• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramanagara: ನಾನೇ ಆ ಕಾರ್ಯಕ್ರಮಕ್ಕೆ ಬರ್ತೀನಿ ; ಹೀಗೆ ಹೆಚ್​​ಡಿಕೆ ಹೇಳಿದ್ಯಾರಿಗೆ?

Ramanagara: ನಾನೇ ಆ ಕಾರ್ಯಕ್ರಮಕ್ಕೆ ಬರ್ತೀನಿ ; ಹೀಗೆ ಹೆಚ್​​ಡಿಕೆ ಹೇಳಿದ್ಯಾರಿಗೆ?

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ರಾಮನಗರ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡುವ ಸಾಧ್ಯತೆಗಳಿವೆ.

  • News18 Kannada
  • 3-MIN READ
  • Last Updated :
  • Ramanagara, India
  • Share this:

ರಾಮನಗರ: ಇಂದು ರಾಮನಗರದಲ್ಲಿ (Ramanagara) ನಡೆಯುತ್ತಿರುವ ಜಿಲ್ಲಾಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಚುನಾವಣೆ (Election) ಸಮೀಪಿಸುತ್ತಿದ್ದಂತೆ ರಾಮನಗರದಲ್ಲಿ ಜೆಡಿಎಸ್ ವರ್ಸಸ್​ ಬಿಜೆಪಿ (JDS Vs BJP) ನಡುವಿನ ಹೋರಾಟ ತೀವ್ರವಾಗಿದೆ. ಇಂದು ರಾಮನಗರದ ಜಿಲ್ಲಾ ಪಂಚಾಯತ್ ಸಂಕೀರ್ಣದ ಪಕ್ಕದಲ್ಲಿ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ‌ ಜಿಲ್ಲಾಸ್ಪತ್ರೆ ನಿರ್ಮಾಣವಾಗಿದೆ. 250 ಬೆಡ್ ಗಳು ಒಂದೇ ಕಡೆ ಲಭ್ಯವಾಗಿದೆ. ಪಕ್ಕದ ಕಂದಾಯ ಭವನದಲ್ಲಿ 150 ಬೆಡ್​​ಗಳಿರಲಿವೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ (Congress), ಬಿಜೆಪಿ ಮತ್ತು ಜೆಡಿಎಸ್ ನಾಯರು ಜೊತೆಯಾಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ.


ಕೆಲವು ದಿನಗಳ ಹಿಂದೆ ಹಾರೋಹಳ್ಳಿ ನೂತನ ತಾಲೂಕು ಲೋಕಾರ್ಪಣೆ ಸಮಯದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ (Minister Ashwath Narayan) ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ (MLA Anitha Kumaraswamy) ನಡುವೆ ಮಾತಿನ ಚಕಮಕಿ ಏರ್ಪಿಟ್ಟಿತ್ತು. ಇತ್ತ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್  (MP DK Suresh) ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದರು.


ಅಶ್ವತ್ಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ


ಅಂದು ವೇದಿಕೆ ಮೇಲೆ ಮಾತನಾಡಿದ್ದ ಅನಿತಾ ಕುಮಾರಸ್ವಾಮಿ ನೇರವಾಗಿ ಅಶ್ವತ್ಥ್ ನಾರಾಯಣ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಇದ್ದಿದ್ರೆ ಇಂದು ಯಾರು ಮಾತನಾಡುತ್ತಿರಲಿಲ್ಲ ಎಂದು ಕಿಡಿಕಾರಿದ್ದರು. ಓರ್ವ ಮಹಿಳಾ ಶಾಸಕಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿದ್ದರು.


ramanagara politics, hd kumaraswamy vs ashwath narayan, kannada news, karnataka news, jds vs bjp, ರಾಮನಗರ ರಾಜಕೀಯ, ಹೆಚ್​​ಡಿಕೆ ಕುಮಾರಸ್ವಾಮಿ ವರ್ಸಸ್ ಅಶ್ವತ್ಥ್ ನಾರಾಯಣ್
ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ್


ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ರಾಮನಗರ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡುವ ಸಾಧ್ಯತೆಗಳಿವೆ.


ತಿರುಗೇಟು ಕೊಡ್ತಾರಾ HDK?


ಹಾರೋಹಳ್ಳಿಯ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರ ರಾಮನಗರದ ಅಭಿವೃದ್ಧಿ ಮಾಡಿದೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದರು. ಈ ವೇಳೆ ವೇದಿಕೆ ಮೇಲೆಯೇ ಅನಿತಾ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ರಾಮನಗರದ ಕಾರ್ಯಕ್ರಮಕ್ಕೆ ನಾನೇ ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


HBD Anitha Kumaraswamy: ಅಮ್ಮನ ತ್ಯಾಗದ ಬಗ್ಗೆ ನಿಖಿಲ್​ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್​..!


ಜೆಡಿಎಸ್ ಬಗ್ಗೆ ಮಾತಾನಾಡಬೇಡಿ


ಸಿದ್ದರಾಮಯ್ಯ ವಿರುದ್ಧ ಹೆಚ್‌.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ಪದೇ-ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡಬೇಡಿ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಂದಿದ್ದೀರಾ? ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಅಂತ ಕಿಡಿಕಾರಿದರು.




ಬಲಗಡೆ ಅಪ್ಪಣೆ ನೀಡಿದ ಆಂಜನೇಯ


ಮಾಜಿ ಸಿಎಂ ಕುಮಾರಸ್ವಾಮಿಗೆ ಬಲಗಡೆಯಿಂದ ಆಂಜನೇಯ ಸ್ವಾಮಿ ಅಪ್ಪಣೆ ನೀಡಿದ್ದಾರೆ. ಚಿಕ್ಕಮಗಳೂರಿನ ತೇಗೂರು ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೆಚ್‌ಡಿಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಬಹುಮತ ಸರ್ಕಾರ ಹಾಗೂ ಹೆತ್ತವರಿಗೆ ದೀರ್ಘಾಯುಷ್ಯಕ್ಕೆ ಬೇಡಿಕೊಂಡಿದ್ದ ಕುಮಾರಸ್ವಾಮಿಗೆ ಬಲಗೈ ಹಸ್ತದಿಂದ ಆಂಜನೇಯ ಸ್ವಾಮಿ ಅಪ್ಪಣೆ ನೀಡಿದ್ದಾರೆ.


ಇದನ್ನೂ ಓದಿ:  Government Employees Salary: ಶೇಕಡಾ 17ರಷ್ಟು ಸಂಬಳ ಏರಿಕೆಯಲ್ಲಿ ಯಾರಿಗೆಷ್ಟು ಸಿಗಲಿದೆ? ಇದರ ಲೆಕ್ಕಾಚಾರ ಹೇಗೆ ಗೊತ್ತಾ?


ಬಸವೇಶ್ವರ ಆರೋಗ್ಯಶ್ರೀ ಹೆಸರಿನಲ್ಲಿ ಹಣ


ಬಸವೇಶ್ವರ ಆರೋಗ್ಯ ಶ್ರೀ ಹೆಸರಿನಲ್ಲಿ ಬಡವರಿಗೆ ಹಣ ನೀಡುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಘೋಷಿಸಿದ್ದಾರೆ. ಕೊಪ್ಪಳದ ಗಂಗಾವತಿ ಕ್ಷೇತ್ರದ ದಾಸನಾಳ ಗ್ರಾಮದಲ್ಲಿ ಘೋಷಣೆ ಮಾಡಿದ್ದು, ಬಡಜನರಿಗೆ ಒಂದು ಸಾವಿರದಿಂದ 10 ಲಕ್ಷದವರೆಗೂ ಆಸ್ಪತ್ರೆ ಖರ್ಚು ನೀಡುವುದಾಗಿ ಘೋಷಿಸಿದ್ದಾರೆ.


ಯಾವುದೇ ಊರು, ಆಸ್ಪತ್ರೆಗೆ ಹೋದ್ರೂ ಅಲ್ಲಿ ಆಸ್ಪತ್ರೆ ಖರ್ಚು ಭರಿಸುವುದಾಗಿ ಹೇಳಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಹಳ್ಳಿ ಕಡೆಗೆ ಗಾಲಿ ಜನಾರ್ದನ ರೆಡ್ಡಿ ನಡೆ ಎಂಬ ಘೋಷಣೆಯೊಂದಿಗೆ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿದ್ದಾರೆ.

Published by:Mahmadrafik K
First published: