ಬೆಂಗಳೂರು; ಕಾಂಗ್ರೆಸ್ (Congress) ಗಿಫ್ಟ್ ಕೂಪನ್ (Gift Coupon) ವಿತರಣೆ ಮಾಡಿ ಗೆದ್ದಿದೆ. ನಿಖಿಲ್ ಕುಮಾರಸ್ವಾಮಿಯನ್ನ (Nikhil Kumaraswamy) ನ್ಯಾಯಯುತವಾಗಿ ಸೋಲಿಸಿಲ್ಲ ಅಂತ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ. 5 ಸಾವಿರ ಮೊತ್ತದ ಗಿಫ್ಟ್ ಕೂಪನ್ ಹಂಚಿ ನಿಖಿಲ್ ಅವರನ್ನು ರಾಮನಗರದಲ್ಲಿ (Ramanagara) ಸೋಲಿಸಿದ್ದಾರೆ. 45 ಕ್ಷೇತ್ರಗಳಲ್ಲಿ ಈ ರೀತಿ ಗಿಫ್ಟ್ ಕೂಪನ್ ಹಂಚಿದ್ದಾರೆ. ಒಟ್ಟಾರೆ ₹30 ಕೋಟಿ ಗಿಫ್ಟ್‌ಗಳನ್ನ ಹಂಚಿಕೆ ಮಾಡಿದ್ದಾರೆ. ಕುಣಿಗಲ್ ರಂಗನಾಥ್, ರಾಮನಗರ ಇಕ್ಬಾಲ್ ಹುಸೇನ್, ಆರ್‌ಆರ್ ನಗರ (RR Nagar) ಕುಸುಮಾ ಹಂಚಿದ ಕೂಪನ್‌ಗಳು ಸಿಕ್ಕಿವೆ ಅಂತ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆಡಿಎಸ್‌ನ ಅಂತಿಮ ಸಂಸ್ಕಾರ ಯಾವಾಗ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ತಿರುಗೇಟು ಕೊಟ್ಟ ಎಚ್‌ಡಿಕೆ, ಮುಂದೆ ಅಂತಿಮ ಸಂಸ್ಕಾರ ಯಾರದ್ದಾಗುತ್ತೆ ಅಂತ ಜನ ತೀರ್ಮಾನ ಮಾಡ್ತಾರೆ. ಲೋಕಸಭೆಯಲ್ಲಿ 180 ರಿಂದ 38ಕ್ಕೆ ಇಳಿದರಲ್ಲ, ಯಾಕೆ ಕಾಂಗ್ರೆಸ್ ವಿಸರ್ಜನೆ ಮಾಡಲಿಲ್ಲ. ಈ ದುರಹಂಕಾರ ಬಹಳ ದಿನ ನಡೆಯಲ್ಲ. ಕಾಲ ಚಕ್ರ ಹೀಗೆ ಇರಲ್ಲ, ಮೇಲಿದ್ದವನು ಕೆಳಗೆ ಇಳಿಯಬೇಕು. ನಿಮ್ಮ ದುರಂಕಾರದ ನಡೆಯನ್ನೇ ಸವಾಲಾಗಿ ಸ್ವೀಕಾರ ಮಾಡುತ್ತೇನೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Congress Guarantee: 2 ಸಾವಿರ ಪಡೆಯಲು 'ಗೃಹಲಕ್ಷ್ಮಿ'ಯರ ಸಾಹಸ, ಆಧಾರ್ ಜೋಡಣೆಗೆ ಸೈಬರ್ ಸೆಂಟರ್ ಮುಂದೆ ಮಹಿಳೆಯರ ಕ್ಯೂ!
ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಇಬ್ರಾಹಿಂ ರಾಜೀನಾಮೆ ನೀಡಿದ್ದರು. ಆದರೆ ನಿನ್ನೆಯ ವಿಮರ್ಶಾತ್ಮಕ ಸಭೆ, ಕಾರ್ಯಕಾರಿಣಿ ಸಭೆಯಲ್ಲಿ ಇವರನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ. ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ