ಬೆಳಗಾವಿ: ಕುಂದಾನಗರಿ ಜಿಲ್ಲೆಯಲ್ಲಿ ಚುನಾವಣಾ ಕಾವು ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಪ್ರಜಾಧ್ವನಿ (Praja Dhwani) ಆಯ್ತು. ಬಿಜೆಪಿ ವಿಜಯ ಸಂಕಲ್ಪ (Vijaya Sankalpa) ಆಯ್ತು. ಈಗ ಜೆಡಿಎಸ್ ಪಂಚರತ್ನ ಯಾತ್ರೆ (Pancharathna Yatre) ಆರಂಭಾಗಿದೆ. ಶುಕ್ರವಾರ ಬೆಳಗಾವಿ ಜಿಲ್ಲೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪಂಚರತ್ನ ಯಾತ್ರೆ ಎಂಟ್ರಿಕೊಟ್ಟಿದೆ. ಜಿಲ್ಲೆಯ ಖಾನಾಪುರ (Khanapur, Belagavai) ತಾಲೂಕಿನ ಕಕ್ಕೇರಿ ಗ್ರಾಮದಿಂದ ಯಾತ್ರೆ ಆರಂಭಿಸಿರುವ ಕುಮಾರಸ್ವಾಮಿ ಬೆಳಗಾವಿ ಜಿಲ್ಲೆ ಖಾನಾಪುರ, ರಾಯಬಾಗ ಮತ್ತು ಕುಡಚಿ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನೂ ಖಾನಾಪುರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ್ (JDS Candidate Nasir Bagawan) ಪರ ಮತಬೇಟೆ ನಡೆಸಿದರು.
ಬಿಜೆಪಿ ,ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಭಾಷಣದುದ್ದಕ್ಕೂ ತಾವು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಜನಪರ ಯೋಜನೆಗಳ ಬಗ್ಗೆ ವಿವರಿಸಿ ಮತಯಾಚನೆ ಮಾಡಿದ್ರು.
ರಾಜ್ಯದಲ್ಲಿ 123 ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ (JDS Candidates) ಕಣಕ್ಕಿಳಿಸುತ್ತಿದ್ದೇವೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ನಾಸೀರ್ ಬಾಗವಾನ್ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿದರು.
ಸದ್ದು ಮಾಡುತ್ತಿರುವ ಹಾಸನ ರಾಜಕಾರಣ
ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ಬ್ಯುಸಿ ಆಗಿದ್ರೂ ಹಾಸನ ಜಿಲ್ಲೆ ರಾಜಕಾರಣ (Hassan Politics) ಮಾತ್ರ ಸದ್ದು ಮಾಡುತ್ತಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ (Bhavani Revanna) ಹಾಸನದಿಂದ ಸ್ಫರ್ಧೆ ವಿಚಾರವಾಗಿ ಬೆಳಗಾವಿಯಲ್ಲಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ರೇವಣ್ಣ ಸ್ಪರ್ಧೆ ಮಾಡಿದರೆ ಹೊಳೆನರಸೀಪುರದಲ್ಲಿ ಯಾರು ಅಂತಾ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಿಎಂ ಕುಮಾರಸ್ವಾಮಿ, ತಲೆ ಯಾಕೆ ಕೆಡಿಸಿಕೊಳ್ಳುತ್ತೀರಿ ಬ್ರದರ್, ಎನೇನ್ ತೀರ್ಮಾನ ಆಗುತ್ತೆ ನೋಡೋಣ ಎಂದರು.
ಭವಾನಿ ರೇವಣ್ಣ ಅನಿವಾರ್ಯ ಅಲ್ಲ
ಚುನಾವಣೆಯಲ್ಲಿ ಗೆಲ್ಲಬೇಕಾದ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಇಲ್ಲದೇ ಏನು ತೀರ್ಮಾನ ಮಾಡಬೇಕು ಅದನ್ನು ಮಾಡುತ್ತೇವೆ. ಭವಾನಿ ರೇವಣ್ಣ ಅವರು ಈ ಚುನಾವಣೆಯಲ್ಲಿ ಅನಿವಾರ್ಯ ಅಲ್ಲಾ ಅನ್ನೋದು ಹೇಳಿದ್ದೇನೆ. ಅದನ್ನ ಇವತ್ತು ಸ್ಪಷ್ಟವಾಗಿ ಹೇಳುತ್ತೇನೆ. ಅದರಲ್ಲಿ ಯಾವ ಗೊಂದಲಗಳು ಇಲ್ಲ ಎಂದು ಹೇಳಿದರು.
ನಾವು ಕುಳಿತು ಹಾಸನ ಮತ್ತು ಹೊಳೆನರಸೀಪುರದಲ್ಲಿ ಏನು ತೀರ್ಮಾನ ಆಗಬೇಕು ಅನ್ನೋದನ್ನ ಪಕ್ಷದ ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: Zameer Ahmed: 'ಕ್ಷೀರಭಾಗ್ಯ' ಬದಲು 'ಶೀಲಭಾಗ್ಯ' ಎಂದ ಜಮೀರ್ ಅಹ್ಮದ್! ಸಿದ್ದು ಸರ್ಕಾರದ ಭ್ಯಾಗಗಳನ್ನು ಸ್ಮರಿಸುವಾಗ ಎಡವಟ್ಟು
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ
ಗಡಿ ಜಿಲ್ಲೆ ಬೆಳಗಾವಿ ಎಂಟ್ರಿ ಕೊಟ್ಟಿರುವ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಇಂದು ರಾಯಬಾಗ, ಕುಡಚಿಯಲ್ಲಿ ಅಂತ್ಯವಾಗಲಿದೆ. ಪಂಚರತ್ನ ಯಾತ್ರೆಯುದ್ದಕ್ಕೂ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಇನ್ನೂ ಅನೇಕ ಮುಖಂಡರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ತೀರ್ಮಾನಿಸಿದ್ದು, ಇನ್ನೂ ಎರಡು, ಮೂರು ದಿನ ಯಾತ್ರೆ ಜಿಲ್ಲೆಯಲ್ಲಿ ಸದ್ದು ಮಾಡಲಿದೆ.
ಇಂದು ರಾಯಬಾಗದಲ್ಲಿ ಯಾತ್ರೆ
ಲಿಂಗಮಠನಿಂದ ಆರಂಭವಾದ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಕ್ಕೇರಿ, ಬೀಡಿ, ಇಟಗಿ, ಹಿರೇ ಮುನವಳ್ಳಿ, ಚಿಕ್ಕ ಮುನವಳ್ಳಿಯಲ್ಲಿ ಪೂರ್ಣ ಕುಂಭ ಸ್ವಾಗತ ಕೋರಲಾಗಿದೆ. ಇಂದು ಐತಿಹಾಸಿಕ ಹಲಸಿ ಗ್ರಾಮದಲ್ಲಿಹೆ್ಚ್ ಡಿ ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದಾರೆ. ಇಂದು ರಾಯಭಾಗದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ಶಾಸಕ ಪ್ರೀತಂಗೌಡರನ್ನು ಸೋಲಿಸಲು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪಣ ತೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ