Karnataka Politics: ಸಿಎಂ ಆಗಲು ಬ್ಯಾಕ್ ಗ್ರೌಂಡ್ ಚೆನ್ನಾಗಿರಬೇಕು: ಡಿಕೆಶಿಗೆ HDK ಟಾಂಗ್

ಕಳೆದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ ಅಷ್ಟೇ.‌ ಉಳಿದ ಎಲ್ಲಾ ಚುನಾವಣೆಯಲ್ಲಿ (Assembly Election) ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಇದ್ದರು.

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ವಿರುದ್ಧ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ರಾಮನಗರದಲ್ಲಿ (Ramanagara) ವಾಗ್ದಾಳಿ ನಡೆಸಿದರು. ‌ಸಿಎಂ ವಿಚಾರವಾಗಿ ಕಿತ್ತಾಟ ಹಿನ್ನೆಲೆ ವಾಗ್ದಾಳಿ ನಡೆಸಿ ರಾಮನಗರದಲ್ಲಿ ಯಾರೇ ಬಂದರೂ ನಮ್ಮನ್ನ ಏನು‌ ಮಾಡಲು ಸಾಧ್ಯವಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ ಅಷ್ಟೇ.‌ ಉಳಿದ ಎಲ್ಲಾ ಚುನಾವಣೆಯಲ್ಲಿ (Assembly Election) ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಇದ್ದರು. ಜನತೆಯ ಆರ್ಶೀವಾದ ಇರುವವರೆಗೆ ಏನು ಆಗಲ್ಲ. ರಾಮನಗರದಲ್ಲಿ (Ramanagara) ಶಿವಕುಮಾರ್ ಅವಕಾಶ ಕೇಳಿರುವುದು ತಪ್ಪಿಲ್ಲ. ಆದರೆ ಜನರ ಕಷ್ಟಸುಖಕ್ಕೆ ಕೆಲಸ ಮಾಡಿದ್ದೇನೆ ಮತ ಕೊಡಿ ಎಂದು ಕೇಳಬಹುದು. ಕೇವಲ ಅಧಿಕಾರಕ್ಕೆ ಮಾತ್ರ ಕೇಳಿದರೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

ಅವರ ಹಿಂದಿನ ಬ್ಯಾಕ್ ಗ್ರೌಂಡ್ ಗಳನ್ನ ನೋಡ್ತಾರೆ, ಯಾವ ತರಹದ ಬ್ಯಾಕ್ ಗ್ರೌಂಡ್ ಬೇಕು ಹೇಳಿ. ಎಲ್ಲಾ ತರಹ ಇದೆ. ಕನ್ನಡಿಯಲ್ಲಿ ತೋರಿಸಿದ್ದಾರೆ. ಕಳೆದ 25 ವರ್ಷದಲ್ಲಿ‌ ಕುಮಾರಸ್ವಾಮಿ ಸೋತಿದ್ದ ಎಂದಿದ್ದಾರೆ. ಅವರು ದೇವೇಗೌಡರ ವಿರುದ್ಧ ಸೋತಿದ್ದಾರೆ.‌ ನಾನು ರಾಜಕೀಯವಾಗಿ ಅಂಬೆಗಾಲು ಇಡುವಾಗ ಸೋತಿದ್ದೆ. ಅವರು ಗೆದ್ದಿದ್ದು ಇತಿಹಾಸ ಇದೆ. ಒಂದು ಕಥೆ ಬರೆಯಬಹುದು ಅವರು ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದರೆ ಜನ‌ತೀರ್ಮಾನ ಮಾಡ್ತಾರೆ. ಇಲ್ಲಿ ಸಿಎಂ ಆಗುವುದು ಮುಖ್ಯವಲ್ಲ, ಅವರ ನಡವಳಿಕೆ, ನಾಡಿನ ಸಮಸ್ಯೆ ಬಗ್ಗೆ ಅರಿವಿರಬೇಕು ಎಂದರು.‌

ಹೆಚ್ ಸಿ ಮಹದೇವಪ್ಪ ಹೇಳಿಕೆಗೆ ತಿರುಗೇಟು

ಇನ್ನು ಸಿದ್ದರಾಮಯ್ಯ ಪರವಾಗಿ ಹೆಚ್.ಸಿ.ಮಹಾದೇವಪ್ಪ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿ, ಅವರ ಕಾಲದಲ್ಲಿ ಒಳ್ಳೆಯ ಅಭಿವೃದ್ಧಿ ಆಗಿದೆ ಎಂಬ ವಿಚಾರವಾಗಿ ಮಾತನಾಡಿ ಏನು ಅಭಿವೃದ್ಧಿ ಆಗಿದೆ? ಅವರ ಕಾಲದಲ್ಲಿ ಪಿಎಸ್ಐ ಹಗರಣ, ಮರಳು ದಂಧೆ, ಹಾಸಿಗೆ ದಿಂಬು ಮಾಡಿಕೊಂಡಿದ್ದಾರೆ ಎಂದರು.

HD Kumaraswamy reacts dk shivakumars next CM Statement atvr mrq
ನಿಖಿಲ್ ಕುಮಾರಸ್ವಾಮಿ


ಯಡಿಯೂರಪ್ಪ ನಿವೃತ್ತಿಗೆ ಪ್ರತಿಕ್ರಿಯೆ

ಇನ್ನು ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿ, ಬಿಜೆಪಿಯಲ್ಲಿ ಪ್ರಚಾರದ ವಿಚಾರವಾಗಿ ಈ ಬೆಳವಣಿಗೆ ಆಗಲಿದೆ.‌ ಕೆಲವರು ಅವರ ಪರವಾಗಿ‌ ಮಾತನಾಡಬಹುದು, ಅದು ಅವರವರ ವೈಯಕ್ತಿಕ ಅಭಿಪ್ರಾಯ.‌ ಆದರೆ ಬಿಜೆಪಿಯಲ್ಲಿ 75 ವರ್ಷ ಪೂರೈಸಿದವರು ಚುನಾವಣೆಗೆ ನಿಲ್ಲಬಾರದು ಎಂದಿದ್ದಾರೆ. ಆ ಕಾರಣವೂ ಇರಬಹುದು ಎಂದರು.

ನಿಖಿಲ್ ಸ್ಪರ್ಧೆ ಮಾಡ್ತಾರಾ?

ಆದರೆ ಇದು ದೊಡ್ಡ ವಿಷಯ ಅಲ್ಲ ಎಂದರು. ಇನ್ನು ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿ ಅದು ಪಕ್ಷ ನಿರ್ಧಾರ ಮಾಡಲಿದೆ. ನಿಖಿಲ್ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.‌ ನಾನು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡ್ತೇನೆ ಎಂದಿದ್ದಾರೆ. ‌ಚುನಾವಣೆ ಸ್ಪರ್ಧೆ ವಿಚಾರವಾಗಿ ಕೇಳಿದಾಗ ಈ ಅಭಿಪ್ರಾಯ ಹೇಳಿದ್ದಾರೆ.‌ ಅನಿತಾ ಕುಮಾರಸ್ವಾಮಿರವರ ಸ್ಪರ್ಧೆ ವಿಚಾರವೂ ಪಕ್ಷ ನಿರ್ಧಾರ ಮಾಡಲಿದೆ ಎಂದರು.

HDK ಹೇಳಿಕೆಗೆ ಡಿಕೆಶಿ ತಿರುಗೇಟು

ಡಿ.ಕೆ.ಶಿವಕುಮಾರ್ ಬ್ಯಾಗ್ ಗ್ವ್ರಾಂಡ್ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿ ಕನಕಪುರದಲ್ಲಿ HDK ಹೇಳಿಕೆ ಗೆ ಡಿಕೆಶಿ ತಿರುಗೇಟು ನೀಡಿದರು. ಬಹಳ ಸಂತೋಷ, ಜನರಿಗೆ ತಿಳಿಸಿದ್ದಾರಲ್ಲ ಎಂದರು.‌

ಕನಕಪುರದ ಅಂಬೇಡ್ಕರ್ ಭವನದಲ್ಲಿ ನಾಡಪ್ರಭು ಕೆಂಪೇಗೌಡರ 513 ನೇ ಜಯಂತೋತ್ಸವದಲ್ಲಿ ಭಾಗವಹಿಸಿ   ಡಿಕೆಶಿ ಮಾತನಾಡಿದರು.

HD Kumaraswamy reacts dk shivakumars next CM Statement atvr mrq
ಡಿಕೆ ಶಿವಕುಮಾರ್


ನಾನೇ ಮುಂದಿನ ಮುಖ್ಯಮಂತ್ರಿ; ಡಿಕೆಶಿ ಸಿಎಂ ಮಂತ್ರ

ಕನಕಪುರದ ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (DK Shivakumar) ಅಧಿಕಾರಿಗಳನ್ನು ತೆಗೆದುಕೊಂಡ್ರು ಇದೇ ವೇಳೆ ಮತ್ತೆ ಸಿಎಂ ಆಗೋ ಆಸೆ ಹೊರ ಹಾಕಿದ್ದರು. ನೀವೆಲ್ಲಾ ನನ್ನ ಜೊತೆ ಇದ್ರೆ ಮುಖ್ಯಮಂತ್ರಿ ಆಗೋದು ನಾನೇ ಎಂದು ಹೇಳಿದ್ದರು.

ಎಲೆಕ್ಷನ್ (Election)​ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​ನಲ್ಲಿ (Congress) ಸಿಎಂ ಕಿತ್ತಾಟ ಜೋರಾಗಿದೆ. ನಾನೇ ಸಿಎಂ, ನಾನೇ ಸಿಎಂ ಎನ್ನುವ ನಾಯಕರ ಸಂಖ್ಯೆ ಹೆಚ್ಚಾಗಿದೆ. ಸಭೆಯಲ್ಲಿ ರೈತರ ಸಮಸ್ಯೆಗಳನ್ನು (Farmer Problem) ಆಲಿಸಿದ ಡಿ.ಕೆ ಶಿವಕುಮಾರ್​, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Published by:Mahmadrafik K
First published: