JDS ಅಭ್ಯರ್ಥಿಗೆ ಶಾಕ್ ನೀಡಿದ ಹೆಚ್​ಡಿ ಕುಮಾರಸ್ವಾಮಿ ಆಪ್ತ

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ

ಬಿಜೆಪಿ ಶಾಸಕ ಸಿ.ಟಿ.ರವಿ(BJP MLA CT Ravi) ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಯ ಹಿಂದೆ ಒಂದಾಗಿವೆ ಎಂಬ ಮಾತಿಗಳು ಕೇಳಿ ಬರುತ್ತಿವೆ.

  • Share this:

ಚಿಕ್ಕಮಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಎಂಎಲ್​ಸಿ ಎಸ್​ಎಲ್​ ಭೋಜೇಗೌಡರು (SL Bhojegowda) ಜೆಡಿಎಸ್​ಗೆ ಶಾಕ್ ನೀಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ (Congress Candidate) ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ(Social Media) ವೈರಲ್ ಆಗಿದೆ. ಚಿಕ್ಕಮಗಳೂರು ಕ್ಷೇತ್ರದ (Chikkamagaluru Constituency) ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರಿಗೆ ಮತ ಹಾಕುವಂತೆ ಕರೆ ಭೋಜೇಗೌಡರು ಕರೆ ನೀಡಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಕಣದಲ್ಲಿದ್ದಾರೆ.


ಬಿಜೆಪಿ ಶಾಸಕ ಸಿ.ಟಿ.ರವಿ(BJP MLA CT Ravi) ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಯ ಹಿಂದೆ ಒಂದಾಗಿವೆ ಎಂಬ ಮಾತಿಗಳು ಕೇಳಿ ಬರುತ್ತಿವೆ.


ಕಾಫಿನಾಡಲ್ಲಿ ಖರ್ಗೆ ಮತಬೇಟೆ


ಕಾಫಿನಾಡಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು, ತರೀಕೆರೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶವನ್ನೂ ನಡೆಸಲಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಮೈದಾನದಲ್ಲಿ ಮೂರು ಕ್ಷೇತ್ರದ ಸಮಾವೇಶ ನಡೆಯಲಿದೆ.




ಶೀಘ್ರವೇ ಜೆಡಿಎಸ್​ ಪ್ರಣಾಳಿಕೆ ಬಿಡುಗಡೆ


ರಾಜ್ಯ ವಿಧಾನಸಭಾ ಚುನಾವಣೆಗೆ JDS ಭರ್ಜರಿ ತಯಾರಿ ನಡೆಸುತ್ತಿದೆ.. ಶೀಘ್ರದಲ್ಲೇ ಜೆಡಿಎಸ್‌ನಿಂದ ಅಧಿಕೃತ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಜೆಡಿಎಸ್​ ಪಂಚರತ್ನ ಯೋಜನೆ ಜೊತೆ ಮತ್ತಷ್ಟು ಕಾರ್ಯಕ್ರಮ ಘೋಷಣೆ ಮಾಡಲಿದೆ.


ಇದನ್ನೂ ಓದಿ:  Manikanth Rathod: ತನ್ನ ಮೇಲೆ 40 ಕೇಸ್‌ ಇರೋ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಬಗ್ಗೆ ನಿಮಗೆ ತಿಳಿಯದ ವಿಚಾರಗಳು


ಜೊತೆಗೆ ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, 28 ಕ್ಷೇತ್ರಗಳಲ್ಲಿ ಹತ್ತು ಕ್ಷೇತ್ರಗಳನ್ನ ಗೆಲ್ಲುವ ಗುರಿ ಹೊಂದಿದೆ. ಜೆಡಿಎಸ್ ಪ್ರಣಾಳಿಕೆಯ ಎಕ್ಸ್‌ಕ್ಲೂಸಿವ್‌ ಡೀಟೈಲ್ಸ್‌ ನ್ಯೂಸ್‌ 18ಗೆ ಸಿಕ್ಕಿದೆ.

First published: