• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಂಸದನ ಚೇಲಾಗಳಿಂದ ರಾಮನಗರದಲ್ಲಿ ಅಕ್ರಮ ಮರಳುಗಾರಿಕೆ; ಡಿಕೆ ಸುರೇಶ್​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಸಂಸದನ ಚೇಲಾಗಳಿಂದ ರಾಮನಗರದಲ್ಲಿ ಅಕ್ರಮ ಮರಳುಗಾರಿಕೆ; ಡಿಕೆ ಸುರೇಶ್​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ.

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ.

ರಾಮನಗರದಲ್ಲಿ ಅವನ್ಯಾವನೋ ಎಂಪಿ ಇದ್ದಾನಲ್ಲ ಅವನ ಚೇಲಾಗಳು ಮರಳುಗಾರಿಕೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಸದ ಡಿಕೆ ಸುರೇಶ್​ ವಿರುದ್ಧ ಪರೋಕ್ಷವಾಗಿ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

  • Share this:

ರಾಮನಗರ (ನ. 5): ರಾಮನಗರದ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಕಾಂಗ್ರೆಸ್​ ಪಕ್ಷದ ಚೇಲಾಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವನ್ಯಾವನೋ ಎಂಪಿ ಇದ್ದಾನಲ್ಲ ಅವನ ಚೇಲಾಗಳು ಮರಳುಗಾರಿಕೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸಂಸದ ಡಿಕೆ ಸುರೇಶ್​ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರಳು ದಂಧೆ ಮಾಡುವುದಾದರೆ ನನ್ನ ಹತ್ತಿರ ಬರಬೇಡಿ ಎಂದಿದ್ದೇನೆ. ನಮ್ಮವರು ಇದ್ದ ಲಾರಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಈಗ ದಂಧೆ ನಡೆಸುವವರೂ ಇವರೇ, ಜನರಿಂದ ಪ್ರತಿಭಟನೆ ಮಾಡಿಸುವವರೂ ಇವರೇ. ಈ ರಾಜಕಾರಣವೆಲ್ಲ ನನ್ನ ಬಳಿ ನಡೆಯೋದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಆಡಳಿತದಲ್ಲಿ ಮರಳು ದಂಧೆ ಪ್ರಾರಂಭವಾಯ್ತು. ಅದನ್ನು ತಡೆಯಲು ನಾನು ಪ್ರಯತ್ನಪಟ್ಟರೂ ನಿಲ್ಲಿಸಲು ಆಗಲಿಲ್ಲ. ನಾನು ಶಾಸಕನಾಗಿದ್ದರೂ ಸರ್ಕಾರ ಅವರದ್ದು, ಆಟಗಳು ಅವರದ್ದೇ. ನನ್ನ ವಿರುದ್ಧ ಮಾತನಾಡುವವರು ನನ್ನ ಎದುರಿಗೆ ಬರಲಿ. ಅದಕ್ಕೆ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಕೆ ಸುರೇಶ್ ವಿರುದ್ಧ ಪರೋಕ್ಷವಾಗಿ ಹೆಚ್​ಡಿ ಕುಮಾರಸ್ವಾಮಿ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಯಡಿಯೂರಪ್ಪ, ಮೋದಿಯನ್ನು ಬೈದರೆ ಸಿಎಂ ಆಗುತ್ತೇವೆ ಎಂಬುದು ಖರ್ಗೆ, ಡಿಕೆಶಿ ಭ್ರಮೆ; ರೇಣುಕಾಚಾರ್ಯ ಲೇವಡಿ


ಅನಿತಾ ಕುಮಾರಸ್ವಾಮಿ ಅವರ ವಿರುದ್ಧವೂ ಪ್ರತಿಭಟನೆ ಮಾಡಿಸಿದ್ದರು. ಅಲ್ಲಿ ನಾನೇ ಇದ್ದಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದೆ. ಅವರ ತೆವಲಿಗೆ ನಮ್ಮ ವಿರುದ್ಧ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ರಾಮನಗರದಲ್ಲಿ ಈ ರಾಜಕಾರಣ ನಡೆಯಲ್ಲ. ಅವರು ಬೇಕಿದ್ದರೆ ಬೇರೆ ಕಡೆ ಈ ರೀತಿಯ ರಾಜಕಾರಣ ಮಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಹೆಸರು ಬಳಸದೇ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.


ಆರ್​ಆರ್​ ನಗರ, ಶಿರಾ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಹೆಚ್​ಡಿ ಕುಮಾರಸ್ವಾಮಿ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಅಲ್ಲೇನೂ ಸಮಸ್ಯೆಯಿಲ್ಲ. ಶಿರಾದಲ್ಲಿ ಬಿಜೆಪಿಯವರು ಹಣದ ಹೊಳೆ ಹರಿಸಿದ್ದಾರೆ, ಅದರಿಂದ ತಾವೇ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ. ಆದರೆ, ಅದೆಲ್ಲ ಶಿರಾದಲ್ಲಿ ನಡೆಯೋದಿಲ್ಲ. ಆರ್.ಆರ್. ನಗರದಲ್ಲಿ ಈಗಿನ ಚುನಾವಣಾ ವೆಚ್ಚದ ಕೊರತೆ ಇದೆ. ಅದರಿಂದ ಸ್ವಲ್ಪ ಯಡವಟ್ಟಾಗಿದೆ. ಆದರೆ ಎರಡೂ ಕಡೆ ಜೆಡಿಎಸ್​ ಪಕ್ಷದ ಗೌರವ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


(ವರದಿ: ಎ.ಟಿ. ವೆಂಕಟೇಶ್)

Published by:Sushma Chakre
First published: