HOME » NEWS » State » HD KUMARASWAMY REACTION TO ON GOVERNOR SPEECH RH

ಮೈತ್ರಿ ಸರ್ಕಾರದ ಸಾಧನೆಗಳನ್ನೇ ಬರೆದುಕೊಟ್ಟು ರಾಜ್ಯಪಾಲರಿಂದ ಭಾಷಣ ಮಾಡಿಸಲಾಗಿದೆ; ಎಚ್​ಡಿ ಕುಮಾರಸ್ವಾಮಿ

ರಾಮನಗರ ರಾಮ ರಾಜ್ಯವಾಗೇ ಇರಬೇಕು? ರಾವಣನ ರಾಜ್ಯವಾಗೋಕೆ ಬಿಡೋದಿಲ್ಲ. ಬೇರೆಯವರು ಹೀಗೆ ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡೋಕೆ ಬಿಡ್ತೀರಾ? ರಾಮನಗರಕ್ಕೆ ಕಲ್ಲಡ್ಕ ಪ್ರಭಾಕರ್ ಕೊಡುಗೆ ಏನು? ಕಪಾಲಿ ಬೆಟ್ಟ ಹಿಡ್ಕೊಂಡ್ ರಾಮನಗರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ರಾಮನಗರದ ಜನರು ಅಷ್ಟು ಸುಲಭವಲ್ಲ ಎಂದರು.

news18-kannada
Updated:February 17, 2020, 3:46 PM IST
ಮೈತ್ರಿ ಸರ್ಕಾರದ ಸಾಧನೆಗಳನ್ನೇ ಬರೆದುಕೊಟ್ಟು ರಾಜ್ಯಪಾಲರಿಂದ ಭಾಷಣ ಮಾಡಿಸಲಾಗಿದೆ; ಎಚ್​ಡಿ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು: ಬಜೆಟ್​ ಅಧಿವೇಶನಕ್ಕೂ ಮುನ್ನ ಎರಡು ಸದನಗಳನ್ನು ಉದ್ದೇಶಿಸಿ ಇಂದು ರಾಜ್ಯಪಾಲರು ಮಾಡಿದ ಭಾಷಣ ಕಟ್​ ಆ್ಯಂಡ್​ ಪೇಸ್ಟ್ ಭಾಷಣ​. ಸಮ್ಮಿಶ್ರ ಸರ್ಕಾರದ ಕಾರ್ಯಕ್ರಮಗಳನ್ನು, ಸಾಧನೆಗಳನ್ನು 12 ಪುಟಗಳಲ್ಲಿ ಬರೆದುಕೊಟ್ಟು  ರಾಜ್ಯಪಾಲರಿಂದ ಓದಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದರು.

ರಾಜ್ಯಪಾಲರ ಭಾಷಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಮಳೆ ಹಾನಿಯಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಮಳೆಯಿಂದ ಆದ ಅನಾಹುತಗಳ ಬಗ್ಗೆ, ಕೈ ಗೊಂಡ ಕ್ರಮಗಳ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಿಲ್ಲ. ಕೇಂದ್ರ ಸರ್ಕಾರದಿಂದ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಹಣ ಬರಬೇಕು ಎಂಬುದರ ಬಗ್ಗೆ ಉಲ್ಲೇಖವಿಲ್ಲ.

 

ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಿದ್ದಲ್ಲದೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಕೊಟ್ಟ ಬಳಿಕವೂ ಆರ್ಥಿಕವಾಗಿ ಸದೃಢವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಆರು ತಿಂಗಳಿಂದ ಮಾಡಿದ ಒಂದೇ ಒಂದು ಕೆಲಸದ ಬಗ್ಗೆ ಉಲ್ಲೇಖವಿಲ್ಲ. ಬಿಜೆಪಿಯಿಂದ ಸುಮ್ಮನೆ ಆರೋಪ ಮಾಡುವ ಕೆಲಸ ನಡೆಯುತ್ತಿದೆ. ಅಂಕಿ ಸಂಖ್ಯೆಗಳನ್ನು ಇಡಬೇಕಾದ ಸರ್ಕಾರ ಮುಚ್ಚಿಡುತ್ತಿದೆ. ಕೇಂದ್ರ ಸರ್ಕಾರದಿಂದ ನರೇಗಾದಲ್ಲಿ ಬರಬೇಕಾದ ಹಣ ಎಷ್ಟು ಬಾಕಿ ಇದೆ. ಜಿಎಸ್​ಟಿ ಪರಿಹಾರದ ದುಡ್ಡು ಬಂದಿಲ್ಲ, ನರೇಗಾ ದುಡ್ಡು ಬಂದಿಲ್ಲ, ಕೇಂದ್ರ ಸರ್ಕಾರದ ನಡವಳಿಕೆಯಿಂದ ಯಡಿಯೂರಪ್ಪನವರ ಸರ್ಕಾರಕ್ಕೆ ಈ ಪರಿಸ್ಥಿತಿ ಬಂದಿದೆ. ನನ್ನ ಮೈತ್ರಿ ಸರ್ಕಾರದ ಅವಧಿಯಿಂದ ಈ ಸರ್ಕಾರಕ್ಕೆ ಈ ತರನಾದ ಪರಿಸ್ಥಿತಿ ಬಂದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಹುಬ್ಬಳ್ಳಿಯ ಕೆಎಲ್​ಇ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಮಾತನಾಡಿದ ಎಚ್​ಡಿಕೆ, ಸರ್ಕಾರದ ನಡವಳಿಕೆ ಏನಿದೆ ಅದು ಸರಿಯಲ್ಲ.  ಅಧಿಕಾರಿಗಳು ನಿಯಂತ್ರಣದಲ್ಲಿ ಇದ್ದಾರೋ ಇಲ್ಲವೋ, ಗೊತ್ತಿಲ್ಲ. ಇದೊಂದು ಗಂಭೀರ ಪ್ರಕರಣ, ಸ್ಟೇಷನ್ ಬೇಲ್ ಮೇಲೆ ಬಿಡ್ತಾರೆ. ಶಾಹಿನ್ ಶಾಲೆಯಲ್ಲಿ ಮಕ್ಕಳು ನಾಟಕ ಮಾಡಿದ್ದಕ್ಕೆ ಪೋಷಕರನ್ನು ಜೈಲಿಗೆ ಹಾಕ್ತಾರೆ. ಇದು ಸರ್ಕಾರದ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದರು.

ರಾಮನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ ವಿಚಾರವಾಗಿ ಮಾತನಾಡಿದ ಎಚ್​ಡಿಕೆ,  ಅದೇನೋ ಪ್ಯಾಂಟ್, ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಿದ್ದಾರಂತೆ.  ರಾಮನಗರದ ಮುಸ್ಲಿಂ ಬೀದಿಯಲ್ಲಿ ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಲು ಅವಕಾಶ ಕೊಟ್ಟವರು ಯಾರು? ಕಾನೂನಿನಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡಲು ಅವಕಾಶವಿದೆಯೇ? ದೊಣ್ಣೆ ಮಾರಕಾಸ್ತ್ರ ಅಲ್ಲವೇ..? ರಾಮನಗರ ರಾಮ ರಾಜ್ಯವಾಗೇ ಇರಬೇಕು? ರಾವಣನ ರಾಜ್ಯವಾಗೋಕೆ ಬಿಡೋದಿಲ್ಲ. ಬೇರೆಯವರು ಹೀಗೆ ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡೋಕೆ ಬಿಡ್ತೀರಾ? ರಾಮನಗರಕ್ಕೆ ಕಲ್ಲಡ್ಕ ಪ್ರಭಾಕರ್ ಕೊಡುಗೆ ಏನು? ಕಪಾಲಿ ಬೆಟ್ಟ ಹಿಡ್ಕೊಂಡ್ ರಾಮನಗರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ರಾಮನಗರದ ಜನರು ಅಷ್ಟು ಸುಲಭವಲ್ಲ ಎಂದರು.

ಇದನ್ನು ಓದಿ: ಜೆಡಿಎಸ್ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಪರಿಷತ್ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಮತದಾನಜಿಟಿ ದೇವೇಗೌಡರ ಬಗ್ಗೆ ಚರ್ಚೆ ಮಾಡಲ್ಲ. ಶಾಸಕಾಂಗ ಪಕ್ಷದ ಸಭೆ ಇದೆ ಎಂಬ ಸಂದೇಶ ಹೋಗಿದೆ. ಆದರೂ ಬೇರೆಯದ್ದೇ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಬಂದ್ರು... ಹೋದ್ರು.. ಮುಂದೆ ಎಲ್ಲೋಗ್ತಾರೋ ನೋಡೋಣ. ನಾವು ಬಾಗಿಲು ಹಾಕಿಕೊಂಡು ಕೂತಿಲ್ಲ. ಯಾರು ಹೋದ್ರು ಜನತಾದಳ ಮುಳುಗಿ ಹೋಗಲ್ಲ.  ಹಿಂದೆ ಹೋದವರ ಕಥೆ ಗೊತ್ತು ಅಲ್ವಾ. ರಾಜಕಾರಣದಲ್ಲಿ ಇದೆಲ್ಲಾ ಆಗುತ್ತಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
First published: February 17, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories