H D Kumaraswamy: ಸಿಂಗಾಪುರ ಮಾಡ್ತೀವಿ ಎಂದ್ರು ಈಗ ಸಿಲಿಕಾನ್ ಸಿಟಿ ಹೋಗಿ ಸಿಂಕ್ ಸಿಟಿ ಆಗಿದೆ- ಸರ್ಕಾರ ವಿರುದ್ಧ HDK ಕಿಡಿ

ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಬಂದಿದ್ದ ಕೇಂದ್ರ ತಂಡ ಬಂದ ಪುಟ್ಟ ಹೋದ ಪುಟ್ಟ ಆದಂತಾಯಿತೇ ಎಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

  • Share this:

ಬೆಂಗಳೂರು (ಸೆ. 14): ಮಳೆಯಿಂದ ರಾಜ್ಯದಲ್ಲಿ ಉಂಟಾದ ಅನಾಹುತಗಳ ಬಗ್ಗೆ ಮಾತಾಡಿ ಮಾಜಿ ಸಿಎಂ H.D ಕುಮಾರಸ್ವಾಮಿ (Kumaraswamy) ವಿಧಾನಸಭೆಯಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ನಿಯಮ 69ರ  ಅಡಿಯಲ್ಲಿ ಅತಿವೃಷ್ಟಿ (Heavy Rain) ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಕುಮಾರಸ್ವಾಮಿ ರಾಜ್ಯ, ಹಾಗೂ ಕೇಂದ್ರ ಸರ್ಕಾರದ (State And Central Government)  ವಿರುದ್ಧ ಕಿಡಿಕಾರಿದ್ದಾರೆ. ನಮ್ಮ ಬಿಡಿಎ ಮಾಡಿದ ಅನಾಹುತ ಸರಿಪಡಿಸಿಕೊಳ್ಳಲು ಸಾಧ್ಯವಾಗದ ರೀತಿ ಆಗಿದೆ. ಜನರು ಮನೆಗಳಿಗೆ ನೀರು ನುಗ್ಗಿದ್ರಿಂದ ಹೋಟೆಲ್‌ನಲ್ಲಿ ವಾಸ ಮಾಡುವಂತಾಯ್ತು. ನಾನಂತು ಬೆಂಗಳೂರು ನಗರ (Bengaluru City) ವಿಚಾರದಲ್ಲಿ ನಗರಕ್ಕೆ ಮಾರಕ ಆಗುವ ತೀರ್ಮಾನ ತೆಗೆದುಕೊಂಡಿರಲಿಲ್ಲ. ಮನೆಗಳಿಗೆ ನೀರು ನುಗ್ಗಿ ಹೋಟೆಲ್‌ನಲ್ಲಿ ವಾಸವಾಗಿದ್ದಾರೆ.


ಬಿಎಸ್​ವೈ ಹೇಳಿದ ಕೆಲಸವೇ ಆಗಿಲ್ಲ

ದಾಸರಹಳ್ಳಿ ಶಾಸಕರು ಯಡಿಯೂರಪ್ಪ ಸಿಎಂ ಆಗಿದ್ದಾಗ ಮತ್ತು ಬೊಮ್ಮಾಯಿಗೆ ಮನವಿ ನೀಡಿದ್ದಾರೆ. ಇಂತಿಷ್ಟು ಕೆಲಸ ಆಗಬೇಕು ಅಂತ ಮನವಿ ಕೊಡ್ತಾರೆ. 405 ಕೋಟಿ ಅಂದಾಜು ವೆಚ್ಚ ಮಾಡಿ ಕಾರ್ಪೋರೇಷನ್‌ಗೆ ಕಳಿಸಿದ್ದಾರೆ. ಆದ್ರೆ ಈವರೆಗೂ ಆಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ಯಾಕೆ?

ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕುಮಾರಸ್ವಾಮಿ, ಮೇಕೆದಾಟು ಪಾದಯಾತ್ರೆ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. 1985ರಲ್ಲಿ ಲಕ್ಷ್ಮಣ ರಾವ್ ಸಮಿತಿ ವರದಿಯಲ್ಲಿ ಸಾವಿರ ಕೆರೆಗಳ ಒತ್ತುವರಿ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬೆಂಗಳೂರು ಜಲಾವೃತ ಆಗ್ತಿದೆ. ಬೆಂಗಳೂರಿನಲ್ಲಿ ಸಾವಿರ ಕೆರೆಗಳನ್ನು ಉಳಿಸಿಕೊಂಡಿದ್ರೆ ಮೇಕೆದಾಟು ಪಾದಯಾತ್ರೆ ಮಾಡೋ ಅಗತ್ಯ ಇರ್ಲಿಲ್ಲ ಕಾಂಗ್ರೆಸ್​​ಗೆ ಹೆಚ್​ ಡಿ ಕುಮಾರಸ್ವಾಮಿ ಟಾಂಗ್​ ಕೊಟ್ಟಿದ್ದಾರೆ.



ಕೆರೆ ಉಳಿಸಿಕೊಂಡಿದ್ರೆ ಪ್ರವಾಹದ ಸ್ಥಿತಿ ಬರ್ತಿರಲಿಲ್ಲ

ಕೆಂಪೇಗೌಡರು ಉಳಿಸಿದ ಕೆರೆಗಳು ಇವಾಗ ಇದ್ದಿದ್ರೆ ಪ್ರವಾಹದ ಸ್ಥಿತಿಯೇ ಬರ್ತಿರಲಿಲ್ಲ. ಇವಾಗ ಯಾರು ಆ ಕೆರೆಗಳನ್ನು ಮುಚ್ಚಿದ್ದಾರೆ ಎಂಬುದನ್ನು ಹೇಳಬೇಕು ಅಲ್ವಾ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿದ್ದಾರೆ.

ಬಂದ ಪುಟ್ಟ ಹೋದ ಪುಟ್ಟ

ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಬಂದಿದ್ದ ಕೇಂದ್ರ ತಂಡ ಬಂದ ಪುಟ್ಟ ಹೋದ ಪುಟ್ಟ ಆದಂತಾಯಿತೇ ಎಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ತಂಡದ ಮುಂದೆ ಜನರು ಹಾವೇರಿಯಲ್ಲಿ ಪರಿಹಾರ ಕೊಡಿಸಿ ಇಲ್ಲವಾದರೆ, ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ‌ ಎಂದು ಗಮನಸೆಳೆದರು.



ಕೇಂದ್ರ ಸರ್ಕಾರದ ಮನವೊಲಿಸಬೇಕು


ಪ್ರಕೃತಿ ವಿಕೋಪದ ಸಂಕಷ್ಟಕ್ಕೆ ನಾವೇ ನಮ್ಮನ್ನು ದೂಡಿಕೊಂಡಿದ್ದೇವೆ. ಅತಿವೃಷ್ಟಿ ಅನಾಹುತ 2004-05 ರಲ್ಲೂ 2009 ರಲ್ಲೂ ಕಂಡಿದ್ದೇವೆ. 2018 ರಲ್ಲೂ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪದ ಸಮಸ್ಯೆ ಎದುರಿಸಬೇಕಾಯಿತು. ವಿರೋಧ ಪಕ್ಷದಲ್ಲಿ ಕುಳಿತು ಸರ್ಕಾರದ ವೈಫಲ್ಯವನ್ನು ಟೀಕೆಗಾಗಿ ಮಾಡಲು ನಾನು ತಯಾರಿಲ್ಲ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ಮನವೊಲಿಸಬೇಕು. ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.




ಇದನ್ನೂ ಓದಿ: Basavaraj Bommai: ಶೀಘ್ರದಲ್ಲೇ ಕನ್ನಡ ಕಡ್ಡಾಯ ಕಾನೂನು ಜಾರಿ; ನಮ್ಮ ಭಾಷೆ ರಕ್ಷಣೆಗೆ ನಾವು ಬದ್ಧ ಎಂದ ಸಿಎಂ ಬೊಮ್ಮಾಯಿ

ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮನೆಗಳ ಕುಸಿತಕ್ಕೆ ಐದು ಲಕ್ಷ ಪರಿಹಾರ ಕೊಡಲಾಗಿತ್ತು. ಇದು ಉತ್ತಮವಾದ ತೀರ್ಮಾನ. ಬೆಳೆ ಹಾನಿ ಬಗ್ಗೆಯೂ ಎನ್ ಡಿ ಆರ್ ಎಫ್ ನಾರ್ಮ್ ಮೀರಿ ಪರಿಹಾರ ಕೊಡಲಾಗಿದೆ. ಬೆಂಗಳೂರು ಮಳೆ ಹಾನಿಗೆ ಪರಸ್ಪರ ಟೀಕೆ ಸರಿಯಲ್ಲ. ಇದರಿಂದ ಜನಸಾಮಾನ್ಯರ ನೋವಿಗೆ ಉತ್ತರ ಸಿಗಲ್ಲ ಎಂದು ಹೇಳಿದರು.



Published by:ಪಾವನ ಎಚ್ ಎಸ್
First published: