ಮಂಡ್ಯಕ್ಕೆ 8,500 ಕೋಟಿ ರೂ. ಅನುದಾನ ನೀಡಿದ್ದು ಕೇವಲ ಗಿಮಿಕ್​; ಮಗನ ಗೆಲ್ಲಿಸಲು ಮಂಡ್ಯ ಜನರಿಗೆ ಎಚ್​ಡಿಕೆ ಮೋಸ?

ಕೆಆರ್​ ಪೇಟೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಚಲುವರಾಯಸ್ವಾಮಿ, ಕುಮಾರಸ್ವಾಮಿ ಜಿಲ್ಲೆಗೆ ಬಿಡುಗಡೆ ಮಾಡಿದ್ದೇನ್ನೆನ್ನುವ ಅನುದಾನದ  ದಾಖಲೆ ತೋರಿಸಲಿ ಎಂದಿದ್ದಾರೆ.

news18-kannada
Updated:November 25, 2019, 12:42 PM IST
ಮಂಡ್ಯಕ್ಕೆ 8,500 ಕೋಟಿ ರೂ. ಅನುದಾನ ನೀಡಿದ್ದು ಕೇವಲ ಗಿಮಿಕ್​; ಮಗನ ಗೆಲ್ಲಿಸಲು ಮಂಡ್ಯ ಜನರಿಗೆ ಎಚ್​ಡಿಕೆ ಮೋಸ?
ಸಿಎಂ ಕುಮಾರಸ್ವಾಮಿ
  • Share this:
ಮಂಡ್ಯ (ನ.25): ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮಗ ನಿಖಿಲ್​ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆಗೆ ಇಳಿದಿದ್ದರು. ಅವರನ್ನು ಗೆಲ್ಲಿಸಲೇಬೇಕು ಎನ್ನುವ ಛಲಕ್ಕೆ ಬಿದ್ದಿದ್ದ ಎಚ್​ಡಿಕೆ ನಾನಾ ತಂತ್ರಗಳನ್ನು ಉಪಯೋಗಿಸಿದ್ದರು. ಇದರ ಜೊತೆ, ಮತ ಗಳಿಕೆ ಮಾಡಿಕೊಳ್ಳಲು ಮಂಡ್ಯ ಜನತೆಗೆ ಅವರು ಸುಳ್ಳು ಹೇಳಿದ್ದರು ಎನ್ನುವ ವಿಚಾರ ಈಗ ಬಯಲಾಗಿದೆ.

ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 8,500 ಕೋಟಿ ರೂ. ವಿಶೇಷ ಅನುದಾನ ನೀಡಿರುವುದಾಗು ಎಚ್​​ಡಿಕೆ  ಹೇಳಿದ್ದರು. ಆದರೆ, ಇದು ಕೇವಲ ಚುನಾವಣಾ ಗಿಮಿಕ್​ ಎನ್ನುವ ವಿಚಾರ ಬಜೆಟ್​ ದಾಖಲೆ ಪ್ರತಿಯಿಂದ ಬಯಲಾಗಿದೆ.

2019-20 ಮಂಡಿಸಿದ ಬಜೆಟ್​​ನಲ್ಲಿ ಮಂಡ್ಯ ನಗರದ ರಸ್ತೆ ಅಭಿವೃದ್ದಿಗೆ 50 ಕೋಟಿ ರೂ. ಮತ್ತು ಮೈಷುಗರ್ ಸಕ್ಕರೆ ಕಾರ್ಖಾನೆಗೆ 100 ಕೋಟಿ ಅನುದಾನ ಮಾತ್ರ ಉಲ್ಲೇಖ ಮಾಡಲಾಗಿದೆ. ದುರಾದೃಷ್ಟ ಎಂದರೆ ಈ ಹಣ ಕೂಡ ಈವರೆಗೆ ಬಿಡುಗಡೆ ಆಗಿಲ್ಲ.

ಜಿಲ್ಲೆಗೆ 8,500 ಕೋಟಿ ರೂ. ಅಭಿವೃಧ್ಧಿ ಯೋಜನೆ ಕೊಟ್ಟಿದ್ದೇನೆಂದು ಮಗ ನಿಖಿಲ್ ಚುನಾವಣೆಗೆ ನಿಂತಾಗ ಕುಮಾರಸ್ವಾಮಿ ಹೇಳಿದ್ದೇನೋ ಹೌದು. ಆದರೆ, ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖವ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೆ.ಆರ್. ಪೇಟೆಯಲ್ಲಿ ಬೆಂಬಲ ನೀಡಲು ಸುಮಲತಾ ಅಂಬರೀಶ್​ಗೆ ಡೆಡ್​ಲೈನ್ ಕೊಟ್ಟಿಲ್ಲ; ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ

ಇನ್ನು, ಕೈ ನಾಯಕ ಚಲುವರಾಯಸ್ವಾಮಿ ಕೂಡ ಈ ವಿಚಾರವಾಗಿ ಸವಾಲು ಹಾಕಿದ್ದಾರೆ. ಕೆಆರ್​ ಪೇಟೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಅವರು, ಕುಮಾರಸ್ವಾಮಿ ಜಿಲ್ಲೆಗೆ ಬಿಡುಗಡೆ ಮಾಡಿದ್ದೇನ್ನೆನ್ನುವ ಅನುದಾನದ  ದಾಖಲೆ ತೋರಿಸಲಿ ಎಂದಿದ್ದಾರೆ. ಹೀಗಾಗಿ, ಕುಮಾರಸ್ವಾಮಿ ಕೇವಲ ಮಗನನ್ನು ಗೆಲ್ಲಿಸುವ ಉದ್ದೇಶದಿಂದ ಈ ರೀತಿ ಗಿಮಿಕ್​ ಮಾಡಿದ್ದರು ಎನ್ನಲಾಗಿದೆ.

(ವರದಿ: ರಾಘವೇಂದ್ರ ಗಂಜಾಮ್​)
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading