ದೇವನಹಳ್ಳಿ (ಡಿ.08): ಗುಜರಾತ್ನಲ್ಲಿ ಬಿಜೆಪಿ ಗೆಲುವು ನಿರೀಕ್ಷಿತವಾಗಿತ್ತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿ (Kalburagi) ವಿಮಾನ ನಿಲ್ದಾಣದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ (Congress) ಕೂಡಾ ಇದೇ ರೀತಿ ಫಲಿತಾಂಶ ಬರುತ್ತೆ ಅಂತ ಮೊದಲೇ ನಿರೀಕ್ಷೆ ಮಾಡಿತ್ತು. ಗುಜರಾತ್ (Gujarath) ನಲ್ಲಿ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಶಕ್ತಿ ಕುಂದಿದೆ. ಗುಜರಾತ್ ಫಲಿತಾಂಶ ಬಿಜೆಪಿ ಸಾಧನೆ ಅಲ್ಲ. ಗುಜರಾತ್ ಚುನಾವಣೆ ರಾಜ್ಯಕ್ಕೆ ದಿಕ್ಸೂಚಿ ಆಗಲಾರದು ಎಂದು ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.
ಗುಜರಾತ್, ಕರ್ನಾಟಕ ಪಾಲಿಟಿಕ್ಸ್ ಬೇರೆ ಬೇರೆ
ಚುನಾವಣಾ ಫಲಿತಾಂಶದ ಬಗ್ಗೆ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಗುಜರಾತ್ಗೂ ಕರ್ನಾಟಕಕ್ಕೂ ಎಷ್ಟು ಕಿಲೋ ಮೀಟರ್ ದೂರವಿದೆ. ಗುಜರಾತ್ ರಾಜಕಾರಣವೇ ಬೇರೆ, ಕರ್ನಾಟಕದ ರಾಜಕಾರಣವೇ ಬೇರೆ. ಅಲ್ಲಿನ ಫಲಿತಾಂಶ ನೋಡಿ ಕನ್ನಡಿಗರು ಮತ ಹಾಕೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಮೋದಿ ಮ್ಯಾಜಿಕ್ ವರ್ಕ್ ಆಗಲ್ಲ
ರಾಜ್ಯದಲ್ಲಿ ಮೋದಿ ಮ್ಯಾಜಿಕ್ ವರ್ಕ್ ಆಗೋದಿಲ್ಲ. ರಾಜ್ಯದ ಜನರಿಗೆ ಮೋದಿ ಮ್ಯಾಜಿಕ್ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮೋದಿ ಅವರು ಬರೀ ಆಕಾಶ ತೋರಿಸಿ ಹೋಗ್ತಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಕಿಡಿ
ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಆ ಬಗ್ಗೆ ಲಘುವಾಗಿ ಮಾತನಾಡಲ್ಲ, ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಅಂತ ನಾನು ಹೇಳೋದಿಲ್ಲ. ಈ ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ನನ್ನು ಬಿ ಟೀಮ್ ಅಂದಿದ್ದರು. ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಅದನ್ನು ಬೇರೆಯವರ ಮೇಲೆ ಹಾಕಿ, ಅವರಿಂದ ನಮಗೆ ತೊಂದರೆ ಆಯ್ತು ಅನ್ನೋದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷವಾದ ವ್ಯಾಖ್ಯಾನದ ಅವಶ್ಯಕತೆ ಇಲ್ಲ
ದೇವನಹಳ್ಳಿಯಲ್ಲಿ ವೇಣುಗೋಪಾಲಸ್ವಾಮಿ ದರ್ಶನ ಪಡೆದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಮಾತಾಡಿದ್ರು. ಮೊದಲೇ ಪಲಿತಾಂಶದ ಬಗ್ಗೆ ಗೊತ್ತಿದ್ದೇ ಅಲ್ಲಾ. ಇದಕ್ಕೆ ವಿಶೇಷವಾದ ವ್ಯಾಖ್ಯಾನದ ಅವಶ್ಯಕತೆ ಇಲ್ಲ ಎಂದು ಹೇಳಿದ್ರು. ಕಳೆದ 5 ವರ್ಷಗಳಿಂದ ಗುಜರಾತ್ ನಲ್ಲಿ ವಿರೋಧ ಪಕ್ಷಗಳೇ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಿದೆ ಅನ್ನೋದು ಮೊದಲೇ ಎಲ್ಲರಿಗೂ ಗೊತ್ತಿದ್ದ ವಿಷಯ ಎಂದು ಎಚ್ಡಿಕೆ ಹೇಳಿದ್ರು.
ಸರ್ಕಾರದ ಕರ್ಮಕಾಂಡ ನೋಡಿ ಜನ ಬೇಸತ್ತಿದ್ದಾರೆ
ರಾಜ್ಯದ ಮುಖ್ಯಮಂತ್ರಿಗಳು ಹೇಳ್ತಿದ್ರಲ್ವಾ, ಗುಜರಾತ್ ಫಲಿತಾಂಶ ರಾಜ್ಯಕ್ಕೂ ತಟ್ಟುತ್ತೆ ಅತ , ಆದ್ರೆ ಗುಜರಾತ್ ನಲ್ಲಿರುವ ವಾತಾವರಣವೇ ಬೇರೆ ರಾಜ್ಯದ ವಾತಾವರಣವೇ ಬೇರೆ. ಈ ಸರ್ಕಾರದ ಕರ್ಮಕಾಂಡಗಳನ್ನು ನೋಡಿ ಜನ ಬೇಸತ್ತು ಹೋಗಿದ್ದಾರೆ. ಗುಜರಾತ್ ನ ಫಲಿತಾಂಶವನ್ನೆ ರಾಜ್ಯದಲ್ಲೂ ಬಿಜೆಪಿ ಕನಸು ಕಂಡ್ರೆ ಕನ್ನಡಿಗರು ಅದಕ್ಕೆ ಮಾರೂ ಹೋಗೋದಿಲ್ಲ ಎಂದು ಹೆಚ್ಡಿಕೆ ಹೇಳಿದ್ರು.
ಹಿಮಾಚಲ ಪ್ರದೇಶದ ರಿಸಲ್ಟ್ ಬಗ್ಗೆ ಎಚ್ಡಿಕೆ ಮಾತು
ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಬಗ್ಗೆ ಮಾತಾಡಿದ ಹೆಚ್ಡಿಕೆ, ಮೊದಲಿನಿಂದಲೂ ಹಿಮಾಚಲ ಪ್ರದೇಶದಲ್ಲಿ ಒಂದು ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿ ಅಧಿಕಾರವನ್ನ ಜನ ನೀಡ್ತಿದ್ದಾರೆ. ಅದೇ ಈ ಬಾರಿಯೂ ಮುಂದುವರೆದಿದೆ ಎಂದು ಕುಮಾರಸ್ವಾಮಿ ಹೇಳಿದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ