ಇಂದು ಸಂಜೆ ಶೃಂಗೇರಿಗೆ ತೆರಳಲಿರುವ ಮಾಜಿ ಸಿಎಂ ಕುಮಾರಸ್ವಾಮಿ; ನಾಳೆ ಹೋಮ-ಯಾಗದಲ್ಲಿ ಭಾಗಿ

ಇಂದು ರಾತ್ರಿ ಶೃಂಗೇರಿಯಲ್ಲಿ ಉಳಿದುಕೊಳ್ಳಲಿರುವ ಎಚ್​.ಡಿ. ಕುಮಾರಸ್ವಾಮಿ, ನಾಳೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿಸಲಿದ್ದಾರೆ.

ಎಚ್​​.ಡಿ ಕುಮಾರಸ್ವಾಮಿ

ಎಚ್​​.ಡಿ ಕುಮಾರಸ್ವಾಮಿ

  • Share this:
ಬೆಂಗಳೂರು (ಜ. 19): ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಇಂದು ಸಂಜೆ ಶೃಂಗೇರಿಗೆ ತೆರಳಲಿದ್ದಾರೆ. 2 ದಿನಗಳ ಕಾಲ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿರುವ ಎಚ್​ಡಿಕೆ ಮಂಗಳವಾರ ಸಂಜೆ ಕಲಬುರ್ಗಿಗೆ ತೆರಳಲಿದ್ದಾರೆ.

ಇಂದು ರಾತ್ರಿ ಶೃಂಗೇರಿಯಲ್ಲಿ ಉಳಿದುಕೊಳ್ಳಲಿರುವ ಎಚ್​.ಡಿ. ಕುಮಾರಸ್ವಾಮಿ, ನಾಳೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿಸಲಿದ್ದಾರೆ. ಮಂಗಳವಾರ ಸಂಜೆ ಕಲಬುರ್ಗಿಗೆ ತೆರಳಲಿರುವ ಕುಮಾರಸ್ವಾಮಿ ಕಲಬುರ್ಗಿಯಲ್ಲಿ ನಡೆಯಲಿರುವ ಸಿಎಎ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ಸಿಕ್ಕಿದೆ, ವಿದೇಶದಿಂದ ವಾಪಾಸಾದ ಮೇಲೆ ಪಟ್ಟಿ ಪ್ರಕಟ; ಸಿಎಂ ಭರವಸೆ

ನಾಳೆ ರಾತ್ರಿಯೂ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದು, ಮಂಗಳವಾರ ಬೆಳಗ್ಗೆ ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿರುವ ಎಚ್​.ಡಿ. ಕುಮಾರಸ್ವಾಮಿ, ಬಳಿಕ ಕಲಬುರ್ಗಿಯಲ್ಲಿ ನಡೆಯಲಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೀದರ್ ಮೂಲಕ ಬೆಂಗಳೂರಿಗೆ ಮರಳಲಿದ್ದಾರೆ.

2 ದಿನಗಳ ಹಿಂದಷ್ಟೇ ದೇವೇಗೌಡರು ತಮ್ಮ ಪತ್ನಿ ಸಮೇತ ಶೃಂಗೇರಿಗೆ ತೆರಳಿ ವಿಶೇಷ ಪೂಜೆ ಮತ್ತು ಯಾಗ ನಡೆಸಿದ್ದರು. ಶುಕ್ರವಾರ ಶೃಂಗೇರಿಯಲ್ಲಿ ದೇವೇಗೌಡರು ಚಂಡಿಕಾ ಯಾಗ ನಡೆಸಿದ್ದರು. 5 ದಿನಗಳ ಕಾಲ ನಡೆಯುವ ಚಂಡಿಕಾ ಯಾಗದಲ್ಲಿ ನಾಳೆ ಎಚ್​.ಡಿ. ಕುಮಾರಸ್ವಾಮಿ ಕೂಡ ಪಾಲ್ಗೊಳ್ಳಲಿದ್ದಾರೆ. ದೇವೇಗೌಡರ ಕುಟುಂಬಸ್ಥರು ಆಗಾಗ ಶೃಂಗೇರಿ  ಶಾರದಾಂಬೆ ದೇವಾಲಯಕ್ಕೆ ಬಂದು ಪೂಜೆ, ಹೋಮ-ಹವನಗಳನ್ನು ಸಲ್ಲಿಸುತ್ತಲೇ ಇರುತ್ತಾರೆ.

 

 
First published: