ಯಾರ್ರೀ ಮುನಿರತ್ನ, ನಮಗೆ ಯಾವತ್ತಿದ್ದರೂ ಜನಗಳೇ ಗಾಡ್​ಫಾದರ್: ಎಚ್.ಡಿ. ಕುಮಾರಸ್ವಾಮಿ

ಸಿದ್ದರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್ ಸರಕಾರ ಎಂದರು, ಕಾಂಗ್ರೆಸ್ನವರು ಬಿಜೆಪಿ ಸರಕಾರವನ್ನು 10% ಗವರ್ನಮೆಂಟ್ ಎಂದರು. ಆದರೆ, ನಮ್ಮ ಸರಕಾರವನ್ನು ಯಾರೂ ಪರ್ಸೆಂಟೇಜ್ ಸರಕಾರ ಎಂದಿಲ್ಲ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಆರ್.ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕುಮಾರಸ್ವಾಮಿ

ಆರ್.ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕುಮಾರಸ್ವಾಮಿ

 • Share this:
  ಬೆಂಗಳೂರು: ಜೆಡಿಎಸ್‌ ಬಗ್ಗೆ ಯಾವತ್ತಿಗೂ ಲಘುವಾಗಿ ಮಾತನಾಡಬೇಡಿ, 2018ರಲ್ಲಿ ನನ್ನ ಬಗ್ಗೆ ಲಘುವಾಗಿ ಮಾತನಾಡಿ ಬಳಿಕ ನನ್ನ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿ ಆಗಿ ಎಂದು ಬೇಡಿಕೊಂಡಿರುವುದು ನೆನಪಿರಲಿ. ಈ ಪಕ್ಷಕ್ಕೆ ಲಕ್ಷಾಂತರ ಬಡವರ ಶ್ರೀರಕ್ಷೆ ಇದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ರಾಜರಾಜೇಶ್ವರಿ ನಗರ ವಾರ್ಡ್‌ನ ಬಯಲು ರಂಗಮಂದಿರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್‌ಗೆ ಮುನಿರತ್ನ ನಿಮ್ಮ ಗಾಡ್‌ಫಾದರ್ ಇಲ್ವಾ ಎಂದು ಕೇಳಿದ್ರಂತೆ, ಅವನ್ಯಾರು ನಮಗೆ ಗಾಡ್‌ಫಾದರ್‌ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್‌ಫಾದರ್ ಅಂದರೆ ಜನಗಳೆ ಎಂದು ತಿಳಿಸಿದರು.

  ಸಿದ್ದರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್‌ ಸರಕಾರ ಎಂದರು, ಕಾಂಗ್ರೆಸ್‌ನವರು ಬಿಜೆಪಿ ಸರಕಾರವನ್ನು 10% ಗವರ್ನಮೆಂಟ್‌ ಎಂದರು. ಆದರೆ, ನಮ್ಮ ಸರಕಾರವನ್ನು ಯಾರೂ ಪರ್ಸೆಂಟೇಜ್‌ ಸರಕಾರ ಎಂದಿಲ್ಲ. ಬೆಂಗಳೂರು ಹಾಗೂ ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರತಿಫಲವೇ ಆರ್‌ಆರ್‌ ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.

  ಇದನ್ನೂ ಓದಿ: ಕಾಂಗ್ರೆಸ್​ ತೊರೆದ ಮೇಲೆ ಮುನಿರತ್ನ ಅವರ ಕೆಂಪು ರಕ್ತ ಕೇಸರಿಯಾಗಿದೆ; ಸಂಸದ ಡಿಕೆ ಸುರೇಶ್ ವ್ಯಂಗ್ಯ

  ಇವತ್ತು ಮೋದಿಯವರು ಭಾರತವನ್ನು ಬಾಂಗ್ಲಾದೇಶದ ಜೊತೆ ತಲಾ‌ ಆದಯದಲ್ಲಿ ಪೈಪೋಟಿ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಕೊರೋನಾ ಕಾಲದಲ್ಲಿ ದೀಪ ಬೆಳಗಿಸಿ, ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದರು. ಆದರೆ, ಬಿಜೆಪಿಯವರು ತಮ್ಮ ಮನೆಗೆ ದೀಪ ಬೆಳಗಿಸಿಕೊಂಡರೆ ಹೊರತು ಜನರ ಜೀವನಕ್ಕೆ ದೀಪ ಬೆಳಗಿಸಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.

  ಇನ್ನು, ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಕುಮಾರಣ್ಞನವರು ಈ ಕ್ಷೇತ್ರಕ್ಕೆ 450 ಕೋಟಿ ರೂ. ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರ ಮುಖ ನೋಡಿ ಜೆಡಿಎಸ್‌ಗೆ 65,000 ವೋಟ್‌ ಬಿದ್ದಿದ್ದಿಲ್ಲ. ರಾಮಚಂದ್ರಪ್ಪ ಅಂತ ಹೆಸರು ಇಟ್ಕೊಂಡು ರಾವಣನ ಕೆಲಸ ಅವರು ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದು ತಪ್ಪಾ..? ಎಂದು ಪ್ರಶ್ನಿಸಿದ ಅವರು, ಮಾರಾಟ ಆಗಿರೋರು ನಾವಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನವರು ಎಂದು ಹೇಳಿದರು.

  ಇದನ್ನೂ ಓದಿ: Online Class Guidelines: ಆನ್​​ಲೈನ್ ಶಿಕ್ಷಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

  ಇದೇ ಸಂದರ್ಭದಲ್ಲಿ ಮಾತನಾಡಿದ ಮಳವಳ್ಳಿ ಶಾಸಕ ಅನ್ನದಾನಿ, ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿಗೆ ಹೈಟೆಕ್‌ ಸ್ವರ್ಶ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಕುಮಾರಣ್ಣನಿಗೆ ಯಾರು ಸಾಟಿಯಿಲ್ಲ. ಅವರು ನೀಡಿದಂತಹ ಯೋಜನೆಗಳನ್ನು ಮತ್ತಾರಿಗೂ ನೀಡುವುದಕ್ಕೆ ಆಗಲ್ಲ. ತಮ್ಮನ್ನೇ ತಾವು ಮಾರಿಕೊಂಡವರು ಮುಂದೊಂದು ದಿನ ರಾಜ್ಯ ಹಾಗೂ ಆರ್‌ಆರ್‌ ನಗರ ಕ್ಷೇತ್ರವನ್ನು ಮಾರುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

  ಮಾಜಿ ಪರಿಷತ್‌ ಸದಸ್ಯ ಶರವಣ ಮಾತನಾಡಿ, ಎರಡೂ ಪಕ್ಷಗಳೂ ಕ್ಷೇತ್ರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಮೂರನೇ ಬಾರಿ ನಾಮ ಹಾಕೋಕೆ ಮುನಿರತ್ನ ರೆಡಿಯಾಗಿದ್ದಾರೆ. ಬಿಜೆಪಿಯವರು ಹೇಳಿದ ಒಂದು ಕೆಲಸ ಮಾಡಿಲ್ಲ. ಬಿಜೆಪಿ ಎಂದರೇನೆ ಸುಳ್ಳು. ನಮ್ಮಲ್ಲಿ ಪ್ರಾಮಾಣಿಕ ಕಾರ್ಯಕರ್ತರು ಇದಾರೆ ಎಂದು ಹೇಳುತ್ತಿದ್ರಿ, ಅವರಿಗ್ಯಾಕೆ ಟಿಕೆಟ್ ನೀಡಿಲ್ಲ ಎಂದು ರಾಷ್ಟ್ರೀಯ ಪಕ್ಷಗಳನ್ನು ಪ್ರಶ್ನಿಸಿದರು.

  ಇದನ್ನೂ ಓದಿ: ಆರ್​ಆರ್ ​ನಗರ ಉಪಚುನಾವಣೆ: ಮುನಿರತ್ನ ಪರ ನಾಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪ್ರಚಾರ

  ದೇವೇಗೌಡರ ಮಾರ್ಗದರ್ಶನದಿಂದ ಬೆಳೆದವರು ಈಗ ಅವರ ವಿರುದ್ಧವೇ ಮಾತನಾಡ್ತೀರಿ. ನಮ್ಮ ಹತ್ತಿರ ದುಡ್ಡು, ಅಧಿಕಾರಯಿಲ್ಲದೇ ಇರಬಹುದು ಸ್ವಾಭಿಮಾನ ಇದೆ. ಭೂಮಿ ಮೇಲೆ ಬಿದ್ದ ಬೀಜ ಹೇಗೆ ವ್ಯರ್ಥ ಆಗುವುದಿಲ್ಲವೋ ಅದರಂತೆ ಜೆಡಿಎಸ್‌ಗೆ ಬಿದ್ದ ಒಂದೊಂದು ಮತನೂ ವ್ಯರ್ಥ ಆಗಲ್ಲ. ಒಂದೊಂದು ಮತ ನಿಮ್ಮ ಪಾಲಿಗೆ ಬಂಗಾರವಾಗುತ್ತದೆ ಎಂದು ಹೇಳಿದರು. ಈ ವೇಳೆ ಪರಿಷತ್‌ ಸದಸ್ಯ ರಮೇಶ್‌ ಗೌಡ, ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್‌, ಆರ್‌ಆರ್‌ ನಗರ ಜೆಡಿಎಸ್‌ ಅಧ್ಯಕ್ಷ ಆರ್‌. ಚನ್ನಕೇಶವಮೂರ್ತಿ ಮತ್ತಿತರರಿದ್ದರು.
  Published by:Vijayasarthy SN
  First published: