• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi: ಆಗ ಬರದವರು ಈಗ ಕೂಲಿಂಗ್ ಗ್ಲಾಸ್, ಹ್ಯಾಟ್​ ಬೂಟು ಹಾಕೊಂಡು ಬಂದ್ರು; HDK ವ್ಯಂಗ್ಯ

PM Modi: ಆಗ ಬರದವರು ಈಗ ಕೂಲಿಂಗ್ ಗ್ಲಾಸ್, ಹ್ಯಾಟ್​ ಬೂಟು ಹಾಕೊಂಡು ಬಂದ್ರು; HDK ವ್ಯಂಗ್ಯ

ಹೆಚ್ ಡಿ ಕುಮಾರಸ್ವಾಮಿ ಮತ್ತು ಮೋದಿ

ಹೆಚ್ ಡಿ ಕುಮಾರಸ್ವಾಮಿ ಮತ್ತು ಮೋದಿ

ಇವತ್ತು ಸಫಾರಿ ಹಾಕಿಕೊಂಡು ಸಫಾರಿ ಮಾಡಲು ಬಂದಿದ್ದಾರೆ. ಇದರ ಬಗ್ಗೆ ನಾಡಿನ ಜನ ತೀರ್ಮಾನ ಮಾಡಬೇಕಿದೆ. ಇದರಿಂದ ನಾಡಿನ ಜನತೆಗೆ ಏನಾದ್ರೂ ಉಪಯೋಗ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

  • Share this:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯ ಪ್ರವಾಸದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹ (Flood) ಬಂದಾಗ ಬರಲಿಲ್ಲ. ಕೋವಿಡ್​​​ನಿಂದ (COVID Pandemic) ಜನ ಬೀದಿಗೆ ಬಂದಾಗ ಮೋದಿ ಬರಲಿಲ್ಲ. ಇವತ್ತು ಸಫಾರಿ ಹಾಕಿಕೊಂಡು ಸಫಾರಿ ಮಾಡಲು ಬಂದಿದ್ದಾರೆ. ಇದರ ಬಗ್ಗೆ ನಾಡಿನ ಜನ ತೀರ್ಮಾನ ಮಾಡಬೇಕಿದೆ. ಇದರಿಂದ ನಾಡಿನ ಜನತೆಗೆ ಏನಾದ್ರೂ ಉಪಯೋಗ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.


ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು ನಿಜ. ಅದರ ಜೊತೆಗೆ ಮಾನವರನ್ನು ಕೂಡಾ ರಕ್ಷಣೆ ಮಾಡಬೇಕಲ್ವಾ‌ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಳೆದ ಐದಾರು ತಿಂಗಳಲ್ಲಿ ವನ್ಯಜೀವಿಗಳ ದಾಳಿಗೆ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ.


ಆ ಕುಟುಂಬಗಳ ಪರಿಸ್ಥಿತಿ ಈಗ ಏನಾಗಿದೆ. ಯಾವುದಾದರೂ ಒಂದು ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರಾ ಪ್ರಧಾನಿಗಳು ಎಂದು ಕೇಳಿದರು. ಕೂಲಿಂಗ್ ಗ್ಲಾಸ್ ಹಾಕಿ, ಹ್ಯಾಟು ಬೂಟು ಹಾಕಿಕೊಂಡು ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದರು.




ಡಿಕೆ ಶಿವಕುಮಾರ್ ಪ್ರತಿಕ್ರಿಯೆ


ಮೋದಿ ಸರ್ ಪ್ರಜಾಪ್ರಭುತ್ವ ನಮ್ಮಿಂದನೇ ಬಂತು ಅಂತ ಹೇಳ್ತಾರೆ. ಅರವತ್ತು ವರ್ಷದಲ್ಲಿ ಕಾಂಗ್ರೆಸ್‌ ಕೊಡುಗೆ ತೆಗೆದುಹಾಕೋದು ಅವರ ಉದ್ದೇಶ. ಹಲವು ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ. ಕಾಡಿಗೆ ಅವರು ಹುಲಿಯನ್ನಾದರೂ ಬಿಡಲಿ, ಸಿಂಹವಾದರೂ ಬಿಡಲಿ. ಚುನಾವಣೆ ಇದೆ ಅಂತ ಪದೇ ಪದೇ ನೆಪ ಮಾಡ್ಕೊಂಡು ಬರ್ತಿದಾರೆ ಮೋದಿಯವರು ಬರಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: DK Shivakumar: 'ಹೋರಾಟಗಾರರು, ಕಲಾವಿದರು ಧ್ವನಿ ಎತ್ತುತ್ತಿಲ್ಲ' -ಮಹಾರಾಷ್ಟ್ರ ವಿಚಾರವಾಗಿ ಡಿಕೆಶಿ ಸ್ಫೋಟಕ ಹೇಳಿಕೆ!


ಕಾಂಗ್ರೆಸ್ ಮೂರನೇ ಪಟ್ಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಡಿಕೆ ಶಿವಕುಮಾರ್, ಬಿಜೆಪಿಯವರ ಪಟ್ಟಿ ಮೊದಲು ರಿಲೀಸ್ ಆಗಲಿ. ಅವರನ್ನು ಕೇಳಿ ಯಾವಾಗ ಪಟ್ಟಿ ಪ್ರಕಟ ಅಂತ? ಅವರ ಪಟ್ಟಿ ಬಂದ ಮೇಲೆ ನೋಡೋಣ ಎಂದರು.

First published: