ಹಾವು-ಮುಂಗುಸಿಯಂತಿದ್ದ ಸಿದ್ದು, ಬಿಎಸ್ವೈ, ಹೆಚ್ಡಿಕೆ ಒಟ್ಟಿಗೆ ಊಟ

news18
Updated:July 12, 2018, 3:46 PM IST
ಹಾವು-ಮುಂಗುಸಿಯಂತಿದ್ದ ಸಿದ್ದು, ಬಿಎಸ್ವೈ, ಹೆಚ್ಡಿಕೆ ಒಟ್ಟಿಗೆ ಊಟ
news18
Updated: July 12, 2018, 3:46 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜು.12): ನನ್ನ ದ್ವೇಷ ಅಪ್ಪ-ಮಕ್ಕಳ ವಿರುದ್ಧ ಎಂದು ವಿಧಾನಸೌಧದಲ್ಲಿ ಗುಡುಗಿದ ಯಡಿಯೂರಪ್ಪ, ಮೈತ್ರಿ ಸರ್ಕಾರದ ಮೊದಲ ಕಲಾಪ ಆರಂಭವಾದ  ಮೂರನೇ ದಿನವೂ ಚರ್ಚೆಯ ವೇಳೆ ಇಬ್ಬರು ತಮ್ಮ ಹಳೆಯ ಸೇಡನ್ನು ಹೊರಹಾಕಿ ವಾಗ್ವಾದ ನಡೆಸಿದ್ದರು.

ಈ ಹಿಂದಿನ ಜೆಡಿಎಸ್​-ಬಿಜೆಪಿ ಸರ್ಕಾರದಲ್ಲಿ ಆದ ನಂಬಿಕೆ ದ್ರೋಹವನ್ನು ಆಗಾಗ ಯಡಿಯೂರಪ್ಪ ಬಹಿರಂಗವಾಗಿ ಹೊರಹಾಕುತ್ತಲೆ ಇದ್ದಾರೆ. ಇದಕ್ಕೆ ಕುಮಾರಸ್ವಾಮಿಯವರು ತಿರುಗೇಟು ನೀಡುತ್ತಲೇ ಇರುತ್ತಾರೆ.  ಆದರೆ ಇಂದು ವಿಧಾನಸೌಧದಲ್ಲಿ ನಡೆದ ಘಟನೆ ಇದಕ್ಕಿಂತ ಭಿನ್ನವಾಗಿದ್ದು, ಎಲ್ಲರನ್ನು ಒಂದು ನಿಮಿಷ ಆಶ್ಚರ್ಯ ಚಕಿತರನ್ನಾಗಿ ಮಾಡಿತು.

ವಿಧಾನ ಸಭಾ ಕಲಾಪದ ಹಿನ್ನಲೆ ಇಂದು ಶಾಸಕರಿಗೆ ಸಿಎಂ ಕುಮಾರಸ್ವಾಮಿ ಭೋಜನ ಕೂಟ ಏರ್ಪಡಿಸಿದ್ದರು. ಈ ಭೋಜನ ಕೂಟದಲ್ಲಿ ಆಡಳಿತ ಪಕ್ಷದ ಶಾಸಕರು ಊಟಮಾಡುತ್ತಿದ್ದ ವೇಳೆ ವಿಪಕ್ಷ ನಾಯಕರ ಯಡಿಯೂರಪ್ಪ ಅವರನ್ನು ಸಿಎಂ ಕುಮಾರಸ್ವಾಮಿ ಖುದ್ದು ಕೈ ಹಿಡಿದು ಕರೆತಂದಿದ್ದಾರೆ. ಅಲ್ಲದೇ ತಾವು ಕುಳಿತಿದ್ದ ಸೀಟನ್ನು ಬಿಟ್ಟು ಅವರಿಗೆ ಕುಳಿತುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಸಿಎಂ ಒತ್ತಡಕ್ಕೆ ಮಣಿದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಜೊತೆ ಊಟ ಮಾಡಿದ್ದಾರೆ.

ಇಂದು ಬೆಳಗ್ಗೆ ನಡೆದ ಸದನದಲ್ಲಿಯೂ ಕೂಡ ಯಡಿಯೂರಪ್ಪ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಪ್ರಸ್ತಾಪಿಸಿದ ಅವರಿಗೆ ಸಿದ್ದರಾಮಯ್ಯ ನಿಮಗೆ ವಯಸ್ಸಾಯಿತು ಎಂದಿದ್ದರು.

ಸದನದ ಬಳಿಕ ಭೋಜನ ವಿರಾಮದಲ್ಲಿ ಮೂರು ಪಕ್ಷದ ತ್ರಿಮೂರ್ತಿಗಳು ಎಲ್ಲವನ್ನೂ ಮರೆತು ಒಟ್ಟಿಗೆ ಊಟ ಮಾಡಿ ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎಂದು ಸಾಬೀತು ಮಾಡಿದರು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...