• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾತಾಡಿ, ನನ್ನ ಹೇಳಿಕೆಗೆ ಈಗಲೂ ಬದ್ಧ; ಹೆಚ್​​ಡಿಕೆ

HD Kumaraswamy: ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾತಾಡಿ, ನನ್ನ ಹೇಳಿಕೆಗೆ ಈಗಲೂ ಬದ್ಧ; ಹೆಚ್​​ಡಿಕೆ

ಹೆಚ್ ಡಿ ಕುಮಾರಸ್ವಾಮಿ , ಮಾಜಿ ಸಿಎಂ

ಹೆಚ್ ಡಿ ಕುಮಾರಸ್ವಾಮಿ , ಮಾಜಿ ಸಿಎಂ

ಟಿಪ್ಪು ಸುಲ್ತಾನ್ ಬೇಕೋ, ರಾಣಿ ಅಬ್ಬಕ್ಕ ಬೇಕೋ? ಸರ್ವಜನಾಂಗದ ಶಾಂತಿಯ ತೋಟ ಬೇಕೋ, ಅಶಾಂತಿಯ ತೋಟ ಬೇಕೊ‌ ಅಂತ ಜನತೆ ನಿರ್ಧರಿಸಲಿ ಎಂದರು.

  • Share this:

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅಲ್ಲ ಸುಳ್ಳಿನ ರಾಮಯ್ಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ. ಚೇರ್ ಗಾಗಿ ಕುತಂತ್ರದ ರಾಜಕಾರಣ ಮಾಡ್ತೀರಿ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ದರಾಮಯ್ಯ ಕಾರಣ. ಸಮ್ಮಿಶ್ರ ಸರ್ಕಾರ (Congress-JDS Government) ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರದ ಪತನದ ಮಾತನ್ನಾಡಿದ್ದರು. ಲೋಕಸಭೆ ಚನಾವಣೆ ಮುಗಿಯುತ್ತಿದ್ದಂತೆಯೇ ಸರ್ಕಾರ ಪತನವಾಗುತ್ತೆ ಅಂತ ಹೇಳಿದ್ದರು. ಅದರಂತೆಯೇ ಮಾಡಿದರು.


ಬಿಜೆಪಿ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡೋಕೆ ರೆಡಿಯಾಗಿದ್ದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.


ಪೇಶ್ವೆ ಡಿಎನ್ಎ ಇರೋರನ್ನ ಸಿಎಂ ಆಗೋಕೆ ಬಿಡಲ್ಲ


ಯಾವುದೇ ಕಾರಣಕ್ಕೂ ಪೇಶ್ವೆ ಡಿಎನ್ಎ ಇರೋರು ರಾಜ್ಯದ ಸಿಎಂ ಆಗಬಾರದು. ಅದಕ್ಕೆ ನಾನು ಅವಕಾಶ ನೀಡಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ಹರಿಹಾಯ್ದಿದ್ದಾರೆ. ಅದೇನೋ ಸುದರ್ಶನ ಚಕ್ರ ತರ್ತಾರೆ, ರಣತಂತ್ರ ಮಾಡ್ತಾರೆ ಅಂತಾರೆ. ಅದೆಲ್ಲವೂ ಕರ್ನಾಟಕದಲ್ಲಿ ನಡೆಯಲ್ಲ ಎಂದರು.


Opposition Leader Siddaramaiah Slams to HD Kumaraswamy in raichur
ಸಿದ್ದರಾಮಯ್ಯ, ಮಾಜಿ ಸಿಎಂ


ಬ್ರಾಹ್ಮಣ ಸಿಎಂ ಹೇಳಿಕೆ ಕುರಿತು ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡ್ತಿಲ್ಲ. ಪೇಶ್ವೆ ಮೂಲಕ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡಲಿ. ನಾನು ಬ್ರಾಹ್ಮಣರು ಸಿಎಂ ಆಗಬಾರದು ಎಂದಿಲ್ಲ. ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಅಂದಿದ್ದೇನೆ ಎಂದರು.


ಬಿಜೆಪಿ ಹುನ್ನಾರ ಹೇಳುವೆ


ಈಗಲೂ ನನ್ನ ಹೇಳಿಕೆಗೆ ಬದ್ಧ. ಯಾವ ಸಮಾಜದವರು ಬೇಕಾದ್ರೂ ಸಿಎಂ ಆಗಲಿ. ಆದರೆ ಪೇಶ್ವೆ ಡಿಎನ್‌ಎ ಇರೋರು ಆಗಬಾರದು. ಜಾತಿ ವ್ಯವಸ್ಥೆಯನ್ನ ಹುಟ್ಟು ಹಾಕಿದ್ದೇ ಪಂಡಿತರು ಎಂಬ ಮೋಹನ್ ಭಾಗವತರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರೇ ಹೀಗೆ ಹೇಳಿದ್ದಾರೆ. ನನಗಿಂತ ಗಂಭೀರವಾಗಿ ಹೇಳಿದ್ದಾರೆ. ಆದರೆ ನಾನು ಆ ಮಟ್ಟಕ್ಕೆ ಹೋಗಿಲ್ಲ. ಪೇಶ್ವೆ ಡಿಎನ್ಎ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಬಿಜೆಪಿ ಹುನ್ನಾರಗಳ ಬಗ್ಗೆ ಜನಕ್ಕೆ ತಿಳಿಸ್ತೇನೆ ಎಂದು ಹೇಳಿದರು.


ಮೋದಿ, ಶಾ ಬ್ರಹ್ಮಾಸ್ತ್ರ ವರ್ಕೌಟ್ ಆಗಲ್ಲ


ನರೇಂದ್ರ ಮೋದಿ, ಅಮಿತ್ ಶಾ ಎಷ್ಟು ಬಾರಿ ಬೇಕಾದ್ರೂ ಬರಲಿ. ಬ್ರಹ್ಮಾಸ್ತ್ರ, ಸುದರ್ಶನ ಚಕ್ರ ಹಿಡಿದು ಬರ್ತಾರೆ ಅಂತಾರೆ. ಅದ್ಯಾವುದೂ ವರ್ಕೌಟ್ ಆಗಲ್ಲ. ಪ್ರತಿಪಕ್ಷಗಳನ್ನ ಮಲಗಿಸ್ತಾರೆ ಅಂತಾರೆ. ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ್ರೆ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ. ಟಿಪ್ಪು ಸುಲ್ತಾನ್ ಬೇಕೋ, ರಾಣಿ ಅಬ್ಬಕ್ಕ ಬೇಕೋ? ಸರ್ವಜನಾಂಗದ ಶಾಂತಿಯ ತೋಟ ಬೇಕೋ, ಅಶಾಂತಿಯ ತೋಟ ಬೇಕೊ‌ ಅಂತ ಜನತೆ ನಿರ್ಧರಿಸಲಿ ಎಂದರು.




ಮಹಾದಾಯಿ ಬರೀ ಪ್ರಚಾರಕ್ಕೆ


ಮಹಾದಾಯಿ ಯೋಜನೆ ವಿಚಾರದಲ್ಲಿ ಬಿಜೆಪಿ ಬರೀ ಪ್ರಚಾರ ಪಡೆಯುತ್ತಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ ರಾಜ್ಯದ ಜನತೆಗೆ ಏನೂ ಪ್ರಯೋಜನವಿಲ್ಲ. ನಾನು ಸಿಎಂ ಆಗಿದ್ದಾಗ ಮಹಾದಾಯಿಗೆ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ. ಆದ್ರೆ ಬಿಜೆಪಿ ಅವರು ಪ್ರಚಾರ ಆದ್ರೆ ಸಾಕು ಅಂದ್ರು. ಈಗಲೂ ಬಿಜೆಪಿ ನಾಯಕರು ಅದನ್ನೇ ಮಾಡ್ತಿದಾರೆ ಎಂದು ಆರೋಪಿಸಿದರು.


ಇದನ್ನೂ ಓದಿ:  Congress Praja Dhwani Yatra: ಕಾಂಗ್ರೆಸ್ ಭಿನ್ನಮತಕ್ಕೆ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ


ಈ ಭಾಗದ ನಾಯಕರಿಂದಲೇ ಮೋಸ


ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅಂತಾರೆ. ಯಾರಿಂದ ಆಗಿದೆ ಅನ್ಯಾಯ ಆಗಿದೆ ಎಂದು ಪ್ರಶ್ನಿಸಿದ ಹೆಚ್ಡಿಕೆ, ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ಮಾಡಿದ್ದಾರೆ. ಬಡವರ ಜೊತೆ ರಾಷ್ಟ್ರೀಯ ಪಕ್ಷಗಳ ಚೆಲ್ಲಾಟವಾಡುತ್ತಿವೆ ಎಂದರು.


ಜನರನ್ನು ದಾರಿ ತಪ್ಪಿಸುವ ಕೆಲಸ


ಮುಂಬೈ ಕರ್ನಾಟಕದ ಪಂಚರತ್ನ ಯಾತ್ರೆ ನಡೆಸಿದ್ದೇನೆ. ಮಾರ್ಚ್ 23 ರವರೆಗೆ ರಥ ಯಾತ್ರೆ ಮುಂದುವರಿಸ್ತೇನೆ. ಯಾತ್ರೆ ಮೂಲಕ ನಮ್ಮ ಯೋಜನೆ ಕುರಿತು ಜನತೆಗೆ ಮನವರಿಕೆ ಮಾಡ್ತಿದ್ದೇನೆ. ಜನತೆಗೆ ಹೊಸ ಬದಲಾವಣೆ ತರಬೇಕೆಂದಿದೆ. ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಿಪಲ್ ಎಂಜಿನ್ ಸರ್ಕಾರವಿದೆ‌.‌ಮಹಾದಾಯಿ ಡಿಪಿಆರ್ ಹೆಸರಲ್ಲಿ ಸಿಹಿ ಹಂಚಿ ಹಲವು ದಿನಗಳೇ ಆದವು. ಗೋವಾದಲ್ಲಿ ಬಿಜೆಪಿ ನಾಯಕರು ಕ್ಯಾತೆ ತೆಗೆದಿದ್ದಾರೆ. ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸೋ ಯತ್ನ ನಡೆಸಿದ್ದಾರೆ ಎಂದರು.

Published by:Mahmadrafik K
First published: