ಇವನಿಗೆ ಮನುಷ್ಯತ್ವ ಇದೆಯಾ?; ಕೆ.ಆರ್​.ಪೇಟೆಯಲ್ಲಿ ನಾರಾಯಣಗೌಡ ವಿರುದ್ಧ ಎಚ್​ಡಿಕೆ ವಾಗ್ದಾಳಿ

ಎಲ್ಲಿ ನಮ್ಮ‌ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲ್ಲಿಕೆ ಸಾಧ್ಯವೋ ಅವರನ್ನು ಗೆಲ್ಲಿಸೋದು ನನ್ನ ಮೊದಲ ಆದ್ಯತೆ. ನನ್ನ ಅಭ್ಯರ್ಥಿ ಗೆಲ್ಲದೆ ಇದ್ದ ಕಡೆ ಅನರ್ಹರನ್ನು ಸೋಲಿಸೋದು ನನ್ನ ಆದ್ಯತೆ. ಜನಪರವಾಗಿದ್ದ ಮೈತ್ರಿ ಸರ್ಕಾರ ಬೀಳಿಸಿದವರನ್ನು ಸೋಲಿಸೋದೆ ನಮ್ಮ ಗುರಿ‌ ಎಂದು ಹೇಳಿದರು.

HR Ramesh | news18-kannada
Updated:November 14, 2019, 8:50 PM IST
ಇವನಿಗೆ ಮನುಷ್ಯತ್ವ ಇದೆಯಾ?; ಕೆ.ಆರ್​.ಪೇಟೆಯಲ್ಲಿ ನಾರಾಯಣಗೌಡ ವಿರುದ್ಧ ಎಚ್​ಡಿಕೆ ವಾಗ್ದಾಳಿ
ಎಲ್ಲಿ ನಮ್ಮ‌ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲ್ಲಿಕೆ ಸಾಧ್ಯವೋ ಅವರನ್ನು ಗೆಲ್ಲಿಸೋದು ನನ್ನ ಮೊದಲ ಆದ್ಯತೆ. ನನ್ನ ಅಭ್ಯರ್ಥಿ ಗೆಲ್ಲದೆ ಇದ್ದ ಕಡೆ ಅನರ್ಹರನ್ನು ಸೋಲಿಸೋದು ನನ್ನ ಆದ್ಯತೆ. ಜನಪರವಾಗಿದ್ದ ಮೈತ್ರಿ ಸರ್ಕಾರ ಬೀಳಿಸಿದವರನ್ನು ಸೋಲಿಸೋದೆ ನಮ್ಮ ಗುರಿ‌ ಎಂದು ಹೇಳಿದರು.
  • Share this:
ಮಂಡ್ಯ: ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಅನುದಾನ ನೀಡಲಿಲ್ಲ ಎಂದು ಅನರ್ಹ ಶಾಸಕ ಹೇಳುತ್ತಾರೆ. ಸರ್ಕಾರದ ಕಡತ‌ ತೆಗೆದರೆ ಎಲ್ಲಾ ವಿಷಯ ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಎಚ್​.ಡಿ.ಕುಮಾರಸ್ವಾಮಿ, ನಾನು ಫೆಬ್ರವರಿ 8ರಂದು ನಾನು ಬಜೆಟ್ ಮಂಡನೆ ಮಾಡಲು ಅಲ್ಲಿ ಕುತ್ಕೊಂಡು ಹಗಲು ರಾತ್ರಿ ಒದ್ದಾಡುತ್ತಿದೆ. ಈ ಪುಣ್ಯಾತ್ಮ ಅದೆಲ್ಲೋ ಬಾಂಬೆಯಲ್ಲಿ ಮಲ್ಕೊಂಡು ಆಸ್ಪತ್ರೇಲಿ ಮಲಗಿದ್ದೀನಿ‌ ಅಂತಿದ್ದ.  ಅದೇನೋ ಹೋಟೆಲೋ, ಆಸ್ಪತ್ರೇನೋ ಗೊತ್ತಿಲ್ಲ ನನಗೆ ಎಲ್ಲಿ ಮಲಗಿದ್ದ ಅಂತಾ. ಇವನು ಯಾವ ಪಕ್ಷದಲ್ಲಿದ್ದುಕೊಂಡು ಕೆಲಸ ಆಗ್ಬೇಕು ಅಂತಾ ಬಂದಿದ್ದಾ ನನ್ನಹತ್ರ. ಇಲ್ಲಿ ಬಂದು ಭಾಷಣ ಹೊಡ್ಕೊಂಡು ತಿರುಗ್ತಾ ಇರೋದನ್ನ ನೋಡಿದ್ದೀನಿ. ಈಗ ಯಡಿಯೂರಪ್ಪ ಅವರನ್ನು ಕರೆಸ್ಕೊಂಡು ಇಂದ್ರ‌-ಚಂದ್ರ ಅಂತೇಳ್ಕೊಂಡು‌ ಯಡಿಯೂರಪ್ಪನ್ನೋರು ಅನುದಾನ ಸ್ಯಾಂಕ್ಷನ್ ಮಾಡಿರೋದು ಅಂತಾ ಭಾಷಣ ಮಾಡ್ತಿಲ್ವೆ. ಸರ್ಕಾರದ ಕಡತ ತೆಗೆದು ನೋಡುದ್ರೆ ಗೊತ್ತಾಗುತ್ತೆ ಯಾವ ಕಾಲದಲ್ಲಿ ಕ್ಲಿಯರ್ ಆಗಿರೋದು‌ ಅಂತಾ ಎಂದು ನಾರಾಯಣಸ್ವಾಮಿ ವಿರುದ್ಧ ಹರಿಹಾಯ್ದರು.

ಮೊನ್ನೆ ಗುದ್ದಲಿಪೂಜೆ ಮಾಡಿ ಅದೇನೋ ದೊಡ್ಡ ಸಾಧನೆ ಮಾಡಿದ್ದೀನಿ ಅಂದುಕೊಂಡಿದ್ದಾನೆ. ಕುಮಾರಸ್ವಾಮಿ ಏನು ಕೊಡಲಿಲ್ಲ, ಕಾಂಪೌಂಡ್ ಹಾಕುವುದಕ್ಕೂ ದುಡ್ಡು ಕೊಡಲಿಲ್ಲ ಅಂತಾ ಹೇಳಿದ್ದಾನೆ. ನಾನು ಏನು ಕೊಟ್ಟಿದ್ದೀನಿ ಅನ್ನೋದು  ಸರ್ಕಾರದ ದಾಖಲಾತಿ ಕಡತ ತೆಗೆದ್ರೆ ಎಲ್ಲವು ಗೊತ್ತಾಗುತ್ತೆ ಎಂದರು.

2006ರಲ್ಲೇ ಕೆ.ಆರ್.ಪೇಟೆ ತಾಲೂಕಿಗೆ 500 ಕೋಟಿ ಕೊಟ್ಟಿದ್ದೆ. ಅಂತದ್ರಲ್ಲಿ ಇವನ ಕೈಲಿ ಹೇಳಿಸಿಕೊಳ್ಳ ಬೇಕಾ ನಾನು. ಏನ್ ಚಮಚಗಿರಿ ಮಾಡ್ಕೊಂಡು ಈತ ನನ್ನ ಹತ್ರ ಬಂದು ಎರಡನೇ ಬಾರಿ ಟಿಕೆಟ್ ಕೇಳ್ದಾ. ಎರಡನೇ ಬಾರಿ ಮನೆಯವರಿಗೆ ನೋವು ಕೊಟ್ಕೊಂಡು ಈತನಿಗೆ ಟಿಕೆಟ್ ಕೊಟ್ಟೆ. ಈತನಿಗೆ ಮನುಷ್ಯತ್ವ ಇದೆಯಾ? ಅಂತಹವರ ಬಗ್ಗೆ ನಾನು ಉತ್ತರ ಕೊಡ್ಲಾ. ಈಗ ಎಲ್ಲವು ನಿಮ್ಮ‌ ಕೈಲಿದೆ ಆತನಿಗೆ ತಕ್ಕ ಪಾಠ ಕಲಿಸಿ ಎಂದು ಕಾರ್ಯಕರ್ಯತರಿಗೆ ಕರೆ ನೀಡಿದರು.

ಇದನ್ನು ಓದಿ: ಕರ್ನಾಟಕ ಉಪಚುನಾವಣೆ: 10 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿ ಪಟ್ಟಿ ಪ್ರಕಟ

15 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕ್ತಾ ಇದ್ದೀವಿ. ಆದರೆ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿದ್ದೀವಿ. 14 ಕ್ಷೇತ್ರದಲ್ಲಿ ಅನರ್ಹ ಶಾಸಕರು ಸೋಲಬೇಕು. ಅದಕ್ಕೆ ಮೊದಲ ಆದ್ಯತೆ. ಅದರಲ್ಲಿ ಎಲ್ಲಿ ನಮ್ಮ‌ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲ್ಲಿಕೆ ಸಾಧ್ಯವೋ ಅವರನ್ನು ಗೆಲ್ಲಿಸೋದು ನನ್ನ ಮೊದಲ ಆದ್ಯತೆ. ನನ್ನ ಅಭ್ಯರ್ಥಿ ಗೆಲ್ಲದೆ ಇದ್ದ ಕಡೆ ಅನರ್ಹರನ್ನು ಸೋಲಿಸೋದು ನನ್ನ ಆದ್ಯತೆ. ಜನಪರವಾಗಿದ್ದ ಮೈತ್ರಿ ಸರ್ಕಾರ ಬೀಳಿಸಿದವರನ್ನು ಸೋಲಿಸೋದೆ ನಮ್ಮ ಗುರಿ‌ ಎಂದು ಹೇಳಿದರು.

First published: November 14, 2019, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading