MAshok KumarMAshok Kumar
|
news18-kannada Updated:February 27, 2020, 4:00 PM IST
ಹೆಚ್ಡಿ ಕುಮಾರಸ್ವಾಮಿ- ಶಾಸಕ ನಾರಾಯಣ ಗೌಡ.
ರಾಮನಗರ (ಪೆಬ್ರವರಿ 27) ಮಹಾರಾಷ್ಟ್ರ ತಾಕತ್ತು ದೊಡ್ಡದಾ? ಅಥವಾ ಮಂಡ್ಯ ತಾಕತ್ತು ದೊಡ್ಡಾ? ಎಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಪಕ್ಷದ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಬುಧವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕ ನಾರಾಯಣ ಗೌಡ, “ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳಿಂದ ಹಿಂದೆ ಮುಂಬೈಗೆ ಹೋದ ನಾನು ಈಗ ಮಹಾರಾಷ್ಟ್ರದಿಂದ ದೊಡ್ಡ ಉದ್ಯಮಿ ಆಗಿದ್ದೇನೆ. ಹೋಟೆಲ್ ಉದ್ದಯಮಿಯಾಗಿ ನಂತರ ಬಿಲ್ಡರ್ ಆದ ನಾನು ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ" ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, ನನ್ನ ದೇಹದಲ್ಲಿ ಏನಾದರೂ ತಾಕತ್ತಿದ್ದರೆ ಅದು ಮಹಾರಾಷ್ಟ್ರದಿಂದ ಮಾತ್ರ ಎಂದು ಹೇಳಿದ್ದ ಅವರು, ವೇದಿಕೆ ಮೇಲೆಯೇ ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದರು. ಈ ಮೂಲಕ ತನ್ನ ಮರಾಠ ಪ್ರೇಮ ತೋರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಿಜೆಪಿ ಶಾಸಕ ನಾರಾಯಣ ಗೌಡ ಅವರ ಮರಾಠ ಪ್ರೇಮದ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, "ವೇದಿಕೆಯಲ್ಲಿ ಶಾಸಕ ನಾರಾಯಣ ಗೌಡ ಮಂಡ್ಯ ಜಿಲ್ಲೆಯ ತಾಕತ್ತಿನ ಬಗ್ಗೆ ಮಾತನಾಡಿದ್ದರೆ, ಒಪ್ಪಬಹುದಿತ್ತು. ಆದರೆ, ಮಹಾರಾಷ್ಟ್ರ, ಶಿವಾಜಿಗೆ ಜೈಕಾರ ಹಾಕಿ, ಮಂಡ್ಯ, ಕೆ.ಆರ್.ಪೇಟೆ ಜನರಿಗೆ ಜೈಕಾರವಿಲ್ಲ ಎಂದರೆ ಏನರ್ಥ. ಮಹಾರಾಷ್ಟ್ರ ತಾಕತ್ತು ದೊಡ್ಡದ? ಅಥವಾ ಮಂಡ್ಯ ಜನರ ತಾಕತ್ತು ದೊಡ್ಡದ? ಎಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ. ಮಂಡ್ಯದ ಮತದಾರರು ಇದನ್ನು ಅವರಿಗೆ ಮನವರಿಕೆ ಮಾಡಿಸಿಕೊಡಲಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ಬಳಿಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸಚಿವ ನಾರಾಯಣಗೌಡ
First published:
February 27, 2020, 3:45 PM IST