HOME » NEWS » State » HD KUMARASWAMY TEASES DEVENDRA FADNAVIS AS HE RESIGNS TO MAHARASHTRA CM POST SCT

ಮಾಡಿದ್ದುಣ್ಣೋ ಮಹರಾಯ; ಸಿಎಂ ಸ್ಥಾನದಿಂದ ಕೆಳಗಿಳಿದ ಫಡ್ನವೀಸ್​ ಕಾಲೆಳೆದ ಎಚ್​.ಡಿ. ಕುಮಾರಸ್ವಾಮಿ

ನಮ್ಮ ರಾಜ್ಯದ ಅನರ್ಹರಿಗೆ ಮುಂಬೈನಲ್ಲಿ ಆತಿಥ್ಯ ಕೊಟ್ಟವರೂ ದೇವೇಂದ್ರ ಫಡ್ನವೀಸ್ ಅವರೇ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ. ಸದ್ಯದಲ್ಲೇ ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೇ ಪರಿಸ್ಥಿತಿ ಬರಲಿದೆ ಎಂದು ಎಚ್​ಡಿಕೆ ವ್ಯಂಗ್ಯವಾಡಿದ್ದಾರೆ.

Sushma Chakre | news18-kannada
Updated:November 26, 2019, 8:54 PM IST
ಮಾಡಿದ್ದುಣ್ಣೋ ಮಹರಾಯ; ಸಿಎಂ ಸ್ಥಾನದಿಂದ ಕೆಳಗಿಳಿದ ಫಡ್ನವೀಸ್​ ಕಾಲೆಳೆದ ಎಚ್​.ಡಿ. ಕುಮಾರಸ್ವಾಮಿ
ಎಚ್​.ಡಿ. ಕುಮಾರಸ್ವಾಮಿ- ದೇವೇಂದ್ರ ಫಡ್ನವೀಸ್
  • Share this:
ಬೆಂಗಳೂರು (ನ. 26): ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನಾಲ್ಕೇ ದಿನದಲ್ಲಿ ರಾಜೀನಾಮೆ ನೀಡಿದ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಪರಿಸ್ಥಿತಿಗೆ ಸಂತಾಪ ಸೂಚಿಸಿರುವ ಕರ್ನಾಟಕದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ 'ಮಾಡಿದ್ದುಣ್ಣೋ ಮಹರಾಯ' ಎಂಬ ಗಾದೆ ಮಾತನ್ನು ನೆನಪಿಸಿಕೊಳ್ಳುವ ಮೂಲಕ ಫಡ್ನವೀಸ್ ಅವರ ಕಾಲೆಳೆದಿದ್ದಾರೆ.

'ಸಿಎಂ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ ವಿಚಾರ ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ನನಗೆ ಖುಷಿ ಕೊಡಬೇಕಿತ್ತು.ಯಾಕೆಂದರೆ ನಮ್ಮ ಮೈತ್ರಿ ಸರ್ಕಾರವನ್ನು ಕೆಡವಲು ಮುಖ್ಯ ಕಾರಣ ಅವರೇ ಅಲ್ಲವೇ? ನಮ್ಮ ಸರ್ಕಾರ ಕೆಡವಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು. ನಮ್ಮ ರಾಜ್ಯದ ಅನರ್ಹರಿಗೆ ಮುಂಬೈನಲ್ಲಿ ಆತಿಥ್ಯ ಕೊಟ್ಟವರೂ ದೇವೇಂದ್ರ ಫಡ್ನವೀಸ್ ಅವರೇ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ. ಸದ್ಯದಲ್ಲೇ ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೇ ಪರಿಸ್ಥಿತಿ ಬರಲಿದೆ' ಎಂದು ಎಚ್​ಡಿಕೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅತಿ ಕಡಿಮೆ ಅವಧಿಯಲ್ಲಿ ಸಿಎಂ ಖುರ್ಚಿಯಿಂದ ಇಳಿದವರು ಫಡ್ನವೀಸ್ ಮಾತ್ರ ಅಲ್ಲ, ಇಲ್ಲಿದೆ ಸಂಪೂರ್ಣ ಪಟ್ಟಿ...'ಮಾಡಿದ್ದುಣ್ಣೋ ಮಹರಾಯ ಎಂಬುದು ಲೋಕ ರೂಢಿ. ಮಾಡಿದ್ದರ ಪ್ರತಿಫಲವನ್ನು ಫಡ್ನವೀಸ್ ಉಣ್ಣುತ್ತಿದ್ದಾರೆ.ಕಾಲ ಚಕ್ರಕ್ಕೆ ಸಿಲುಕಿ ನಲುಗಿದ್ದಾರೆ. ಅಧಿಕಾರ ದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಹಪಿ, ಸರ್ಕಾರಗಳನ್ನು ಉರುಳಿಸುವುದು, ಮತ್ತೆ ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ' ಎಂದು ಟ್ವಿಟ್ಟರ್​ನಲ್ಲಿ ಎಚ್​.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.ಕರ್ನಾಟಕದ 17 ಜೆಡಿಎಸ್​- ಕಾಂಗ್ರೆಸ್ ಶಾಸಕರು ಮೈತ್ರಿ ಸರ್ಕಾರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂಬೈನ ರೆನೈಸೆನ್ಸ್​ ಹೋಟೆಲ್​ನಲ್ಲಿ ಅವರನ್ನು ಇರಿಸಲಾಗಿತ್ತು. ಅವರನ್ನು ಭೇಟಿಯಾಗಲು ಯಾವ ನಾಯಕರಿಗೂ ಅವಕಾಶ ನೀಡದ ಕಾರಣ ಖುದ್ದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರೇ ಜೆಡಿಎಸ್​ ಶಾಸಕರೊಂದಿಗೆ ಮುಂಬೈಗೆ ತೆರಳಿದ್ದರು. ಆದರೆ, ಬೆಳಗ್ಗೆಯಿಂದ ಸಂಜೆಯವರೆಗೂ ಅವರನ್ನು ಗೇಟಿನ ಎದುರೇ ನಿಲ್ಲಿಸಿ ನಂತರ ಪೊಲೀಸರು ವಶಕ್ಕೆ ಪಡೆದಿದ್ದರು. ಮಹಾರಾಷ್ಟ್ರದ ಬಿಜೆಪಿ ನಾಯಕರು, ಶಾಸಕರು ಕರ್ನಾಟಕದ ಅನರ್ಹ ಶಾಸಕರಿಗೆ ಕಾವಲಾಗಿ ನಿಂತಿದ್ದರು. ಕೊನೆಗೂ ಅನರ್ಹ ಶಾಸಕರ ಜೊತೆ ಸಂಧಾನ ಸಾಧ್ಯವಾಗದ ಕಾರಣ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
First published: November 26, 2019, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories