Siddaramaiah v/s HDK: ನೀವೆ ಏನು ಸೆಕ್ಯೂಲರಿಸಂ ಉಳಿಸೋದು, ನಾವೇನು ಕಡುಬು ತಿಂತಿದ್ದೀವಾ? ಸಿದ್ದುಗೆ ಎಚ್​ಡಿಕೆ ತಿರುಗೇಟು

ನನ್ನ ಮದಲನೇ ಅಜೆಂಡಾ ಇರೋದು ಬಿಜೆಪಿ ಸೋಲಬೇಕು ಅನ್ನೋದು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಮಾತುಕತೆಗೆ ಸಿದ್ದರಾಮಯ್ಯ ಒಬ್ಬರೇ ಒಪ್ಪದೆ ಇರೋದು, ಎಲ್ಲಾ ಒಪ್ಪಿದ್ದಾರೆ ಎಂದು ಕಿಡಿಕಾರಿದ್ರು.

ಎಚ್‌ಡಿಕೆ-ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಎಚ್‌ಡಿಕೆ-ಸಿದ್ದರಾಮಯ್ಯ (ಸಂಗ್ರಹ ಚಿತ್ರ)

  • Share this:
ಮೈಸೂರು: ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy), ರಾಜ್ಯಸಭೆ ಚುನಾವಣೆ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ (JDS) ಪಕ್ಷದ ಅಭ್ಯರ್ಥಿ ನಿಯುಕ್ತಿಗೊಳಿಸಿ ಬಿಜೆಪಿ (BJP) ಸೋಲಿಸಬೇಕಾದರೆ, ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ ಎಂದಿದ್ದಾರೆ. ದೇವೇಗೌಡರಿಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದಿದ್ದಾರೆ. ನಾವು ಗೆದ್ದಿದ್ದಕ್ಕಿಂತ ಹೆಚ್ಚು ಸೋತಿದ್ದೇನೆ, ಈಗ ಬಿಜೆಪಿ ಸೋಲಿಸಲು ಸಹಕಾರ ಕೇಳಿದ್ದಾರೆ. ಬಿಜೆಪಿ ಸೋಲಿಸಬೇಕಾಗಿದ್ದರೆ ಚುನಾವಣಾ ಪೂರ್ವದಲ್ಲೇ ಚರ್ಚೆ ಮಾಡಬೇಕಿತ್ತು. ನಮಗೆ ಮುಂಚೆಯೇ ಒಂದು ಮನವಿ ಮಾಡಬಹುದಿತ್ತು. ನಮ್ಮ ಮುಂದೆ ಯಾರಾದ್ರೂ ಮನವಿ ಇಟ್ಟಿದ್ರಾ? ನಾನು ಈ ಬಗ್ಗೆ ಕಾಂಗ್ರೆಸ್ ಜೊತೆ ಮಾತನಾಡಿಲ್ಲ. ಈ ಬಗ್ಗೆ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದಾರೆ. ಜೆಡಿಎಸ್ ನಲ್ಲಿ 8ರಿಂದ 10 ಮತ್ತು ಪಡೆಯುತ್ತೇವೆ ಎಂದು 2ನೆ ಅಭ್ಯರ್ಥಿ ಹಾಕಿದ್ದಾರೆ. ಕಾಂಗ್ರೆಸ್ 2ನೆ ಅಭ್ಯರ್ಥಿ ಹಾಕಿದ ಪರಿಣಾಮವೇ ಬಿಜೆಪಿ 3ನೇ ಅಭ್ಯರ್ಥಿ ಹಾಕಿದ್ದಾರೆ. ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಕಲಿಲ್ಲವಾದ್ದರಿಂದ ಅಂದು ಕಾಂಗ್ರೆಸ್ ಅಭ್ಯರ್ಥಿ ಹಾಕಲಿಲ್ಲ ಎಂದು ಎಚ್​ಡಿಕೆ ಸ್ಪಷ್ಟನೆ ನೀಡಿದರು.

ಪಾಪದ ಸರ್ಕಾರದ ಜನಕ ಸಿದ್ದರಾಮಯ್ಯ

ನೀವು ಬಿಜೆಪಿ ಅಭ್ಯರ್ಥಿ ಸೋಲಬೇಕು ಅಂದ್ರೆ ನಾವು 32 ಎರಡನೇ ಪ್ರಾಶಸ್ತ್ಯ ಮತ ಕೊಡ್ತೀವಿ. ನಿಮ್ಮ ಎರಡನೇ ಅಭ್ಯರ್ಥಿಯ 24 ಎಡರನೇ ಪ್ರಾಶಸ್ತ್ಯ ಮತ ನಮಗೆ ಕೊಡಿ ಎಂದು ಕಾಂಗ್ರೆಸ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು. ಇವತ್ತಿನ ಪಾಪದ ಸರ್ಕಾರದ ಜನಕ ಸಿದ್ದರಾಮಯ್ಯ. ವಿಪಕ್ಷ ನಾಯಕನಾಗಲು ಗೂಟದ ಕಾರಿನಲ್ಲಿ ಓಡಾಡಲು ಅವತ್ತಿನ ಸರ್ಕಾರ ತೆಗೆದ್ರು. ನನ್ನ ಮದಲನೇ ಅಜೆಂಡಾ ಇರೋದು ಬಿಜೆಪಿ ಸೋಲಬೇಕು ಅನ್ನೋದು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಮಾತುಕತೆಗೆ ಸಿದ್ದರಾಮಯ್ಯ ಒಬ್ಬರೇ ಒಪ್ಪದೆ ಇರೋದು, ಎಲ್ಲಾ ಒಪ್ಪಿದ್ದಾರೆ ಎಂದು ಕಿಡಿಕಾರಿದ್ರು.

ಇದನ್ನೂ ಓದಿ: Hijab Row: ಹಿಜಾಬ್ ಗಲಾಟೆಯಾದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ

ನಾವೇನು ಕಡುಬು ತಿಂತಿದ್ದೀವಾ?

ಈ ಚುನಾವಣೆಯಲ್ಲಿ ಎರಡನೇ ಅಭ್ಯಾರ್ಥಿ ಹಾಕಿದ್ದೆ ಬಿಜೆಪಿ ಗೆಲ್ಲಿಸಲು ಎಂದು ಆರೋಪಿಸಿದರು. ಮನ್ಸೂರ್ ಹಾಲಿಯನ್ನ ಹಾಕುವ ಮೊದಲೇ ನಮ್ಮ ಜೊತೆ ಚರ್ಚೆ ಮಾಡಬೇಕಿತ್ತು. ನಾವು ನಿಮ್ಮ ಗುಲಾಮರಾ? ಬಿಜೆಪಿ ಬಿ ಟೀಂ ಅಂತಾ ಹೇಳಿ ಹೇಳಿ ಬಿಜೆಪಿ ಅಧಿಕಾರಕ್ಕೆ ತಂದವ್ರು ನೀವು. ಈ ಕಾರಣಕ್ಕಾಗಿಯೇ 70ಕ್ಕೆ ಇಳಿದಿದ್ದು. ನೀವೆ ಏನು ಸೆಕ್ಯೂಲರಿಸಂ ಉಳಿಸೋದು, ನಾವೇನು ಕಡುಬು ತಿಂತಿದ್ದೀವಾ? ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದಾಗ ನೀವು ಎಲ್ಲಿದ್ರಿ. ದೇವೇಗೌಡರು ಪ್ರಧಾನಿ ಆಗೋದಕ್ಕೆ ಯೂನೈಟೆಡ್ ಫ್ರಂಟ್ ನಲ್ಲಿದ್ದ ಪಕ್ಷಗಳು ಕಾರಣ. ಆ ವೇಳೆ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ರು.

ಫೋಟೋವನ್ನು ರಿಲೀಸ್ ಮಾಡಿದ್ದು ಯಾರು?

ನಿನ್ನೆ ವಿಮಾನ ನಿಲ್ದಾಣದಲ್ಲಿ ಬಿಎಸ್​ವೈ, ಸಿದ್ದರಾಮಯ್ಯ ಕುಳಿತು ಉಭಯ ಕುಶಲೋಪರಿ ಮಾಡಿದ್ದನ್ನು ಫೋಟೋ ವನ್ನು ರಿಲೀಸ್ ಮಾಡಿದ್ದು ಯಾರು? ವಿಐಪಿ ಕೂರುವ ಸ್ಥಳದಲ್ಲಿ ಪತ್ರಕರ್ತರಿಗೆ ಅವಕಾಶ ಇರಲಿಲ್ಲ, ಅಂತಹದರಲ್ಲಿ ನಿನ್ನೆಯ ಫೋಟೋ ಯಾಕೆ ಬಿಟ್ಟಿದ್ದೀರಿ. ಬಿಎಸ್ ವೈ ಜೊತೆ ಏನು ಮಾತನಾಡಿದ್ದೀರಿ? ಯಾವ ಉದ್ದೇಶಕ್ಕಾಗಿ ನಿನ್ನೆ ಭೇಟಿ ಮಾಡಿದ್ರಿ. ಅದು ವಿಐಪಿ ರೂಂ ಅಲ್ಲಿ ಯಾರೂ ಹೋಗೋಕೆ ಸಾಧ್ಯವಿಲ್ಲ. ನಿಮ್ಮ ಹಿಂಬಾಲಕರ ಮೂಲಕವೇ ಪೋಟೋ ವಿಡಿಯೋ ರಿಲೀಸ್​​ ಮಾಡಿಸಿದ್ರಿ. ಇದು ಆತ್ಮಸಾಕ್ಷಿಯ ಮತ ಪಡೆಯುವ ಉದ್ದೇಶವೇ ಎಂದು ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನಿಸಿದರು. ಆತ್ಮಸಾಕ್ಷಿ ಮತಗಳಿಗಾಗಿ ಫೋಟೋ ಬಿಟ್ಟಿದ್ದೀರಾ? ಈ ಹಿಂದೆ ಯಡಿಯೂರಪ್ಪ ಜೊತೆ ಏನೆಲ್ಲಾ ಮಾತುಕತೆ ಯಾಗಿತ್ತು ನಮಗೆ ಗೊತ್ತು. ಆದರೂ ಆತ್ಮ ಸಾಕ್ಷಿ ಬಗ್ಗೆ ಮಾತನಾಡುತ್ತೀರಿ.

ಚಡ್ಡಿ ಒಳಗೆ  ಏನು ಇಲ್ಲ

ಆರ್ ಎಸ್ ಎಸ್, ಕಾಂಗ್ರೆಸ್ ನಡುವೆ ಚಡ್ಡಿ ಅಭಿಯಾನ ವಿಚಾರವಾಗಿ ವ್ಯಂಗ್ಯವಾಡಿದ ಕುಮಾರಸ್ವಾಮಿ, ಚಡ್ಡಿ ಒಳಗೆ  ಏನು ಇಲ್ಲ. ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಇವರ ಜಗಳದಿಂದ ಚಡ್ಡಿಗೆ ಬಾರಿ ಬೇಡಿಕೆಯಾಗಿದೆ. ಚಡ್ಡಿ ಒಲೆಯುವ ಟೈಲರ್ ಗೆ ಬೇಡಿಕೆ ಶುರು ಆಗಿದೆ. ಚಡ್ಡಿ ರೈತರ ಸಂಕೇತ, ರೈತರು ಹೊಲದಲ್ಲಿ ಚಡ್ಡಿ ಹಾಕೊಂಡು ಕೆಲಸ ಮಾಡುತ್ತಾರೆ. ಚಡ್ಡಿ ಚಡ್ಡಿ ಎಂದು ಯಾಕೆ ರೈತರಿಗೆ ಅಪಮಾನ ಮಾಡುತ್ತೀರಿ. ಈ ಚಡ್ಡಿ ಬಗ್ಗೆ ನನ್ಯಾಕೆ ಮಾತನಾಡಲಿ ಎಂದರು.
Published by:Kavya V
First published: