• Home
  • »
  • News
  • »
  • state
  • »
  • MP Kumaraswamy: ಜೀಪ್ ಹತ್ತುವಾಗ ಚೆನ್ನಾಗಿದ್ದ ಶರ್ಟ್​, ಇಳಿಯುವಾಗ ಹರಿದಿದ್ದು ಹೇಗೆ? HDK ಪ್ರಶ್ನೆ

MP Kumaraswamy: ಜೀಪ್ ಹತ್ತುವಾಗ ಚೆನ್ನಾಗಿದ್ದ ಶರ್ಟ್​, ಇಳಿಯುವಾಗ ಹರಿದಿದ್ದು ಹೇಗೆ? HDK ಪ್ರಶ್ನೆ

ಎಂಪಿ ಕುಮಾರಸ್ವಾಮಿ ಮತ್ತು ಹೆಚ್​ಡಿ ಕುಮಾರಸ್ವಾಮಿ

ಎಂಪಿ ಕುಮಾರಸ್ವಾಮಿ ಮತ್ತು ಹೆಚ್​ಡಿ ಕುಮಾರಸ್ವಾಮಿ

ಬಹುಶಃ  ಅವರೇ ಬಂದು ಹೊಡೆದ್ರೊ ಗೊತ್ತಿಲ್ಲ, ಇಲ್ಲ ಆ ಕಂಪನಿಯವರೇ ಹರಿದು ಕಳಿಸಿದ್ರೇನೋ ಎಂದು ವ್ಯಂಗ್ಯ ಮಾಡಿದ್ದಾರೆ.

  • Share this:

ಶಾಸಕ ಎಂ.ಪಿ.ಕುಮಾರಸ್ವಾಮಿ (MLA MP Kumaraswamy) ಹಲ್ಲೆಗೆ ಸಂಬಂಧಿಸಿದಂತೆ ಇಂದು ಕೋಲಾರದ (Kolar) ಕ್ಯಾಲನೂರು ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯಿಸಿದ್ದಾರೆ. ಜೀಪಿನಲ್ಲಿ ಹತ್ತುವಾಗ ಸರಿಯಾಗಿಯೇ ಅವರ ಬಟ್ಟೆ ಇತ್ತು. ಜೀಪಿನಿಂದ ಇಳಿಯುವಾಗ ಬಟ್ಟೆ ಹರಿದುಕೊಂಡು ಹೊರಗೆ ಇಳಿದರು. ಇದೇ ಶಾಸಕ ಒಬ್ಬ ಪೊಲೀಸ್ ಅಧಿಕಾರಿಗೆ (Police Officer) ನಡೆ ಗೆಟ್ ಔಟ್ ಅಂದಿದ್ರು. ಬಹುಶಃ  ಅವರೇ ಬಂದು ಹೊಡೆದ್ರೊ ಗೊತ್ತಿಲ್ಲ, ಇಲ್ಲ ಆ ಕಂಪನಿಯವರೇ ಹರಿದು ಕಳಿಸಿದ್ರೇನೋ ಎಂದು ವ್ಯಂಗ್ಯ ಮಾಡಿದ್ದಾರೆ. ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೆಸರಿಗೆ ಮಾತ್ರ ಇದೆ. ಮಕ್ಕಳ ಹಣದಲ್ಲೂ ದುಡ್ಡು ತಿನ್ನುವ ಕೆಲಸ ಆಗ್ತಿದೆ ಎಂದು ಆರೋಪಿಸಿದರು.


ರಾಜ್ಯದಲ್ಲಿ ಹೊಸ ಬದಲಾವಣೆಗಾಗಿ ಹೆಜ್ಜೆ ಇಟ್ಟಿದ್ದೇನೆ. ಜೆಡಿಎಸ್ ಪಕ್ಷದಿಂದ ದಲಿತ ಮಹಿಳೆಗೆ DCM ಮಾಡುವ ಪ್ರಯತ್ನವಿದೆ. ದಿನಕ್ಕೆ 18 ಗಂಟೆ ಪ್ರಾಮಾಣಿಕರಾಗಿ ಕೆಲಸ ಮಾಡುವ ಮಹಿಳೆ ಪಕ್ಷಕ್ಕೆ ಬೇಕಿದೆ. ನಾನು ದೆಹಲಿ ರಾಜಕೀಯಕ್ಕೆ ಹೋದರೆ, ನಾನು CM ಆಗ್ತೀನಿ ಎಂದು ನಿನ್ನೆ ಸಿಎಂ ಇಬ್ರಾಹಿಂ ಹೇಳಿದ್ದಾರೆ.


ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ


ಅಂತಹ ಸಮಯ ಬಂದಾಗ ಆಗಬಹುದು, ಮುಸ್ಲಿಮನವರು ಸಿಎಂ ಆಗಬೇಕು ಎಂದೇನಿಲ್ಲ. ಜೆಡಿಎಸ್ ಪಕ್ಷದಲ್ಲಿ ಎಲ್ಲಾ ರೀತಿಯ ಮುಕ್ತ ಚರ್ಚೆಗೆ ಅವಕಾಶ ಇದೆ ಎಂದು ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದರು.


ಕೇಂದ್ರದ ವಿರುದ್ಧ ಹೆಚ್​​ಡಿಕೆ ವಾಗ್ದಾಳಿ


ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ನಾನು ಗುಪ್ತಚರ ಇಲಾಖೆ ವೈಪಲ್ಯ ಇಲ್ಲ ಎನ್ನುವುದಿಲ್ಲ. 58 ಇಂಚಿನ, ವಿಶ್ವಗುರು ಪ್ರಧಾನಿ ಇದ್ದಾಗಲೇ ಪುಲ್ವಾಮಾ ದಾಳಿ ನಡೆಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


HD Kumaraswamy reacts on mla mp kumaraswmy attack mrq
ಎಂಪಿ ಕುಮಾರಸ್ವಾಮಿ


ರಾಜ್ಯ ಸರ್ಕಾರದ ವೈಫಲ್ಯ


ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮ ರಾಜ್ಯಕ್ಕೆ ಇಂತಹ ವಾತಾವರಣ ಯಾಕೆ ಬಂದಿದೆ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ. ಇದು ಆಡಳಿತ, ನಿಮ್ಮ ಪಕ್ಷದ ಆಂತರಿಕ ಸಂಘದಿಂದ ಪ್ರೇರೆಪಣೆ ಕೊಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.


ಇದನ್ನೂ ಓದಿ:  Mangaluru Blast: ಸೋದರಿಯರ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ; ವಿದೇಶದಿಂದ ಫಂಡಿಂಗ್ ಆಗಿತ್ತಾ?


ರಾಷ್ಟ್ರೀಯ ಪಕ್ಷಗಳ ವಿರುದ್ಧ HDK ಕಿಡಿ


ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ತಾಲ್ಲೂಕಿನ ಕೋರಗಂಡಹಳ್ಳಿಯಲ್ಲಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ವಾತಾವರಣ ನಿರ್ಮಿಸಿವೆ. ಈಗ ಅಲ್ಲಿ ಸ್ಫೋಟ ಸಂಭವಿಸಿದ್ದು, ಆರ್ಥಿಕ ವಹಿವಾಟಿಗೆ ತೊಂದರೆ ಆಗುತ್ತದೆ. ಜನರೂ ಆತಂಕಕ್ಕೆ ಒಳಗಾಗುತ್ತಾರೆ ಎಂದರು.


ಸ್ಫೋಟ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಪ್ರಕರಣದ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದು, ಕಠಿಣ ಕ್ರಮ ವಹಿಸಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಯಾವುದೇ ಸಂಘಟನೆ ಇದ್ದರೂ ಪತ್ತೆ ಹಚ್ಚಬೇಕು. ಈಗಿನ ಪ್ರಕರಣದಲ್ಲಿ ದೇವರೇ ಆ ಭಾಗದ ಜನರನ್ನು ಕಾಪಾಡಿದ್ದಾನೆ’ ಎಂದು ಹೇಳಿದರು.


ಶಾಸಕರ ಮೇಲೆ ಹಲ್ಲೆ ಆಯ್ತಾ?


ನವೆಂಬರ್ 20ರಂದು ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರ ಆಕ್ರೋಶದ ಕಟ್ಟೆ ಒಡೆದಿದ್ದು, ಸ್ಥಳಕ್ಕೆ ಬಂದ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಶಾಸಕರ ಮೇಲೆ ಹಲ್ಲೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.


ಇದನ್ನೂ ಓದಿ:  M P Kumaraswamy: ಸಾಂತ್ವನ ಹೇಳಲು ಹೋದ ಶಾಸಕರಿಗೆ ಹೊಡೆದ್ರಾ ಜನ? ಹರಿದ ಅಂಗಿಯಲ್ಲಿ ಎಂಪಿ ಕುಮಾರಸ್ವಾಮಿ ಪ್ರತ್ಯಕ್ಷ!


ಚಿಕ್ಕಮಗಳೂರಿನ ಮೂಡಿಗೆರೆ (Mudigere) ತಾಲೂಕಿನ ಕುಂದೂರಿನಲ್ಲಿ ನಡೆದಿದೆ. ಹರಿದ ಬಟ್ಟೆಯಲ್ಲಿ ಹೇಳಿಕೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು (Grou[) ಮಾಡಿಕೊಂಡು ಹಲ್ಲೆ (Assault) ಮಾಡಿದ್ದಾರೆ ಎಂದು ಹೇಳಿದ್ದರು.  ಶಾಸಕರು ಗ್ರಾಮಸ್ಥರಿಂದ ತಪ್ಪಿಸಿಕೊಂಡು ಓಡಿ ಬಂದು ಜೀಪ್ ಹತ್ತುವಾಗ ಅವರ ಶರ್ಟ್​ ಚೆನ್ನಾಗಿತ್ತು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Published by:Mahmadrafik K
First published: