ಕಲಬುರಗಿ: ಜೆಡಿಎಸ್ (JDS) ಅಧಿಕಾರಕ್ಕೆ ಬಂದರೆ ಈ ಬಾರಿಯೂ ಸಾವಿರಾರು ರೈತರ ಸಾಲ ಮನ್ನಾ (Farmers Loans) ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭರವಸೆ ನೀಡಿದ್ದಾರೆ. ಕಲಬುರಗಿಯ (Kalaburagi) ಖಜೂರಿ ಗ್ರಾಮದಲ್ಲಿ ಪಂಚರತ್ನ ಯಾತ್ರೆಗೆ (Pancharatna Yatra) ಚಾಲನೆ ನೀಡಿ ಮಾತನಾಡಿದ ಅವರು, ಆಳಂದ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ರೈತರು (Farmers) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ ಅವರು, ಕೋವಿಡ್ ನಂತರ ಯುವಕರಿಗೂ ಕೂಡ ಉದ್ಯೋಗ ಸಿಗುತ್ತಿಲ್ಲ. ರೈತರ ಬೆಳೆದ ಬೆಳೆಗೂ ಬೆಲೆ ಸಿಗುತ್ತಿಲ್ಲ. ಮಳೆಯಿಂದ ಬೆಳೆ ನಾಶವಾಗಿ ಸಂಕಷ್ಟ ಎದುರಿಸಿದ್ದಾರೆ. ರೈತರ ಬದುಕಿನಲ್ಲಿ ಶಕ್ತಿಯುತವಾಗಿ ಜೀವಸುವ ಸ್ಥಿತಿಯನ್ನು ತಲುಪಿಲ್ಲ. ಮಹಿಳೆಯರ ಸ್ಥಿತಿಯಂತು ಹೇಳುವುದೇ ಬೇಡ. ಆದ್ದರಿಂದಲೇ ನಾವು ಪಂಚರತ್ನ ಮೂಲಕ ಜನರ ಮುಂದೆ ಬಂದಿದ್ದೇವೆ.
ಈ ಬಾರಿ ಜನರು ನಮಗೆ ಸ್ವತಃ ಶಕ್ತಿಯಿಂದ ಅಧಿಕಾರ ಪಡೆಯುವ ಬಲ ಕೊಟ್ಟರೆ ಪಂಚರತ್ನ ಯಾತ್ರೆಯಲ್ಲಿ ನೀಡರುವ ಎಲ್ಲಾ ಯೋಜನೆಗಳನ್ನು ಜಾರಿ ಮಾಡ್ತೇವೆ. ಕಲಬುರಗಿ ಜಿಲ್ಲೆಯಲ್ಲಿ ಒಬ್ಬ ರೈತ 30 ಎಕರೆ ಜಮೀನಿನಲ್ಲಿ ಬೆಳೆ ಸಂಪೂರ್ಣ ನಾಶ ಆಗಿದೆ. ಸಾಲ ಮಾಡಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಒಂದು ವಾರದಲ್ಲಿ ಏಳು ಮಂದಿ ತೊಗರಿ ಮಾರಾಟಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: Anitha Kumaraswamy: ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಮುಂದೆ ಕುಮಾರಣ್ಣ ಮನ್ನಾ ಮಾಡ್ತಾರೆ!
ರೈತರ ಸ್ಥಿತಿ ಹೀಗಿದೆ, ಇನ್ನು ನೇಕಾರರೊಬ್ಬರು ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ವರದಿಯನನ್ನು ಪಡೆದಿದ್ದೇನೆ. ಆತ ತನ್ನ ಮಕ್ಕಳನ್ನು ನೀರಿಗೆ ತಳ್ಳಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ದರಿಂದ ಇಂತಹ ಘಟನೆಗಳನ್ನು ಮರುಕಳುಹಿಸದಂತೆ ತಡೆಯಲು ಚಿಂತನೆ ಮಾಡಿ ಈ ಬಾರಿ ನಿಮ್ಮ ಎದುರಿಗೆ ಬಂದಿದ್ದೇನೆ.
5 ವರ್ಷದ ಸರ್ಕಾರವನ್ನು ಜನತಾದಳಕ್ಕೆ ನೀಡಿ
ಎರಡು ಬಾರಿ ಸಿಎಂ ಆದಾಗ ಬಹುಮತ ಇಲ್ಲದಿದ್ದರೂ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೆ. ರೈತರ ಸಾಲಮನ್ನಾ ಮಾಡಿದ್ದೆ. ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದ್ದೆ, ಆದ್ರೆ ಈಗ ಅದು ಇಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರೆ ನೀಡಿರುವ ಭರವಸೆಯನ್ನು ಈಡೇರಿಸಲು ಆಗೋದಿಲ್ಲ. ಆದ್ದರಿಂದ ಈ ಬಾರಿ ಒಂದು ಅವಕಾಶ ಕೊಟ್ಟು ನೋಡಿ. ಕೇವಲ 5 ವರ್ಷದ ಸರ್ಕಾರವನ್ನು ಜನತಾದಳಕ್ಕೆ ನೀಡಿ, ನಿಮಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಮನವಿ ಮಾಡಿದರು.
ಆಳಂದ ಕ್ಷೇತ್ರದ ಖಂಡಾಲ ಗ್ರಾಮದಲ್ಲಿ ಈರುಳ್ಳಿ ತೋಟಕ್ಕೆ ಭೇಟಿ ನೀಡಿ ರೈತರ ಜತೆ ಚರ್ಚೆ ನಡೆಸಿದೆ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇರುವರಿ ಚೆನ್ನಾಗಿದೆ, ಆದರೆ ಬೆಲೆ ಇಲ್ಲ. ಬೆಂಬಲ ಬೆಲೆ ಕೊಡಿಸಿ ಎಂದು ಬೆಳೆಗಾರರು ಮನವಿ ಮಾಡಿದರು.1/2#ಪಂಚರತ್ನ_ರಥಯಾತ್ರೆ#ಕೃಷಿ_ಚೈತನ್ಯ#ಆಳಂದ #ಕಲಬುರ್ಗಿ pic.twitter.com/QQK9y12QJV
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 9, 2023
ಅಲ್ಲದೇ, ರೈತರನ್ನು ಕಷ್ಟಕ್ಕೆ ದೂಡಲು ನಮ್ಮ ಪಕ್ಷ ಬಿಡುವುದಿಲ್ಲ. ರಾಜ್ಯ ಹಾಗೂ ರೈತರ ದಿಕ್ಕನ್ನು ಬದಲಿಸಲು ಪಂಚರತ್ನ ಯೋಜನೆಗಳನ್ನ ಜಾರಿ ಮಾಡಲಾಗುತ್ತದೆ. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ಬಿಜೆಪಿ ಸರ್ಕಾರ ಸುಮಾರು 7 ಸಾವಿರ ಕೋಟಿ ರೂಪಾಯಿ ಹಣವನ್ನ ಡೈವರ್ಟ್ ಮಾಡಿದೆ.
ನಮ್ಮ ಪಂಚರತ್ನ ಯೋಜನೆ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೀನಿ. ಮುಂದಿನ 5 ವರ್ಷದಲ್ಲಿ ರಾಜ್ಯ ಎಲ್ಲರಿಗೂ ಮನೆ ಕೊಡುವ ಕೆಲಸ ಮಾಡ್ತೀವಿ. ರಾಜ್ಯದ ಯಾವುದೇ ಒಂದು ಕುಟುಂಬ ಕೂಡ ಕಣ್ಣೀರು ಹಾಕಲು ಬಿಡದೆ ನೋಡಿಕೊಳ್ಳುತ್ತೇನೆ. ವಿಶ್ವಾಸವಿಟ್ಟು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ