• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದಿಲ್ಲ, ನಾನು ಜಾತಿ ರಾಜಕಾರಣ ಮಾಡಿಲ್ಲ! ವಿವಾದಾತ್ಮಕ ಹೇಳಿಕೆಗೆ ಎಚ್‌ಡಿಕೆ ಸ್ಪಷ್ಟನೆ

HD Kumaraswamy: ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದಿಲ್ಲ, ನಾನು ಜಾತಿ ರಾಜಕಾರಣ ಮಾಡಿಲ್ಲ! ವಿವಾದಾತ್ಮಕ ಹೇಳಿಕೆಗೆ ಎಚ್‌ಡಿಕೆ ಸ್ಪಷ್ಟನೆ

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

"ನಾನು ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ" ಅಂತ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. "ನಾನು ಸಾರ್ವಜನಿಕರ ಅಹವಾಲು ಕೇಳುವಾಗ ನಿನ್ನ ಜಾತಿ ಯಾವುದು ಅಂತ ಕೇಳಿಲ್ಲ. ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾನು ಹೇಳಿದ ಹಿನ್ನೆಲೆಗೆ ಸ್ಪಷನೆ ಕೊಟ್ಟಿದ್ದೇನೆ ಎಂದಿದ್ದಾರೆ" ಅಂತ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ನೀಡಿದ್ದ ಬ್ರಾಹ್ಮಣ ಸಿಎಂ ಹೇಳಿಕೆ ವಿವಾದ (Brahmin CM controversy) ಜೋರಾಗುತ್ತಿದೆ. ಒಂದೆಡೆ ಕುಮಾರಸ್ವಾಮಿ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಬಳಸಲು ಬಿಜೆಪಿ ಪ್ಲಾನ್ (BJP) ಮಾಡಿದ್ದರೆ, ಮತ್ತೊಂದೆಡೆ ಎಚ್‌ಡಿ ಕುಮಾರಸ್ವಾಮಿ ತಮ್ಮ ಹೇಳಿಕೆ ಕುರಿತಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ (JP Bhavan) ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಮೂರು ದಿನಗಳ ಹಿಂದೆ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆ ವಿವಾದದ ರೂಪ ಪಡೆದಿದೆ. ಸಮಾಜದಲ್ಲಿ ಒಬ್ಬೊಬ್ಬರು ಅವರದೇ ಆದ ವಿಶ್ಲೇಷಣೆ ಕಲ್ಪಿಸುತ್ತಿದ್ದಾರೆ. ಇದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ ಅಂದಿದ್ದಾರೆ. ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ ಅಂತ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.


“ನಾನು ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ”


ನಾನು ಜಾತಿ ಹೆಸರಲ್ಲಿ ರಾಜಕಾರಣ ಮಾಡಿಲ್ಲ ಅಂತ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಾನು ಸಾರ್ವಜನಿಕರ ಅಹವಾಲು ಕೇಳುವಾಗ ನಿನ್ನ ಜಾತಿ  ಯಾವುದು ಅಂತ ಕೇಳಿಲ್ಲ. ನಮ್ಮ ಕುಟುಂಬ ಮೊದಲಿನಿಂದಲೂ ನಾಡಿನ ಎಲ್ಲಾ ಸಮಾಜದ ಬಗ್ಗೆ ಗೌರವದಿಂದ ನಡೆದುಕೊಂಡಿದೆ. ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ನಾನು ಹೇಳಿದ ಹಿನ್ನೆಲೆಗೆ ಸ್ಪಷನೆ ಕೊಟ್ಟಿದ್ದೇನೆ ಎಂದಿದ್ದಾರೆ.




“ಈ ದೇಶದಲ್ಲಿ ಯಾರು ಬೇಕಾದರೂ ಸಿಎಂ, ಶಾಸಕ ಆಗಬಹುದು”


ಇನ್ನು ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೆ ಅವಮಾನ ಮಾಡುವ ಹಿನ್ನೆಲೆಯಿಂದ ನಾನು ಬಂದಿಲ್ಲ ಅಂತ ಎಚ್‌ಡಿಕೆ ಹೇಳಿದ್ರು. ಈ ದೇಶದಲ್ಲಿ ಯಾರು ಬೇಕಾದರೂ ಸಿಎಂ, ಶಾಸಕರು ಆಗಬಹುದು. ಯಾವ ಯಾವ ಹಿನ್ನೆಲೆಯಲ್ಲಿ ಎಂಪಿ, ಶಾಸಕರಿದ್ದಾರೆ ಅನ್ನೋದು ಗೊತ್ತಿದೆ. ಆದರೆ ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು


ಇದನ್ನೂ ಓದಿ: Karnataka Politics: ಅವರದ್ದು ಊರು-ಮನೆ ದಾಟಿದ ಸಾಮರ್ಥ್ಯ: ಹೆಚ್​​ಡಿಕೆ ಹೇಳಿಕೆಗೆ ಸಿ ಟಿ ರವಿ ತಿರುಗೇಟು


“ನಾನು ಬ್ರಾಹ್ಮಣ ಸಮಾಜದ ಟೀಕೆ ಮಾಡಿಲ್ಲ”


ನಾನು ಕೆಲವೊಂದು ವೈಯಕ್ತಿಕ ಟೀಕೆ ಮಾಡಿದ್ದೇನೆ. ಆದರೆ ಯಾವುದೇ ಸಮಾಜದ ಟೀಕೆ ಮಾಡಿಲ್ಲ. ಗಾಂಧೀಜಿ, ಶಿವಾಜಿ ಕೊಂದ ವರ್ಗ ಎಂದು ನಾನು ಹೇಳಿದ್ದು ಬೆಳಗಾವಿಯಲ್ಲಿ ಯಾವ ಪರಿಸ್ಥಿತಿಯಿದೆ ಅನ್ನೋದನ್ನ ನೋಡಿ ಹೇಳಿದ್ದು. ನನಗೆ ಯಾವುದೇ ಸಮಾಜಕ್ಕೆ ನೋವು ಉಂಟು ಮಾಡುವ ಉದ್ದೇಶವಿರಲಿಲ್ಲ. ನಾಡಿನ ಜನ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲು ನೀಡಿದ ಹೇಳಿಕೆಯೆಂದು ಎಚ್‌ಡಿಕೆ ಸಮರ್ಥನೆ ನೀಡಿದ್ದಾರೆ.


ಅಶ್ವತ್ಥ್ ನಾರಾಯಣ್ ವಿರುದ್ಧ ಆಕ್ರೋಶ


ಬಿಎಂಎಸ್ ಟ್ರಸ್ಟಿ ಜೊತೆಗೆ ಸಚಿವ ಅಶ್ವತ್ಥ್ ನಾರಾಯಣ ಊಟ ಮಾಡುತ್ತಿರುವ ಫೋಟೊ ತೋರಿಸಿದ ಎಚ್‌ಡಿಕೆ, ಅಶ್ವತ್ಥ್ ನಾರಾಯಣ್ ಏನೋ ತಿಂದಿದ್ದಾರೆ ಅಂದ್ರು. ಮಹಾನುಭಾವ ಎಲ್ಲಿ ಕೂತು ಆಸ್ತಿ ಬರೆದುಕೊಟ್ಡಿದ್ದಾನೆ ನೋಡ್ಕೊಳಿ ಅಂದ್ರು. ಅಶ್ವತ್ಥ್ ನಾರಾಯಣ ವಿರುದ್ದ ಫೋಟೊ ಬಿಡುಗಡೆ ಮಾಡಿದ್ದಕ್ಕೆ ಪೂರಕ ದಾಖಲೆ ಏನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಟ್ಟಿಗೆ ಕೂತು ಊಟ ಮಾಡಿದ್ರೆ ತಪ್ಪಿಲ್ಲ. ಯಾವ ಸಂದರ್ಭದಲ್ಲಿ ಮಾಡಿದ್ದಾರೆ ಅನ್ನೋದು ಮುಖ್ಯ. ಬಿಎಂಎಸ್ ಟ್ರಸ್ಟ್ ಅಪ್ರೂವಲ್‌ಗೆ ನನ್ನ ಬಳಿ ಬಂದಿದ್ರು, ಏನು ಆಫರ್ ಕೊಟ್ಟಿದ್ರೂ ಅನ್ನೋದು ಗೊತ್ತಿದೆ. ಬಡವರು ಓದುವ ಟ್ರಸ್ಟ್ ಅನ್ನು ಕೋಟ್ಯಾಂತರ ರೂಪಾಯಿಗೆ ಕೊಟ್ಟು ಲಾಭ ಮಾಡಿಕೊಂಡಿದ್ದಾರೆ ಅಂತ ಆರೋಪಿಸಿದ್ದರು.




“ಸಿಟಿ ರವಿ ಏನು ಪತಿವ್ರತೆನಾ?”


ಸಿಟಿ ರವಿ ಏನು ಪತಿವ್ರತೆನಾ ಅಂತ ಆಕ್ರೋಶ ವ್ಯಕ್ತಪಡಿಸಿದ ಅವರು, ಎಲ್ಲವನ್ನೂ ನೋಡಿದ್ದೇನೆ. ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ. ಅಮಾಯಕ ವ್ಯಕ್ತಿ KSRಗೆ ಯಾಕೆ ಬಿದ್ದು ಸತ್ತ ಎಂದು ಹೇಳುತ್ತೀರಾ ಸಿಟಿ ರವಿಯವರೇ..? ಅಂತ ಪ್ರಶ್ನಿಸಿದ್ರು. ಇನ್ನು ನಾನು ಪ್ರಹ್ಲಾದ್ ಜೋಷಿಯವರು  ಸಿಎಂ ಆಗಬಾರದು ಎಂದಿಲ್ಲಾ. ಆದ್ರೆ ಡಿಎ‌ನ್‌ಎ ಅವರ ಹಿನ್ನೆಲೆ ಏನು ಅಂತ ನಾನು ಹೇಳ್ತಿದ್ದೇನೆ ಅಂತ ಹೇಳಿದ್ದಾರೆ.

Published by:Annappa Achari
First published: