• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ಸುಪಾರಿನೋ ಸಫಾರಿನೋ, ಪಾಪ ಹುಲಿ ಬೇಟೆಯಾಡಲು ಹೋಗಿದ್ರಾ? ಮೋದಿ ವೇಷಭೂಷಣಕ್ಕೆ ಎಚ್​ಡಿಕೆ ವ್ಯಂಗ್ಯ!

HD Kumaraswamy: ಸುಪಾರಿನೋ ಸಫಾರಿನೋ, ಪಾಪ ಹುಲಿ ಬೇಟೆಯಾಡಲು ಹೋಗಿದ್ರಾ? ಮೋದಿ ವೇಷಭೂಷಣಕ್ಕೆ ಎಚ್​ಡಿಕೆ ವ್ಯಂಗ್ಯ!

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ/ ಪ್ರಧಾನಿ ಮೋದಿ

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ/ ಪ್ರಧಾನಿ ಮೋದಿ

ಪ್ರಾಣಿಗಳ ಜೊತೆಯೇ ಅನೇಕರ ಬದುಕಿದ್ದಾರೆ. ಅಂಥವರನ್ನ ಒಕ್ಕಲೆಬ್ಬಿಸಿದರೆ ಅವರೆಲ್ಲ ಎಲ್ಲಿಗೆ ಹೋಗಬೇಕು ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

  • Share this:

ಚಿತ್ರದುರ್ಗ: ಚುನಾವಣೆ (Election) ಹೊತ್ತಿನಲ್ಲಿ ಕರ್ನಾಟಕ (Karnataka) ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Modi) ಬಂಡೀಪುರದಲ್ಲಿ ಸಫಾರಿ (Bandipur Safari ) ನಡೆಸಿದ್ದಾರೆ. ಇಂದು ಬೆಳಗ್ಗೆ 7:30 ರಿಂದ ಸುಮಾರು 2 ಗಂಟೆಗಳ ಕಾಲ ಸಫಾರಿ ನಡೆಸುವ ಮೂಲಕ ಅಭಯಾರಣ್ಯದ ಸೌಂದರ್ಯವನ್ನ ಸವಿದರು. ಈ ಕುರಿತಂತೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ವ್ಯಂಗ್ಯವಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy), ಕನ್ನಡಕ, ಟೋಪಿ, ಸಫಾರಿ ಹಾಕಿಕೊಂಡಿದ್ದಾರೆ. ಸುಪಾರಿನೋ ಸಫಾರಿನೋ ಎಂದು ಮೋದಿ ವೇಷಭೂಷಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಕನ್ನಡ ಹಾಕಿಕೊಂಡು ಸುಪಾರಿನೋ ಸಫಾರಿನೋ ಮಾಡೋಕೆ ಹೋಗಿದ್ದಾರೆ. ಆದರೆ ಪಾಪ ಹುಲಿ ಬೇಟೆಯಾಡಲೋ, ಹುಲಿ ನೋಡಲೋ ವೀಕ್ಷಣೆಗೆ ಹೋಗಿದ್ದಾರೆ. ಆದರೆ ಹುಲಿ, ಚಿರತೆ ದಾಳಿಗೆ ಬಲಿಯಾದ ಕುಟುಂಬದ ಭೇಟಿ ಇಲ್ಲ.


ಇದನ್ನೂ ಓದಿ: Puneeth Kerehalli: ಇದ್ರೀಶ್ ಪಾಷಾ ಕೊಲೆ ಪ್ರಕರಣ; ಪುನೀತ್​ ಕೆರೆಹಳ್ಳಿ ಆ್ಯಂಡ್​ ಟೀಂ 7 ದಿನ ಪೊಲೀಸ್ ಕಸ್ಟಡಿಗೆ


ಪ್ರಧಾನಿ ಮೋದಿ ಹುಲಿ ಸಂರಕ್ಷಣೆ ಮಾಡಲು ಬಂದಿದ್ದಾರೆ. ವನ್ಯ ಜೀವಿಗಳನ್ನೂ ನಾವು ಕಾಪಾಡಬೇಕು ನಿಜ. ವನ್ಯಜೀವಿಗಳ ಮೇಲಿನ ಕಾಳಜಿ ಜನರ ಮೇಲೆ ಏಕೆ ಇಲ್ಲ? ವನ್ಯಜೀವಿ ದಾಳಿಗೊಳಗಾದವರ ಬಗ್ಗೆ ಸಿಎಂ, ಪಿಎಂ ಅನುಕಂಪದ ಮಾತಾಡಿಲ್ಲ ಎಂದು ಆರೋಪಿಸಿದರು.




ಉತ್ತರ ಕರ್ನಾಟಕದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಇದೆ. ಈ ಬಗ್ಗೆ ಇದುವರೆಗೆ ಪ್ರಧಾನಿ ಚರ್ಚೆ ಮಾಡಿಲ್ಲ. ಹುಲಿ ಸಂರಕ್ಷಣೆ, ಅಭಯಾರಣ್ಯ ವಿಸ್ತರಣೆ ಬಗ್ಗೆ ಹೇಳುತ್ತಿದ್ದಾರೆ. ಪಟ್ಟಣವೇ ನೋಡದೆ ಪ್ರಾಣಿಗಳ ಜೊತೆಯೇ ಅನೇಕರ ಬದುಕಿದ್ದಾರೆ. ಅಂಥವರನ್ನ ಒಕ್ಕಲೆಬ್ಬಿಸಿದರೆ ಅವರೆಲ್ಲ ಎಲ್ಲಿಗೆ ಹೋಗಬೇಕು. ವನಜೀವಿ ಸಂರಕ್ಷಕ ಎಂಬಂತೆ ಮಾನವ ಸಂರಕ್ಷಕ ಆಗಬೇಕಲ್ವಾ? ಧರ್ಮದ ಹೆಸರಲ್ಲಿ ಅಮಾಯಕರ ಬಲಿ ತೆಗೆದುಕೊಂಡಿದ್ದಾರೆ. ಈಗ ರಾಜ್ಯ, ದೇಶ ಕಟ್ಟುತ್ತೇವೆ ಅಂತಿದ್ದಾರೆಂದು ಕಿಡಿಕಾರಿದರು.


top videos



    ಮನುಷ್ಯನ ಜೀವಕ್ಕೆ ಇವರ ಬಳಿ ಬೆಲೆ ಇಲ್ಲ, ಪ್ರಾಣಿಗೆ ಬೆಲೆ ಇದೆಯಲ್ವಾ? ಎರಡೂ ಇರಬೇಕು, ಅದು ಇವರಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್, ಬಿಜೆಪಿ ನಡುವೆ ಒಳ ಒಪ್ಪಂದ ಇದೆ. ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರೇ ಹೇಳಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ. ಕುಟುಂಬದವರು ಯಾರೂ ಸ್ಪರ್ಧೆ ಮಾಡಲ್ಲ. ಸಮರ್ಥ ಕಾರ್ಯಕರ್ತರಿರುವಾಗ ನಾವೇಕೆ ತಲೆಕೊಡಬೇಕು. ಗೊಂದಲವನ್ನು ಸರಿ ಮಾಡುತ್ತೇವೆ ಎಂದರು.

    First published: