ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಬಿಜೆಪಿಯಲ್ಲಿ (BJP) ಅನ್ಯಾಯ ಆಗಿದ್ಯಾ? ಪೇಶ್ವೆ ವಂಶಸ್ಥರೇ (Peshwa) ಬಿಎಸ್‌ವೈಗೆ ಅಧಿಕಾರ ತಪ್ಪಿಸಿದ್ರಾ? ಹೌದು ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಬಾಂಬ್ ಸಿಡಿಸಿದ್ದಾರೆ. 50-50 ಸರ್ಕಾರದ ವೇಳೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸಿದ್ದೇ ಪೇಶ್ವೆ ವಂಶಸ್ಥರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾದಲ್ಲಿ (Kumta) ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ನಾನು ಯಡಿಯೂರಪ್ಪ ಜೊತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮ ಆಗುತ್ತಿದ್ದರು. ಆಗ ವಿಜಯೇಂದ್ರ ಎಲ್ಲಿ ಬರುತ್ತಿದ್ದರು.
ಸಿದ್ದಲಿಂಗಯ್ಯ ಎನ್ನುವವರು ನನಗೆ ಚೀಟಿ ನೀಡಿದ್ದರು. ಯಡಿಯೂರಪ್ಪ ಅವರನ್ನ ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಲು ಸಿಎಂ ಮಾಡಿದ್ದೆ. ಇನ್ನು ಸಿದ್ದಲಿಂಗಯ್ಯ ಬದುಕಿದ್ದಾರೆ ಚೀಟಿ ತಂದುಕೊಟ್ಟಿದ್ದು ಅವರೇ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: BS Yediyurappa: ರಾಜ್ಯ ರಾಜಕಾರಣಕ್ಕೆ 'ರಾಜಾಹುಲಿ' ರಿಟರ್ನ್ಸ್; ಬಿಎಸ್ವೈ ಜೊತೆ ವಿಜಯೇಂದ್ರಗೆ ಮತಬೇಟೆ ಹೊಣೆ!
ರಾಜೀನಾಮೆ ನೀಡದ್ದಂತೆ ನಾನೇ ಸಲಹೆ ಕೊಟ್ಟಿದ್ದೇ!
ಅವತ್ತು ಯಡಿಯೂರಪ್ಪ ಅವರು ಚೀಟಿಯಲ್ಲಿ ಬಿಜೆಪಿಯಲ್ಲಿ ಅವಮಾನಗಳನ್ನು ಸಹಿಸಿ ಸಾಕಾಗಿದೆ. ನಿಮ್ಮ ಸರ್ಕಾರದಲ್ಲಿ ಮಂತ್ರಿ ಸ್ಥಾನ ಕೊಡ್ತೀರಾ ಎಂದು ಕೇಳಿದ್ದರು. ಆದರೆ ಆಗ ನಾನು ನೀವು ಬಿಜೆಪಿಗೆ ರಾಜೀನಾಮೆ ನೀಡಿ ಬಂದರೆ ನಿಮ್ಮ ನಾಯಕತ್ವ ಹಾಳಾಗುತ್ತದೆ. ಬಿಜೆಪಿಯಲ್ಲಿರುವ 70 ಹೆಚ್ಚು ಅಸಮಾಧಾನಿತ ಶಾಸಕರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ಬಲ ಹೆಚ್ಚಿಸಿಕೊಳ್ಳಿ ಎಂದು ನಾನೇ ಸಲಹೆ ನೀಡಿದ್ದೆ.
ಈಗ ವೀರಶೈವರಿಗೆ ಏನು ಮಾಡಿದೆ ಎಂದು ವಿಜಯೇಂದ್ರ ಪ್ರಶ್ನೆ ಮಾಡ್ತಿದ್ದಾರೆ, ಆದರೆ ಅವರಿಗೆ ಗೊತ್ತಿಲ್ಲ. ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಲು ಹೋಗಿದ್ದರು. ಆಗ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೇವು. ನಾವೆಲ್ಲಾ ಜನತಾ ಪರಿವಾರದವರೇ ಮತ್ತೆ ಚುನಾವಣೆಗೆ ಹೋದರೆ ಕಾಂಗ್ರೆಸ್ಗೆ ಅನುಕೂಲ ಆಗುತ್ತೆ. ಒಂದು ತಾತ್ಕಾಲಿಕ ಸಹಕಾರ ಮಾಡೋಣಾ ಎಂದು ಕೇಳಿದ್ದರು. ಆ ಬಳಿಕ ಅಧಿಕಾರ ಇದ್ದ ವೇಳೆ ಬಿಜೆಪಿಗರನ್ನು ಗೌರವದಿಂದ ಕಂಡಿದ್ದೇನೆ.
ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು. ಪೇಶ್ವೆ ವಂಶಸ್ಥರು ಅವರಿಗೆ ಅಧಿಕಾರವನ್ನ ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನ ತೆಗೆದರು. ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಸಿಎಂ ಆದ್ರು. ಅವರನ್ನ ಹೇಗೆ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ನಾನು ವೀರಶೈವ, ದಲಿತ ಎಲ್ಲಾ ಸಮುದಾಯಕ್ಕೂ ಗೌರವ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
ಇದೇ ವೇಳೆ ಹೆಚ್ಡಿಕೆ ಸಿ.ಡಿ ಬಿಡುಗಡೆ ಮಾಡೋದಾಗಿ ಹೇಳಿದ್ದ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ, ನನ್ನ ಯಾವ ಸಿ.ಡಿ ಇದೆಯಂತೆ? ಯಾವ ಸಿ.ಡಿ ಬಿಡುಗಡೆ ಮಾಡ್ತಾರೆ? ಅವರಲ್ಲಿ ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ. ನನ್ನ ಸಿಡಿ ಬಿಡುಗಡೆ ಮಾಡೋದಾದರೆ ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ, ನಾನು ಸಹಾಯ ಮಾಡಿದ ಸಿ.ಡಿ ಬಿಡುಗಡೆ ಮಾಡಬೇಕಷ್ಟೇ. ಅವರಂತೆ ಸ್ಟೇ ತರುವಂತಹ ಯಾವುದೇ ಸಿ.ಡಿ ಗಳಿಲ್ಲ. ನನ್ನ ಸಿ.ಡಿ ಬಿಡುಗಡೆ ಮಾಡಲು ಯಾವುದೇ ಪ್ರಕರಣಗಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Shivamogga Airport Name: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು!
ಜಾತ್ಯಾತೀತ ಅನ್ನೋದನ್ನ ತೆಗೆದು ಜಾತೀವಾದಿಗಳಾಗಿದ್ದಾರೆ
ಇತ್ತ ಕುಮಾರಸ್ವಾಮಿ ಬ್ರಾಹ್ಮಣ ಹೇಳಿಕೆಗೆ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ. ಜಾತ್ಯಾತೀತ ಅನ್ನೋದನ್ನ ತೆಗೆದು ಜಾತೀವಾದಿಗಳಾಗಿದ್ದಾರೆ. ನಮ್ಮಲ್ಲಿ ಯಾವುದೇ ಜಾತಿಯಾಧಾರಿತ ಸಿಎಂ ಆಯ್ಕೆ ಆಗಿಲ್ಲ. ನಮ್ಮ ಪಕ್ಷದ ಮೇಲೆ ಅಪಪ್ರಚಾರ ಇದೇ ಮೊದಲೇನಲ್ಲ ಎಂದು ಕಿಡಿಕಾರಿದ್ದಾರೆ. ಉಳಿದಂತೆ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಬೆಳಗಾವಿಯಲ್ಲಿ ಬ್ರಾಹ್ಮಣ ಸಮುದಾಯ ಪ್ರತಿಭಟನೆ ಮಾಡಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಬ್ರಾಹ್ಮಣ ಸಮಾಜ ನಿಂದನೆ ಮಾಡಿದ್ದಾರೆ ಎಂದು ಇಬ್ಬರ ಭಾವಚಿತ್ರಕ್ಕೆ ಧಿಕ್ಕಾರ ಚಿನ್ಹೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ