ಪಾಕಿಸ್ತಾನಕ್ಕೆ ಸೀರೆ ತೆಗೆದುಕೊಂಡು ಹೋದ ಪ್ರಧಾನಿ ಯಾರು?: ಮೋದಿ ಪಾಕ್​​​ ಭೇಟಿ ಬಗ್ಗೆ ಬಿಜೆಪಿಗೆ ಎಚ್​​ಡಿಕೆ ಪ್ರಶ್ನೆ

ನನ್ನ ಅವಧಿಯಲ್ಲೂ ಇದೇ ಪೊಲೀಸ್​​ ಅಧಿಕಾರಿಗಳು ಇದ್ದರು. ಆದರೆ, ನಾನ್ಯಾವತ್ತು ಅಧಿಕಾರಗಳ ದುರ್ಬಳಕ್ಕೆ ಮಾಡಿಕೊಂಡಿರಲಿಲ್ಲ. ಈ ಸರ್ಕಾರ ಪೊಲೀಸ್​​ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಚ್​ಡಿಕೆ ಆರೋಪಿಸಿದರು.

news18-kannada
Updated:January 22, 2020, 4:57 PM IST
ಪಾಕಿಸ್ತಾನಕ್ಕೆ ಸೀರೆ ತೆಗೆದುಕೊಂಡು ಹೋದ ಪ್ರಧಾನಿ ಯಾರು?: ಮೋದಿ ಪಾಕ್​​​ ಭೇಟಿ ಬಗ್ಗೆ ಬಿಜೆಪಿಗೆ ಎಚ್​​ಡಿಕೆ ಪ್ರಶ್ನೆ
ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು(ಜ.22): "ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾವಾಗಲೂ ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಇವರಿಗೆ ರಾಜ್ಯದ ಬಗ್ಗೆ ಮಾತನಾಡುವುದು ಗೊತ್ತೇ ಇಲ್ಲ. ಎಲ್ಲರಿಗಿಂತ ಮೊದಲು ಹಿಂದೆಯೇ ಯಾರದ್ದೋ ಮದುವೆ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಸೀರೆ ತೆಗದುಕೊಂಡು ಹೋದ ಪ್ರಧಾನಿ ಯಾರು?" ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ. ಈ ಮೂಲಕ 2015ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಶರೀಫರ ಮೊಮ್ಮಗಳ ಮದುವೆಗೆಂದು ಲಾಹೋರ್​​ಗೆ ದಿಢೀರ್ ಭೇಟಿ ನೀಡಿದ್ದ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇಂದು ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಇತ್ತೀಚಿಗೆ ಅನೇಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನನ್ನ ಹೇಳಿಕೆಗಳ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಲೇ ಇದ್ದಾರೆ. ನಾನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂತು ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ನನಗೆ ಬಿಜೆಪಿಗರ ಸರ್ಟಿಫಿಕೇಟ್​​ ಬೇಕಿಲ್ಲ ಎಂದು ಕುಟುಕಿದರು.

ಕರ್ನಾಟಕವೂ ಅತ್ಯಂತ ಶಾಂತಿ ಪ್ರಿಯ ರಾಜ್ಯ. ಎಲ್ಲಾ ಜಾತಿಯವರು ವಿಶ್ವಾಸದಿಂದ ಬಾಳು ರಾಜ್ಯ. ದೇಶದಲ್ಲಿ ಎಂತಹದ್ದೇ ಗಲಭೆ ಸಂಭವಿಸಿದರೂ ರಾಜ್ಯದಲ್ಲಿ ಮಾತ್ರ ಯಾವುದೇ ಗಲಾಟೆಯಾವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಗಲಾಟೆಗಳು ಹೆಚ್ಚಾಗಿವೆ ಎಂದರು ಎಚ್​​.ಡಿ ಕುಮಾರಸ್ವಾಮಿ.

ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ದಾವೂಸ್​ಗೆ ತೆರಳಿದ್ದಾರೆ. ಕರ್ನಾಟಕದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಹೊತ್ತಲ್ಲೇ ರಾಜ್ಯದಲ್ಲಿ ಬಂಡವಾಳ ಹೂಡುವರಿಗೆ ಏನು ಭರವಸೆ ನೀಡುತ್ತೀರಿ ಎಂದು ಮುಖ್ಯಮಂತ್ರಿಗೆ ಎಚ್​​.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯದಲ್ಲಿ ಕೆಲವು ಉಗ್ರರು ನೆಲೆಸಿದ್ದಾರೆ. ಅಮಾಯಕರ ಬಲಿ ತೆಗೆದುಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಸೂಕ್ಷ್ಮ ವಿಚಾರಗಳನ್ನು ಸರ್ಕಾರವೇ ಪರಿಶೀಲಿಸಬೇಕು. ಪೊಲೀಸ್​​ ಇಲಾಖೆಯ ಧೈರ್ಯವನ್ನೇ ಕುಗ್ಗಿಸುತ್ತಿದ್ದೇನೆ ಎಂಬ ಆರೋಪ ನನ್ನ ಮೇಲಿದೆ. ಪೊಲೀಸರಿಗೆ ಧೈರ್ಯ ತುಂಬುವ ಕೆಲಸ ಸರ್ಕಾರ ಮಾಡಬೇಕು. ನನಗೆ ಜನರ ಬಗ್ಗೆ ಕಾಳಜಿ ಇದೆ. ಪೊಲೀಸರ ಬಗ್ಗೆ ಕಳಕಳಿಯೂ ಇದೆ ಎಂದು ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿಗೆ ಒಂದೂ ವೋಟ್ ಬರುತ್ತಿರಲಿಲ್ಲ, ಸೂಲಿಬೆಲೆಗೆ ದೇಶಭಕ್ತಿಯಲ್ಲಿ ಕಡೆಯ ರ‍್ಯಾಂಕ್; ಎಚ್​ಡಿಕೆ

ನನ್ನ ಅವಧಿಯಲ್ಲೂ ಇದೇ ಪೊಲೀಸ್​​ ಅಧಿಕಾರಿಗಳು ಇದ್ದರು. ಆದರೆ, ನಾನ್ಯಾವತ್ತು ಅಧಿಕಾರಗಳ ದುರ್ಬಳಕ್ಕೆ ಮಾಡಿಕೊಂಡಿರಲಿಲ್ಲ. ಈ ಸರ್ಕಾರ ಪೊಲೀಸ್​​ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.ಇನ್ನು ಸಚಿವ ಕೆ.ಎಸ್​​ ಈಶ್ವರಪ್ಪ ನನ್ನ ವಿರುದ್ಧ ಮಾತನಾಡಿದ್ದಾರೆ. ಇದೇ ಈಶ್ವರಪ್ಪ ಅವರದ್ದೇ ಪಕ್ಷದ ಬಿ.ಎಸ್​ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಬಗ್ಗೆಯೂ ಮಾತಾಡಿದ್ದರು. ನನ್ನ ಮುಂದೆಯೇ ಇವರು ಬಿಜೆಪಿ ನಾಯಕರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ಧಾರೆ. ಅಗತ್ಯಬಿದ್ದಾಗ ನಾನೇ ಕ್ಯಾಸೆಟ್​​ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನದ್ದು ಬಾಂಬ್​​ ಅಲ್ಲ, ಬದಲಿಗೆ ಪಟಾಕಿ ಪ್ರಕರಣ. ಆದಿತ್ಯ ರಾವ್ ಸರೆಂಡರ್‌ ಆಗಿರುವುದು ಕೇವಲ ನಾಟಕೀಯ. ದೇವೇಗೌಡರು ಇದ್ದಾಗ ಇಂತಹ ಒಂದು ಘಟನೆಯೂ ನಡೆದಿಲ್ಲ. ಈಗ ಯಾಕೆ ಹೀಗೆ ಆಗುತ್ತಿದೆ. ಪೊಲೀಸ್​ ಅಧಿಕಾರಿ ಹರ್ಷ ನನ್ನ ಭೇಟಿಯಾಗಿದ್ದರು. ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡಿ ಅಂತ ಹೇಳಿದ್ದೇನೆ. ಮಂಗಳೂರು ಪ್ರಕರಣದಲ್ಲಿ ಹಿಂದೂ ಸಮುದಾಯದವರ ಕೈವಾಡ ಇಲ್ಲ ಎಂದು ಗೋವಿಂದ ಕಾರಜೋಳ ಹೇಳಿದ್ದರು. ಈಗ ಕಾರಜೋಳ ಮಾತಾಡಬೇಕು. ಆದಿತ್ಯ ರಾವ್ ಶರಣಾಗಿರುವುದು ನಾಟಕ ಅನ್ನಿಸುತ್ತೆ ಎಂದರು.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ