MLC Poll: ವಿಜಯೇಂದ್ರಗೆ ಟಿಕೆಟ್ ಮಿಸ್; ಸರ್ಕಾರದ ಮೇಲೆ ಗಂಭೀರ ಪರಿಣಾಮ ಅಂದ್ರು ಹೆಚ್.ಡಿ.ಕುಮಾರಸ್ವಾಮಿ

ದೇವರು ಕನಸ್ಸಿನಲ್ಲೇನಾದ್ರೂ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದನಾ? ಅದನ್ನ ಸರಿಪಡಿಸಿ ಅಂತ ಕೇಳಿತ್ತಾ? ಇದನ್ನ ನೋಡಿದ್ರೆ ಮತ್ತೊಂದು ವಿವಾದ ಶುರು ಆಗೋ ಲಕ್ಷಣ ಇದೆ.

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

  • Share this:
ಇಂದು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy),  ಜೆಡಿಎಸ್ (JDS) ಹಿತ ಶತ್ರುಗಳಿಂದ ತಮಗೆ ಲಾಭ ಆಗುತ್ತೆ ಎಂದು ಕಾಂಗ್ರೆಸ್ (Congress) ಅಂದುಕೊಂಡಿದೆ. ಅದ್ಯಾವುದು ಈಗ ನಡೆಯುವುದಿಲ್ಲ. ಪಕ್ಷದಲ್ಲಿರುವ ಹಿತ ಶತ್ರುಗಳು ಈಗ‌‌ ನೇರ ಶತ್ರುಗಳಾಗಿದ್ದಾರೆ. ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ‌. ಮಂಡ್ಯಕ್ಕೆ (Mandya) ಕುಮಾರಸ್ವಾಮಿ ಕೊಡುಗೆ ಏನು ಎಂದು ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaaiah) ಕೇಳಿದ್ದಾರೆ. ತಮ್ಮ ಕೊಡುಗೆ ಏನು‌ ಎಂದು ಸಿದ್ದರಾಮಯ್ಯ ಹೇಳಲಿ ಎಂದು ತಿರುಗೇಟು ನೀಡಿದರು. ರೈತರು ಆತ್ಮಹತ್ಯೆ ಮಾಡಿಕೊಂಡರು ಅದು ನಿಮ್ಮ‌ ಕೊಡುಗೆ. 200 ಕುಟುಂಬಗಳ ಅನಾಥವಾಗಿ ಮಾಡಿದ್ದೆ ನಿಮ್ಮ ಕೊಡುಗೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಕೊಡುಗೆ ಏನು ಎಂಬುದು ಮಂಡ್ಯ ಜನರಿಗೆ ಗೊತ್ತಿದೆ. ನಾನು ಮಂಡ್ಯವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಅಷ್ಟರಲ್ಲಿ ನೀವು ಸರ್ಕಾರ ತೆಗೆದಿರಿ ಎಂದು ಆರೋಪಿಸಿದರು.

ಇದನ್ನೂ ಓದಿ:  Text Book Row: ಸಮಿತಿ ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ: ಕರವೇ ನಾರಾಯಣಗೌಡರು


ಸರ್ಕಾರದ ಮೇಲೆ ಗಂಭೀರ ಪರಿಣಾಮ

ಇದೇ ವೇಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾತಿ ಪುತ್ರ ವಿಜಯೇಂದ್ರಗೆ MLC ಟಿಕೆಟ್ ತಪ್ಪಿರುವ ಕುರಿತು ಪ್ರತಿಕ್ರಿಯಿಸಿದರು. ಯಾವುದೇ ತತ್ವದ ಕಥೆ ಹೇಳಿ‌ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ‌. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ‌. ಆದರೆ ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು. ಆಡಳಿತದ ಮೇಲು ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಗುಂಪುಗಾರಿಕೆಗೆ ಇನ್ನು ಹೆಚ್ಚು ಅವಕಾಶವಾಗಬಹುದು ಎಂದುಮ ಭವಿಷ್ಯ ನುಡಿದರು.

ಕೇಶವ ಕೃಪದಿಂದ ಸಂದೇಶಗಳು ಬರುತ್ತೆ

ಮಂಗಳೂರಿನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಷ್ಟಮಂಗಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗೋದು ಕೇಶವ ಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನ ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಇನ್ನೂ ಒಂದು ವರ್ಷ ಈ ತರದ ಬರವಣಿಗೆಗಳು ನಡೆಯುತ್ತಿರುತ್ತವೆ‌. ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ಜೆಡಿಎಸ್ ಸ್ಟ್ಯಾಂಡ್ ವಿಚಾರದಲ್ಲಿ ಆತುರ ಮಾಡೋದು ಏನಿದೆ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Tabula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!

ಟಿಪ್ಪು ಹಿಂದೂ ದೇವಾಲಯಕ್ಕೆ ಭೂಮಿ ನೀಡಿದ್ದ

ದೇವರು ಕನಸ್ಸಿನಲ್ಲೇನಾದ್ರೂ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದನಾ? ಅದನ್ನ ಸರಿಪಡಿಸಿ ಅಂತ ಕೇಳಿತ್ತಾ? ಇದನ್ನ ನೋಡಿದ್ರೆ ಮತ್ತೊಂದು ವಿವಾದ ಶುರು ಆಗೋ ಲಕ್ಷಣ ಇದೆ. ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ. ಇದು ಆ ಸಮಾಜಕ್ಕೆ ಕನಸ್ಸಿಗೆ ಬರುತ್ತೆ. ಆವಾಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡ್ತಿರಾ.? ಹಲವು ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರೋ ಉದಾಹರಣೆ ಇದೆ. ಆವರೂ ಕೂಡಾ ಬಂದು ಕೇಳಿದ್ರೆ ನೀವು ಕೊಡ್ತಿರಾ. ಇದನ್ನ ಬಿಟ್ಟು ಜನರ ಬದುಕನ್ನ ನೋಡಿ ಎಂದರು.

ಅದು ಅವರ ವೈಯಕ್ತಿಕ ವಿಚಾರ

ಹಾಸನದಲ್ಲಿ  ಸಾಹಿತಿ ದೇವನೂರು ಮಹದೇವ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರವಾಗಿದೆ. ಅವರ ಭಾವನೆಗಳನ್ನು ಯಾವುದಕ್ಕೂ ಉಪಯೋಗ ಮಾಡಿಕೊಳ್ಳಬಾರದೆಂದು ಯಾರಾದರೂ ಲೇಖಕರು ಹೇಳಿದ್ದರೆ ಅದನ್ನು ನಾವು ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿ-ಕಾಂಗ್ರೆಸ್‌ನಲ್ಲಿ ಇರುವ ಸ್ಥಾನಗಳಿಗೆ ಏನು ಬೇಕು ಅದಕ್ಕಿಂತ ಹೆಚ್ಚಿನ ಶಾಸಕರಿದ್ದಾರೆ ಆ ಸ್ಥಾನಕ್ಕಿಂತ ಹೆಚ್ಚಿನ ಅಭ್ಯರ್ಥಿ ನಿಲ್ಲಿಸಲು ಅವರಲ್ಲಿ ಸಂಖ್ಯೆಯ ಕೊರತೆಯಿದೆ. ನಮಗೂ ಸಂಖ್ಯೆಯಲ್ಲಿ ಕೊರತೆಯಿದೆ,  ಆದರೆ ಆ ಎರಡು ಪಕ್ಷಗಳಿಗಿಂತ ಶಾಸಕರ ಸಂಖ್ಯೆ ನಮ್ಮಲ್ಲಿ ಜಾಸ್ತಿ ಇದೆ. ಅದರ ಹಿನ್ನೆಲೆಯಲ್ಲಿ ಏನು ಮಾಡಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತೆ ಎಂದು ಮಾಹಿತಿ ನೀಡಿದರು.
Published by:Mahmadrafik K
First published: