Karnataka Assembly Election: ರಾಜ್ಯದಲ್ಲಿ ಇದೇ ಡಿಸೆಂಬರ್‌ನಲ್ಲಿ ಎಲೆಕ್ಷನ್! ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ

ರಾಜ್ಯದಲ್ಲಿ ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳ ಬದಲಿಗೆಇದೇ ವರ್ಷ ಡಿಸೆಂಬರ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಅಂತ ಎಚ್‌ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣೆ ಗೆಲುವಿಗಾಗಿ ಈಗಿನಿಂದಲೇ ತಯಾರಿ ನಡೆಸಿ ಅಂತ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ

ಎಚ್​.ಡಿ. ಕುಮಾರಸ್ವಾಮಿ

  • Share this:
ಬೆಂಗಳೂರು: ಕರ್ನಾಟಕ ರಾಜ್ಯ (Karnataka State) ವಿಧಾನಸಭಾ ಚುನಾವಣೆ (Assembly Election) ಯಾವಾಗ? ಮುಂದಿನ ವರ್ಷ ಅಂದರೆ 2023ರಲ್ಲಿ ಚುನಾವಣೆ ಅಲ್ವಂತೆ. ಬದಲಾಗಿ ಇದೇ ವರ್ಷ ಅಂದರೆ 2022ರ ಡಿಸೆಂಬರ್‌ನಲ್ಲಿ (December) ರಾಜ್ಯದ ವಿಧಾನಸಭಾ ಚುನಾವಣೆ ನಡೆಯುತ್ತದೆಯಂತೆ. ಹೀಗಂತ ಮಾಜಿ ಮುಖ್ಯಮಂತ್ರಿ, (Ex CM) ಜೆಡಿಎಸ್ ನಾಯಕ (JDS Leader) ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದಿದ್ದಾರೆ. ನಿನ್ನೆ ಬೆಂಗಳೂರಿನ (Bengaluru) ಜೆಡಿಎಸ್​ ರಾಜ್ಯ ಕಚೇರಿ (JDS State Office) ಜೆಪಿ ಭವನದಲ್ಲಿ (JP Bhavan) ನಡೆದ 'ಜನತಾಮಿತ್ರ' ಕಾರ್ಯಕ್ರಮದಲ್ಲಿ (Janatamithra Program) ಭಾಗಿಯಾಗಿದ್ದ ಎಚ್‌ಡಿಕೆ (HDK), ಇದೇ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿ (Preparation) ಅಂತ ತಮ್ಮ ಪಕ್ಷದ ಕಾರ್ಯಕರ್ತರಿಗೆ (Party Workers) ಕರೆ ನೀಡಿದ್ದಾರೆ.

 “ಈ ವರ್ಷದ ಡಿಸೆಂಬರ್‌ನಲ್ಲಿ ಚುನಾವಣೆ”

ರಾಜ್ಯದಲ್ಲಿ ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳ ಬದಲಿಗೆಇದೇ ವರ್ಷ ಡಿಸೆಂಬರ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಅಂತ ಎಚ್‌ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣೆ ಗೆಲುವಿಗಾಗಿ ಈಗಿನಿಂದಲೇ ತಯಾರಿ ನಡೆಸಿ ಅಂತ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

“ಬೆಂಗಳೂರಲ್ಲಿ ಜೆಡಿಎಸ್‌ ಗೆಲುವಿಗೆ ಉತ್ತಮ ಅವಕಾಶ ಇದೆ”

ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರು ಹಂತ-ಹಂತವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆ ತೆಗೆದುಹಾಕಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್​ಗೆ ಇದೆ ಅಂತ ಎಚ್‌ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: KN Rajanna: ದೇವೇಗೌಡರ ಬಗ್ಗೆ ಕೆ ಎನ್ ರಾಜಣ್ಣ ನೀಡಿದ ಹೇಳಿಕೆಗೆ ಆಕ್ರೋಶ

“ಜೆಡಿಎಸ್‌ನಲ್ಲಿ ಬಲವಿಲ್ಲ ಎಂಬ ಭಾವನೆದಿಂದ ಹೊರಬನ್ನಿ”

ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಯತ್ನ ನಡೆಸಿರುವ ಕುಮಾರಸ್ವಾಮಿ, ಜೆಡಿಎಸ್ ಬಲವಿಲ್ಲ ಎಂಬ ಭಾವನೆಯಿಂದ ದೂರವಿರಬೇಕು ಎಂದರು. ನಮ್ಮ ಪಕ್ಷದ ಕಾರ್ಯಕರ್ತರು ಆತ್ಮವಿಶ್ವಾಸದಿಂದ ನಮ್ಮ ಗುರಿ ತಲುಪಲು ಶ್ರಮಿಸಬೇಕು ಎಂದು ಹೇಳಿದರು.  ಪ್ರತಿ ಮನೆಯನ್ನು ತಲುಪಿ ನಾಗರಿಕರ ಆದ್ಯತೆಗಳನ್ನು ಅಳೆಯಲು ಜೆಡಿಎಸ್ ಕಾರ್ಯಕರ್ತರಿಗೆ ಎಚ್‌ಡಿಕೆ ಸಲಹೆ ನೀಡಿದರು.

“ನಾವೇನು ಅಧಿಕಾರವಿದ್ದಾಗ ಹಣ ಲೂಟಿ ಮಾಡಿಲ್ಲ”

ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು.‌ ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್​ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎಂದರು.

“ಐದು ವರ್ಷ ಅವಕಾಶ ಕೊಟ್ಟರೆ ರಾಜ್ಯದ ಅಭಿವೃದ್ಧಿ”

ಭಗವಂತನ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ‌ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ನನಗೆ ಸಿಎಂ ಆಗಿ ಆಡಳಿತ ನಡೆಸಲು ಈ ಬಾರಿ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು, ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Politics: ರಾಜಣ್ಣನಿಗೆ ದೇವೇಗೌಡರ ಚಾಲೆಂಜ್; ಕೈ ನಾಯಕನ ವಿರುದ್ಧ ಗೌಡ್ರ ಮಕ್ಕಳು, ಮೊಮ್ಮಕ್ಕಳು ಫುಲ್ ಗರಂ

“ಆಗಸ್ಟ್‌ನಿಂದ ರಾಜ್ಯಾದ್ಯಂತ ಪಂಚರತ್ನ ಯಾತ್ರೆ”

ಬೆಂಗಳೂರು ನಗರ ಪಾಲಿಕೆ ಚುನಾವಣೆಗೆ ಮುನ್ನವೇ ಪ್ರಾದೇಶಿಕ ಪಕ್ಷಕ್ಕೆ ಬೆಂಬಲವನ್ನು ಕ್ರೋಢೀಕರಿಸುವ ಪ್ರಯತ್ನದಲ್ಲಿ 'ಜನತಾ ಮಿತ್ರ ಯಾತ್ರೆ' ಬೆಂಗಳೂರಿನ ಪ್ರತಿ ಪುರಸಭೆಯ ವಾರ್ಡ್‌ನಲ್ಲಿ ನಡೆಯಲಿದೆ. ಇದೇ ವೇಳೆ ಆಗಸ್ಟ್ ತಿಂಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ 'ಪಂಚರತ್ನ ಯಾತ್ರೆ'ಯನ್ನು ಕೈಗೆತ್ತಿಕೊಳ್ಳುವುದಾಗಿ ಕುಮಾರಸ್ವಾಮಿ ಘೋಷಿಸಿದರು. ಪಂಚರತ್ನ ಯಾತ್ರೆ ಗ್ರಾಮೀಣ ಕರ್ನಾಟಕಕ್ಕೆ ಸಮರ್ಪಿಸಲಿದ್ದು, ಆಗಸ್ಟ್‌ನಿಂದ ಮೂರು ತಿಂಗಳು ಹಳ್ಳಿಗಳಲ್ಲಿಯೇ ಇರುತ್ತೇನೆ ಎಂದರು.
Published by:Annappa Achari
First published: