HOME » NEWS » State » HD KUMARASWAMY SAYS HE WILL AGAIN WIN FROM CHENNAPATNA TO BECOME CM AGAIN SNVS

ಹೆಚ್​ಡಿಕೆ ಮತ್ತೆ ಸಿಎಂ ಆಗ್ತಾರೆ ಎಂದ ನಂಜಾವಧೂತ ಸ್ವಾಮಿ; ಚನ್ನಪಟ್ಟಣದಿಂದಲೇ ಗೆದ್ದು ಸಿಎಂ ಆಗ್ತಿನಿ ಅಂದ ಕುಮಾರಸ್ವಾಮಿ

ಜನರು ನಾನು ಮಾಡಿರುವ ಕೆಲಸವನ್ನು ನೆನಪಿಸಿಕೊಂಡು ಮತ್ತೆ ಅವಕಾಶ ಕೊಡುವ ವಿಶ್ವಾಸ ಇದೆ. ಜನ ಮತ್ತೆ ಅಧಿಕಾರ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಇನ್ನೂ ಆರೋಗ್ಯ ಇಟ್ಟುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

news18-kannada
Updated:March 5, 2020, 5:29 PM IST
ಹೆಚ್​ಡಿಕೆ ಮತ್ತೆ ಸಿಎಂ ಆಗ್ತಾರೆ ಎಂದ ನಂಜಾವಧೂತ ಸ್ವಾಮಿ; ಚನ್ನಪಟ್ಟಣದಿಂದಲೇ ಗೆದ್ದು ಸಿಎಂ ಆಗ್ತಿನಿ ಅಂದ ಕುಮಾರಸ್ವಾಮಿ
ನಂಜಾವಧೂತ ಸ್ವಾಮೀಜಿ
  • Share this:
ಚನ್ನಪಟ್ಟಣ(ಮಾ. 05): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ದಿನ ಬರುತ್ತದೆ ಎಂದು ನಂಜಾವಧೂತ ಸ್ವಾಮೀಜಿ ಭವಿಷ್ಯ ನುಡಿದರು. ಇಲ್ಲಿಯ ದೊಡ್ಡಮಳೂರಿನಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದ ಅವರು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುರವ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಬಣ್ಣಿಸಿದರು.

ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರು ಮಾಡಿದ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರವಾಗಲಿಲ್ಲ. ಈಗ ರಾಜ್ಯದಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದಾರೆ. ಅವರೂ ಕೂಡ ಒಳ್ಳೆಯ ಕೆಲಸಗಳನ್ನ ಮಾಡಬೇಕಿದೆ. ಯಡಿಯೂರಪ್ಪ ಸರ್ಕಾರಕ್ಕೆ ಕುಮಾರಸ್ವಾಮಿ ಯಾವ ತೊಂದರೆಯನ್ನೂ ಮಾಡುವುದಿಲ್ಲ ಎಂದು ನಂಜಾವಧೂತರು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಕೂಡ ತಾನು ಯಡಿಯೂರಪ್ಪನ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಇದೇ ವೇಳೆ ಹೇಳಿದರು. ಬಿಜೆಪಿಯ ಅಸಮಾಧಾನಿತ ಶಾಸಕ ಮುರುಗೇಶ್ ನಿರಾಣಿ ಅವರು ತಮ್ಮನ್ನು ಭೇಟಿಯಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ತಾನು ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಪಪಡಿಸಿದರು.

ಇದನ್ನೂ ಓದಿ: Karnataka Budget: ರೈತರ ಪ್ರಗತಿ ಎಂದರೆ ಇದೇನಾ, ಹಸಿರು ಶಾಲು ಹಾಕ್ಕೊಂಡ್ರೆ ರೈತರು ಉದ್ದಾರ ಆಗ್ತಾರ?; ಬಿಎಸ್​ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ಆದಿಚುಂಚನಗಿರಿಗೆ ತಾನು ಹೋಗಿದ್ದ ಪೂಜ್ಯರ ಆಶೀರ್ವಾದಕ್ಕಾಗಿ ಅಷ್ಟೇ. ಮುರುಗೇಶ್ ನಿರಾಣಿ ಜೊತೆ ಯಾವ ರಾಜಕೀಯ ಚರ್ಚೆಗಳು ನಡೆದಿಲ್ಲ. ಯಡಿಯೂರಪ್ಪ ಬಹಳ ಶ್ರಮಪಟ್ಟು ಸಿಎಂ ಆಗಿದ್ದಾರೆ. ನಾನು ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಲ್ಲ. ಅಸ್ಥಿರಗೊಳಿಸುವ ಯಾವ ಗುಂಪುಗಳ ಜೊತೆಯೂ ನಾನಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ನಂಜಾವಧೂತರು ಭವಿಷ್ಯ ನುಡಿದಂತೆ ಕುಮಾರಸ್ವಾಮಿ ಕೂಡ ಮತ್ತೊಮ್ಮೆ ಸಿಎಂ ಆಗುವ ಆಶಯ ವ್ಯಕ್ತಪಡಿಸಿದರು.

ಜನರು ನಾನು ಮಾಡಿರುವ ಕೆಲಸವನ್ನು ನೆನಪಿಸಿಕೊಂಡು ಮತ್ತೆ ಅವಕಾಶ ಕೊಡುವ ವಿಶ್ವಾಸ ಇದೆ. ಜನ ಮತ್ತೆ ಅಧಿಕಾರ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಇನ್ನೂ ಆರೋಗ್ಯ ಇಟ್ಟುಕೊಂಡಿದ್ದೇನೆ ಎಂದವರು ತಿಳಿಸಿದರು.ಇನ್ನು, ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದರ ಬಗ್ಗೆ ತನಗಿಂತ ಬಿಜೆಪಿಯ ಸಚಿವರನ್ನೇ ಕೇಳಿ ಎಂದು ಕಿಚಾಯಿಸಿದರು. ಈ ಬಜೆಟ್ ಬಗ್ಗೆ ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಈ ಬಜೆಟ್ ಬಗ್ಗೆ ಯಾರಿಗೂ ಖುಷಿ ಇಲ್ಲ. ಅವರ ಮಂತ್ರಿಗಳಿಗೇ ಈ ಬಜೆಟ್ ಬಗ್ಗೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: 7 ವರ್ಷಗಳ ನಂತರ ವಿಚಾರವಾದಿ ದಾಬೋಲ್ಕರ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಪತ್ತೆ?; ಗೌರಿ, ಕಲಬುರ್ಗಿ ಪ್ರಕರಣಕ್ಕೂ ಸಿಗುತ್ತಾ ಮರುಜೀವ?

HD Kumaraswamy
ಹೆಚ್.ಡಿ. ಕುಮಾರಸ್ವಾಮಿ


ಚನ್ನಪಟ್ಟಣ ಬಿಟ್ಟು ಹೋಗಲ್ಲ ಎಂದ ಕುಮಾರಣ್ಣ

ರಾಮನಗರ ಬಿಟ್ಟು ಚನ್ನಪಟ್ಟಣ ಕ್ಷೇತ್ರ ಆರಿಸಿಕೊಂಡ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಮಾಗಡಿಗೆ ಹೋಗುತ್ತಾರೆ ಎಂಬಂತಹ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಕುಮಾರಸ್ವಾಮಿ ಈ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ.

ಚನ್ನಪಟ್ಟಣ ಜನತೆ ನನ್ನನ್ನು ಪ್ರೀತಿಯಿಂದ ಶಾಸಕನಾಗಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಒಂದೆ. ಅವರು ನನಗೆ ಎರಡು ಕಣ್ಣುಗಳಿದ್ದಂತೆ. ಚನ್ನಪಟ್ಟಣ ಬಿಟ್ಟು ಮಾಗಡಿಗೆ ಹೋಗುತ್ತಾನೆ ಎಂತ ಸುಮ್ಮನೆ ಕಥೆ ಹಬ್ಬಿಸಿದ್ದಾರೆ.  ಮಾಗಡಿಯ ಶಾಸಕರು ಸಮರ್ಥರಿದ್ಧಾರೆ. ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಅಲ್ಲಿ ಕಾರ್ಯಕರ್ತರ ಪಡೆಯೇ ಇದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ವರದಿ: ಎ.ಟಿ. ವೆಂಕಟೇಶ್

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: March 5, 2020, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories