HOME » NEWS » State » HD KUMARASWAMY SAYS YEDDYURAPPA AND I HAVE NO PERSONAL HATRED IN JDS SAMAVESHA SESR

HDK: ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ; ಎಚ್​ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಇನ್ನೆಷ್ಟು ಮೀಸಲಾತಿ ಹೋರಾಟ ಶುರುವಾಗುತ್ತದೋ ಗೊತ್ತಿಲ್ಲ. ಸವಿತಾ ಸಮಾಜದವರೂ ಹೋರಾಟ ಶುರು ಮಾಡುತ್ತಾರೆ. ಉಪ್ಪಾರ ಸಮಾಜದವರು‌ ಹೋರಾಟ ಶುರು ಮಾಡುತ್ತಾರೆ. ಹಾಗೇ ಉಳಿದ ಸಮುದಾಯ ಗಳು ಕೂಡ ಆರಂಭ ಮಾಡುತ್ತಾರೆ

news18-kannada
Updated:February 14, 2021, 3:43 PM IST
HDK: ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ; ಎಚ್​ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ
  • Share this:
ಬೆಂಗಳೂರು (ಫೆ. 14): ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ.  ಇದನ್ನು ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸಲು ಬಯಸುತ್ತೇನೆ. ಆದರೆ, ಯಡಿಯೂರಪ್ಪ ಅವರ ಸರ್ಕಾರದಲ್ಲಿ ಲೂಟಿ‌ ನಡೀತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್. ಎರಡು ಸೂಟ್ ಕೇಸ್ ಗಳಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ದಾಖಲೆ ‌ಬಿಡುಗಡೆ ಮಾಡಿದೆವು ಎಂದರು. ಅರಮನೆ ನಗರದಲ್ಲಿ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಬಗ್ಗೆ ಮಾತಾಡಿದ್ದರು. ಯಡಿಯೂರಪ್ಪ ಎದ್ದು ನಿಂತು ರೀಡೂ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದರು. ರೀಡೂ ಪ್ರಕರಣ ಅಂದ ಕೂಡಲೇ ಸಿದ್ದರಾಮಯ್ಯ ಬಾಯಿ ಮುಚ್ಕೊಂಡು ಸುಮ್ನೆ ಕುಳಿತರು. ಇದು ಇವರಿಬ್ಬರ ರಾಜಕಾರಣ ಎಂದು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. 

ರಾಜ್ಯದಲ್ಲಿ ಮೀಸಲಾತಿ ಹೋರಾಟಗಳ ವಿಚಾರ ಕುರಿತು ಮಾತನಾಡಿದ ಅವರು ರಾಜ್ಯದಲ್ಲಿ ಇನ್ನೆಷ್ಟು ಮೀಸಲಾತಿ ಹೋರಾಟ ಶುರುವಾಗುತ್ತದೋ ಗೊತ್ತಿಲ್ಲ. ಸವಿತಾ ಸಮಾಜದವರೂ ಹೋರಾಟ ಶುರು ಮಾಡುತ್ತಾರೆ. ಉಪ್ಪಾರ ಸಮಾಜದವರು‌ ಹೋರಾಟ ಶುರು ಮಾಡುತ್ತಾರೆ. ಹಾಗೇ ಉಳಿದ ಸಮುದಾಯ ಗಳು ಕೂಡ ಆರಂಭ ಮಾಡುತ್ತಾರೆ ಎಂದರು.

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳು ಕಣಕ್ಕೆ ಇಳಿಸಲಾಗುವುದು. ಮಸ್ಕಿಯಲ್ಲಿ ಪಕ್ಷದ ಶಕ್ತಿ ಕಡಿಮೆ ಇರಬಹುದು. ಸಿಂದಗಿಯಲ್ಲಿ ಜೆಡಿಎಸ್​ ಅಭ್ಯರ್ಥಿ ಹಾಕುತ್ತೇವೆ. ನಮ್ಮ ಪಕ್ಷದಲ್ಲಿ ಹಣದ ಕೊರತೆ ಇರಬಹುದು. ಸಾಲ ಮಾಡಿಯಾದರೂ ಪಕ್ಷ ಉಳಿಸಬೇಕು. ದೇವೇಗೌಡರ ಒಂದು ಸಲಹೆ ಕೊಟ್ಟಿದ್ದಾರೆ. ಅವರ ಸುದೀರ್ಘ ಜೀವನದಲ್ಲೇ ನಾವು ಹೋಗುತ್ತೇವೆ. ಯಾವ ಪಕ್ಷದ ಅಡಿಯಲಾಗಿ ನಾವು ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಮೀಸಲಾತಿ ಹೋರಾಟದ ನಾಯಕತ್ವ ವಹಿಸಿಕೊಳ್ಳಿ; ಸುತ್ತೂರು ಶ್ರೀಗಳಿಗೆ ವಿಜಯೇಂದ್ರ ಮನವಿ

ಮೈತ್ರಿ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ. ಆದರೂ ಸಾಲಮನ್ನ ಭರವಸೆಯನ್ನು ಈಡೇರಿಸಿದೆವು. ಸಮ್ಮಿಶ್ರ ಸರ್ಕಾರದ ಬಗ್ಗೆ ಹಲವು ಟೀಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ತಂದೇವು. ನಮ್ಮ ಸರ್ಕಾರ ಸಾಲಮನ್ನಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ರೈತರಿಗೆ ಬೆಳೆ ಸಾಗಾಣಿಕೆ ವೆಚ್ಚ ಕೊಟ್ಟೆವು. ಉಗ್ರಾಣದಲ್ಲಿ ರೈತರು‌ ಬೆಳೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಿದೇವು. ಶೇ.3 ರ ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಸಾಲ ಯೋಜನೆ ತಂದೆವು. ಬಡವರ ಬಂಧು ಯೋಜನೆ ತಂದೆವು. ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದೆವು. ಇವತ್ತು ಕೊರೋನಾದಿಂದ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಇದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ 1000 ಪಬ್ಲಿಕ್ ಶಾಲೆ ಆರಂಭಿಸಲಾಯಿತು. ಖಾಸಗಿ ಶಾಲೆಗಳಲ್ಲಿ ಬಡವರು ಮಕ್ಕಳನ್ನು ಓದಿಸಲು ಕಷ್ಟಹಾಗಾಗಿ ಸರ್ಕಾರದಿಂದಲೇ ಪಬ್ಲಿಕ್ ಶಾಲೆ ಯೋಜನೆ ತಂದೆವು . ಆದರೆ, ಬಿಜೆಪಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದುವರೆಸಿಲ್ಲ. ಈ ಯೋಜನೆ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರಲ್ಲಿ ದೇವೇಗೌಡರ ಬಗ್ಗೆ ಇನ್ನೂ ಕಳಕಳಿ ಇದೆ. ಈ‌ ಕಳಕಳಿಯನ್ನು ಯಾರೂ ತೆಗೆಯಲು ಆಗಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಹಸಿರು ತಂದುಕೊಟ್ಟ ಪಕ್ಷ ಜೆಡಿಎಸ್
ಪ್ರಧಾನಿಗಳು ಎಚ್ಡಿ ದೇವೇಗೌಡರ ಬಗ್ಗೆ ಮೆಚ್ಚುಗೆ ಮಾತಾಡಿದ್ದಾರೆ. ಆರೂವರೆ ಕೋಟಿ ಜನ ಇದನ್ನು ಅರ್ಥ ಮಾಡಿಕೊಬೇಕು ಎಂದರು.
Published by: Seema R
First published: February 14, 2021, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories