HD Kumaraswamy: ಮೈತ್ರಿ ಸರ್ಕಾರ ಇದ್ದಾಗಲೂ ಕಮೀಷನ್ ದಂಧೆ ಇತ್ತು! ಎಚ್‌ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

"ನಾನು ಸಿಎಂ ಆಗಿದ್ದಾಗಲೂ ಕಮೀಷನ್ ದಂಧೆ ನಡೆಯುತ್ತಿತ್ತು. ಆದರೆ ನಾನು ಎಂದೂ ನನ್ನ ಕಚೇರಿಯಲ್ಲಿ ಅದಕ್ಕೆಲ್ಲ ಅವಕಾಶವನ್ನೇ ನೀಡಿರಲಿಲ್ಲ" ಅಂತ ಕುಮಾರಸ್ವಾಮಿ ಹೇಳಿದ್ದಾರೆ. "ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿ. ಈ ಕಮಿಷನ್ ವ್ಯವಹಾರವನ್ನು ಬುಡ ಸಮೇತ ಕಿತ್ತು ಹಾಕುತ್ತೇನೆ" ಎಂದು ಅವರು ಭರವಸೆ ನೀಡಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

  • Share this:
ಮೈಸೂರು: ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧದ ಕಮೀಷನ್ ದಂಧೆ (Commission Scam) ಆರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ (President of Contractors Association) ಕೆಂಪಣ್ಣ (Kempanna) ಅವರು ನೀಡಿರುವ ದೂರು, ಮಾಡಿರುವ ಆರೋಪಗಳನ್ನೇ ಅಸ್ತ್ರವನ್ನಾಗಿ ಬಳಿಸಕೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷಗಳು (Opposition parties) ಸಜ್ಜಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ (Formar CM) ಎಚ್‌ಡಿ ಕುಮಾರಸ್ವಾಮಿ (HD Kumaraswamy) ಬಾಂಬ್‌ ಒಂದನ್ನು ಸಿಡಿಸಿದ್ದಾರೆ. “ಮೈತ್ರಿ ಸರ್ಕಾರದ (Alliance Government) ಅವಧಿಯಲ್ಲಿ ನಾನು ಸಿಎಂ ಆಗಿದ್ದಾಗಲೂ ಕೂಡ ಕಮೀಷನ್ ದಂಧೆ ನಡೆಯುತ್ತಿತ್ತು” ಅಂತ ಎಚ್‌ಡಿಕೆ (HDK) ಸ್ಫೋಟಕ ಹೇಳಿಕೆ ನೀಡಿದ್ದಾರೆ.

“ಮೈತ್ರಿ ಸರ್ಕಾರ ಇದ್ದಾಗಲೂ ಕಮೀಷನ್ ದಂಧೆ ಇತ್ತು”

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್​ನವರು ಕಮಿಷನ್ ದಂಧೆಯಲ್ಲಿದ್ರು. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್​​​​ ಸಚಿವರಿಗೆ ಅವಕಾಶ ನೀಡಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಂದ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕಲಾಗಿತ್ತು ಅಂತ ಗಂಭೀರ ಆರೋಪ ಮಾಡಿದ್ದಾರೆ.

“ನಾನು ಕಮೀಷನ್ ದಂಧೆಗೆ ಅವಕಾಶ ನೀಡಿರಲಿಲ್ಲ”

ನಾನು ಸಿಎಂ ಆಗಿದ್ದಾಗಲೂ ಕಮೀಷನ್ ದಂಧೆ ನಡೆಯುತ್ತಿತ್ತು. ಆದರೆ ನಾನು ಎಂದೂ ನನ್ನ ಕಚೇರಿಯಲ್ಲಿ ಅದಕ್ಕೆಲ್ಲ ಅವಕಾಶವನ್ನೇ ನೀಡಿರಲಿಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ನಾನು ಕಮೀಷನ್ ದಂಧೆಗೆ ಬ್ರೇಕ್ ಹಾಕಿದೆ. ಹೀಗಾಗಿ ಸುಲಭವಾಗಿ ಸಂಪಾದಿಸುವುದು ನಿಂತಿದ್ದಕ್ಕೆ ನನ್ನ ಸರ್ಕಾರ ತೆಗೆದ್ರು. 3 ಜನ ಬಿಡಿಎ ಸಭೆಗೆ ಬಂದರೆ ಇಷ್ಟು ಹಣ ನೀಡಬೇಕಿತ್ತು. ನಾನು ಬಂದ್ಮೇಲೆ ಅದು ನಿಂತಿತು ಎಂದು ಅಧಿಕಾರಿ ಹೇಳಿದ್ರು ಅಂತ ಎಚ್‌ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: DK Shivakumar: ಬಿಜೆಪಿಯವರು ಬೆಳ್ಳುಳ್ಳಿ-ಅಡಿಕೆ ಬೆಳೆದು ಆಸ್ತಿ ಮಾಡಿದ್ರಾ? ಆಪ್ತನಿಗೆ ನೋಟಿಸ್ ಕೊಟ್ಟಿದ್ದಕ್ಕೆ ಡಿಕೆಶಿ ಕಿಡಿ!

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ

ನಾನು ಸಿಎಂ ಆಗಿದ್ದಾಗ ಬಡ್ತಿ ಕೊಟ್ಟವರಿಗೆ ಪೋಸ್ಟ್ ಕೊಡದೇ ಆಟ ಆಡಿಸಿದರು. ಕಾಂಗ್ರೆಸ್​ನವರಿಗೂ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್​ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೆಂಪಣ್ಣಗೆ ಎಚ್‌ಡಿ ಕುಮಾರಸ್ವಾಮಿ ಸ,ವಾಲು

ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಬಿಲ್ ಗಳನ್ನು ಪಾಸು ಮಾಡಲು 5 ಪರ್ಸೆಂಟ್ ಕಮೀಶನ್ ಪಡೆಯಲಾಗುತ್ತಿತ್ತು ಎಂಬ ಆರೋಪವನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಳ್ಳಿಹಾಕಿದರು. ನಾನು ಎರಡು ಅವಧಿಗಳಿಗೆ ಅಧಿಕಾರದಲ್ಲಿದ್ದಾಗ ನನ್ನ ಕಚೇರಿಯಲ್ಲಿ ಯಾವತ್ತೂ ಕಮೀಷನ್ ನಡೆದಿಲ್ಲ, ಕೆಂಪಣ್ಣನವರು ಎಲ್ಲರ ಕಾಲದಲ್ಲೂ ನಡೆದುಕೊಂಡು ಬಂದಿದೆ ಅಂತ ಹೇಳಿದ್ದಾರೆ, ಅವರು ನನ್ನ ಮುಂದೆ ಈ ಮಾರು ಹೇಳಲಿ ಅಂತ ಸವಾಲು ಹಾಕಿದರು.

ಇದನ್ನೂ ಓದಿ: KGF Babu: 350 ಕೋಟಿ ಹಂಚಲು ಮುಂದಾಗಿದ್ದ KGF ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್!

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಪೆರ್ಸೆಂಟೇಜ್ ವ್ಯವಹಾರಕ್ಕೆ ಬ್ರೇಕ್”

ಸಿದ್ದರಾಮಯ್ಯ ಬಂದು ಪರ್ಸಂಟೇಜ್ ವ್ಯವಹಾರವನ್ನು ಕಡಿಮೆ ಮಾಡಲಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಯಾರೆಲ್ಲ ಏನು ಮಾಡಿದರು ಅಂತಾ ಬಿಡಿಸಿ ಹೇಳಿದರೆ ದೊಡ್ಡ ಕತೆ ಆಗುತ್ತದೆ ಅಂತ ಎಚ್‌ಡಿಕೆ ಹೇಳಿದ್ರು. ಮೊದಲು ವಿಧಾನಸೌಧದಿಂದಲೇ ಸ್ವಚ್ಚತೆ ಶುರು ಮಾಡಬೇಕು. ನನ್ನ ಪಕ್ಷಕ್ಕೆ ಸ್ವತಂತ್ರ ಅಧಿಕಾರ ಕೊಡಿ, ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿ. ಈ ಕಮಿಷನ್ ವ್ಯವಹಾರವನ್ನು ಬುಡ ಸಮೇತ ಕಿತ್ತು ಹಾಕುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಇನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನೂ ಪ್ರಸ್ತಾಪ ಮಾಡುತ್ತೇನೆ. ಜನರ ಪರವಾಗಿ ಎಲ್ಲ ವಿಷಯಗಳನ್ನೂ ಹೇಳುತ್ತೇನೆ, ಸರ್ಕಾರದಿಂದ ಉತ್ತರ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
Published by:Annappa Achari
First published: