಡಿ ಡ್ಯಾಮೇಜ್ ವಿಚಾರವಾಗಿ ಮಾತನಾಡಿ DBL ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿ ಇದು. ಬೆಂಗಳೂರು - ಮೈಸೂರು ನೂತನ 275 ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿ ನಡೆದಿವೆ.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ರಾಮನಗರ : ಚನ್ನಪಟ್ಟಣ (Channaptna) ತಾಲೂಕಿನ ತಿಟ್ಟಮಾರನಹಳ್ಳಿ, ಚಕ್ಕೆರೆ, ಹೊಂಗನೂರು, ನಗರದ ಬೀಡಿ ಕಾಲೋನಿ ಸೇರಿದಂತೆ ಹಲವೆಡೆ ಮಳೆಯಿಂದಾಗಿ (Rainfall) ಭಾರೀ ನಷ್ಟದ ಜೊತೆಗೆ ಅವಾಂತರವಾಗಿರುವ ಪರಿಣಾಮ ಕ್ಷೇತ್ರದ ಶಾಸಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಚನ್ನಪಟ್ಟಣದಲ್ಲಿ ಮಳೆಯಿಂದ ಹಾನಿಯಾದ ತಿಟ್ಟಮಾರನಹಳ್ಳಿ, ಸೇರಿದಂತೆ ಎಲ್ಲಾ ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ, ಈ ಬಾರಿ ಅತ್ಯಂತ ದೊಡ್ಡ ಮಟ್ಟದಲ್ಲಿ ಮಳೆ (Rain) ಬಂದಿದೆ. ಹಲವಾರು ಕೆರೆ, ಕಟ್ಟೆಗಳು ಕೋಡಿ ಬಿದ್ದಿವೆ. ನಗರ ಪ್ರದೇಶಗಳಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಕಳೆದ ಬಾರಿಯೂ ಎಪಿಎಂಸಿಗಳು ಮಳೆಯಿಂದಾಗಿ ಅನಾಹುತವಾಗಿತ್ತು. ಅಲ್ಲಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅಂತಹ ಡ್ಯಾಮೇಜ್ ಆಗಿಲ್ಲ. ಕುಡಿಯುವ ನೀರು ಕಟ್ಟೆಯ ನೀರು ರಭಸವಾಗಿ ಹರಿದು ರಸ್ತೆ ಬಿರುಕು ಬಿಟ್ಟಿದೆ. ಲೋಕೋಪಯೋಗಿ ಇಲಾಖೆ ಹಾಗೂ ನಗರ ಸಭೆ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸೂಚನೆ ನೀಡಿದ್ದೀನಿ ಎಂದರು.

ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ

ನಮಗೆ ತಾತ್ಕಾಲಿಕ ಪಾರಿಹಾರ ಬೇಕಿಲ್ಲ ಶಾಶ್ವತ ಪರಿಹಾರ ಆಗಬೇಕಿದೆ. ಚನ್ನಪಟ್ಟಣದಲ್ಲಿ ಬೀಡಿ ಕಾಲೋನಿ, ತಿಟ್ಟಮಾರನಹಳ್ಳಿ, ಗಾಂಧಿ ಗ್ರಾಮಸೇರಿ ವಿವಿಧೆಡೆ ಅನಾಹುತ ಆಗಿರೋದು ಗಮನಕ್ಕೆ ಬಂದಿದೆ. ಗಾಂಧಿ ಗ್ರಾಮದ ದುಸ್ಥಿತಿಗೆ ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಕಾರಣ. ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆದಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಕಿಡಿಕಾರಿದರು.

ಇದನ್ನೂ ಓದಿ:  Kodagu: ನಿಷೇಧಾಜ್ಞೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಕೋಟ್ಯಂತರ ನಷ್ಟ; 4 ದಿನದಲ್ಲಿ ಸುಮಾರು 4 ಕೋಟಿ

ತುಂಬಿದ ಹೊಂಗನೂರು ಕೆರೆ

ಕಳೆದ ಬಾರಿಯೂ ಈ ವಿಚಾರವಾಗಿ ಅಧಿಕಾರಿಗಳಿಗೆ ಬೈಯ್ದಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡಿದ್ರು. ಗಾಂಧಿ ಗ್ರಾಮ ಅಲ್ಲದೇ ತಿಟ್ಟಮಾರನಹಳ್ಳಿ, ಹೊಂಗನೂರು ಕೆರೆ ತುಂಬಿ ಹರಿಯುತ್ತಿದೆ. ಲಾಳ ಘಟ್ಟದಲ್ಲಿ ಸೇತುವೆ ಸಣ್ಣ ಪೈಪ್​​ಲೈನ್ ಇದ್ದು ನೀರು ಹರಿಯಲು ತೊಂದರೆಯಾಗಿದೆ.ಪೈಪ್ ಒಡೆಯಬೇಕೆಂದು ಜನರ ಒತ್ತಡ ಏನಿತ್ತು ತಕ್ಷಣವೇ ಹೊಸ ಸೇತುವೆ ಮಾಡಬೇಕು.‌ ಇಲ್ಲದಿದ್ದರೆ ಹತ್ತು, ಹದಿನೈದು ಹಳ್ಳಿಗಳಿಗೆ ಓಡಾಟ ನಡೆಸಲು ತೊಂದರೆಯಾಗುತ್ತದೆ ಎಂದರು. ಇನ್ನು ಸರ್ಕಾರದಿಂದ ನಷ್ಟ ಹೊಂದಿರುವ ಕುಟುಂಬಕ್ಕೆ 10 ಸಾವಿರ ಪರಿಹಾರ ಒಂದು ಭಾಗ, ನಾನು ವಯಕ್ತಿಕವಾಗಿ ಸಹಾಯ ಮಾಡ್ತೇನೆಂದು ಭರವಸೆ ನೀಡಿದರು.

DBL ಕಂಪನಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಕೆರೆ ಕೋಡಿ ಡ್ಯಾಮೇಜ್ ವಿಚಾರವಾಗಿ ಮಾತನಾಡಿ DBL ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿ ಇದು. ಬೆಂಗಳೂರು - ಮೈಸೂರು ನೂತನ 275 ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿ ನಡೆದಿವೆ.

ನಾನು ಸಿಎಂ ಆಗಿದ್ದಾಗ ಈ ಒಂದು ಯೋಜನೆ ತ್ವರಿತಗತಿಯಲ್ಲಿ ಆಗಬೇಕೆಂದು ಸಭೆಗಳನ್ನ ನಡೆಸಿದ್ದೆ. ಕೇಂದ್ರ ಸರ್ಕಾರದ ಮಟ್ಟದಲ್ಲೇ ತಪ್ಪುಗಳನ್ನ ಸರಿಪಡಿಸುವ ನಿರ್ಧಾರವಾಗಬೇಕು.ಬೆಂಗಳೂರು - ಮೈಸೂರು ಹೆದ್ದಾರಿ ಕೇಂದ್ರ ಸರ್ಕಾರದ ಯೋಜನೆ. ಪ್ರತಿಯೊಂದು ಅಲ್ಲಿಗೇ ಕಳಿಸಿ ನಿರ್ಧಾರವಾಗಬೇಕು. ಟೆಕ್ನಿಕಲ್ ಪ್ರಾಬ್ಲಮ್ ಸರಿಪಡಿಸಿಕೊಳ್ಳಲು ಕೇಂದ್ರ ಅನುಮತಿ ಬೇಕಿದೆ. ಈ ಬಗ್ಗೆ ಖಡಾಖಂಡಿತವಾಗಿ ಕೇಂದ್ರದ ಗಮನ ಸೆಳೆಯುವೆ.

ಸೆಪ್ಟೆಂಬರ್ 5ರಂದು ದೆಹಲಿಗೆ ಪ್ರಯಾಣ

ಸೆಪ್ಟೆಂಬರ್ 5ನೇ ತಾರೀಖು ದೆಹಲಿಗೆ  ಹೋಗುತ್ತಿದ್ದೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನ ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುವೆ. ಕಳೆದ ಒಂದು ತಿಂಗಳಿನಿಂದ ಮಳೆ ನೀರು ನಿಂತು ಅನಾಹುತಗಳಾಗಿವೆ. ಇದಕ್ಕೆ ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯೇ ಕಾರಣ. ಇದರ ಸಂಪೂರ್ಣ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ.

ಗಡ್ಕರಿಯವರನ್ನ ಭೇಟಿ ಮಾಡಿ ಅವೈಜ್ಞಾನಿಕ ಕಾಮಗಾರಿ ವಿಚಾರ ತಿಳಿಸುವೆ. ಸರ್ವಿಸ್ ರಸ್ತೆಯ ಅನಾಹುತಗಳನ್ನ ನಮ್ಮ ಕಣ್ಣಾರೆ ಕಾಣುತ್ತಿದ್ದೇವೆ. ಸರ್ವಿಸ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ, ಅಂಡರ್ ಪಾಸ್ ಗಳಲ್ಲಿ ಮೂರು, ನಾಲ್ಕು ಅಡಿ ಮಳೆ ನೀರು ನಿಂತು ತೊಂದರೆಯಾಗುತ್ತಿದೆ. ಇವೆಲ್ಲಾ ಸಮಸ್ಯೆ ಆಗೋದಕ್ಕೆ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಒಂದು ಭಾಗ.

ಇದನ್ನೂ ಓದಿ:  Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಮಹತ್ವದ ತುರ್ತು ಸೂಚನೆ

ಯುಜಿಡಿ ಕಾಮಗಾರಿ

ಅದರ ಜೊತೆಗೆ ಚನ್ನಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಸಹ ಆಗಬೇಕಿದೆ. ಯುಜಿಡಿ ಕಾಮಗಾರಿ ಅನುಮತಿಗಾಗಿ ಸರ್ಕಾರಕ್ಕೆ ಕೋರಿದ್ದೇನೆ. ಅನುಮತಿ ಪಡೆಯಲು ನಿರಂತರವಾಗಿ ನಾನು ಸಹ ಪ್ರಯತ್ನ ಮಾಡುತ್ತಿದ್ದೇನೆ ಎಂದರು‌.
Published by:Mahmadrafik K
First published: