HD Kumaraswamy: ಸ್ವಾಭಿಮಾನದಿಂದ ಬದುಕಿದವನು ನಾನು, ಇವರ ಮದ ಇಳಿಸೋದು ಹೇಗೆ ಅಂತ ಗೊತ್ತು; ಹೆಚ್​ಡಿಕೆ

ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಿಗೆ ರಕ್ಷಣೆ ಇರಲಿಲ್ಲ, ಆ ಯುವಕನ ರಕ್ಷಣೆಗೆ ನಿಂತಿದ್ದು ಕುಮಾರಸ್ವಾಮಿ. ನಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ರಾಮನಗರ: ಟ್ವೀಟ್ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Former CM HD Kumaraswamy) ಅಶ್ವಥ್ ನಾರಾಯಣ (Minister Ashwath Narayan) ವಿರುದ್ಧ ವಾಗ್ದಾಳಿ ನಡೆಸಿದರು. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ, ಪಂಚತಾರ ಹೋಟೆಲ್​ನಲ್ಲಿ (Five Star Hotel) ಉಳಿದುಕೊಳ್ಳುತ್ತಾರೆ ಅಂತಾರೆ. ಈಗ ದೆಹಲಿಯಿಂದ ಬರುವ ಅಮಿಶ್ ಶಾ (Amit Shah), ಜೆಪಿ ನಡ್ಡಾ (JP Nadda), ಅರುಣ್ ಸಿಂಗ್ (Arun Singh) ಎಲ್ಲಿ ಉಳಿದುಕೊಳ್ಳುತ್ತಾರೆ. ಹಾಗಾದ್ರೆ ಅವರು ಹೋಟೆಲ್​ಗೆ ಹೋಗಬಹುದಾ? ಕುಮಾರಸ್ವಾಮಿ ಹೋದರೆ ತಪ್ಪಾ ಎಂದು ಪ್ರಶ್ನೆ ಮಾಡಿದರು. ನಾನು ಗುಡಿಸಲಿನಲ್ಲಿಯೂ, ಪಂಚತಾರಾ ಹೋಟೆಲ್​ನಲ್ಲಿಯೂ ಮಲಗಿದ್ದೇನೆ.‌ ನಾನು ಇವರಿಂದ ಕಲಿಯ ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ನಾನು ಹೇಳಿದ ನಕಲಿ ಸರ್ಟಿಫಿಕೇಟ್ ವಿಚಾರದ ಬಗ್ಗೆ ಅಶ್ವಥ್ ನಾರಾಯಣ್ ಉತ್ತರ ಕೊಟ್ಟರಾ? ಇವರು ಬಂದಿರೋ ಹಿನ್ನೆಲೆ ನಕಲಿ ಸರ್ಟಿಫಿಕೇಟ್ ಮಾರಾಟದ ಮೂಲಕ.‌ 2010ರಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗ ಕಾರ್ಪೋರೇಷನ್‌ನ 15 ಸಾವಿರ ಕೋಟಿ ರೂ ಕಾಮಗಾರಿಯ ದಾಖಲೆ ಕೊಠಡಿಗೆ ಬೆಂಕಿ ಇಟ್ಟು ಹಗಲು ದರೋಡೆ ಮಾಡಲು ಹೊರಟಿದ್ರು. ಆ ಹಗಲು ದರೋಡೆ ವಿಷಯ ಕೆದಕ್ಕಿದ್ದು ಜೆಡಿಎಸ್.‌ ಆದ್ರೆ ಈವರೆಗೂ ಕೂಡ ಅದರ ಬಗ್ಗೆ ತನಿಖೆ ನಡೆದಿಲ್ಲ. ಮೊದಲು ಅದರ ಬಗ್ಗೆ ಚರ್ಚೆ ಮಾಡಿ. ಅದಕ್ಕೆ ಕಲಾಪ ಕರೆಯಿರಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ:  Bank Notice: ಬೆಳೆ ಹಾಳು ಮಾಡಿದ ನೆರೆ, ಬ್ಯಾಂಕ್‌ ನೋಟಿಸ್‌ನ ಬರೆ! ತಲೆ ಮೇಲೆ ಕೈಹೊತ್ತು ಕುಳಿತ ಅನ್ನದಾತ

ನಾನು ಸ್ವಾಭಿಮಾನದಿಂದ ಬದುಕಿದ್ದೇನೆ

ಸಿದ್ದರಾಮಯ್ಯ ಅವರು ಸರ್ಕಾರಿ ಬಂಗಲೆ ಬಿಟ್ಟು ಕೊಡಲಿಲ್ಲ. ಬೆಂಗಳೂರಿನಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಇರಲಿಲ್ಲ. ನಾನು 2 ನೇ ಬಾರಿ ಸಿಎಂ ಆದಾಗ ಸರ್ಕಾರಿ ಬಂಗಲೆ, ವಾಹನ, ಪೆಟ್ರೋಲ್ ಹಣ, ಮನೆ ಬಾಡಿಗೆ ತೆಗೆದುಕೊಂಡಿಲ್ಲ. ನಾನು ಸ್ವಾಭಿಮಾನದಿಂದ ಬದುಕ್ಕಿದ್ದೇನೆ.‌ ಆದ್ರೆ ಇವರು ಅದೇ ಹೋಟೆಲ್ ನಲ್ಲೇ ಸಭೆ ನಡೆಸುತ್ತಿದ್ರು. ಇವರು ಯಾಕೆ ಅಲ್ಲಿ ಸೇರುತ್ತಾರೆ ? ಎಂದರು.‌ನಾನು ಹಿಟ್ ಅಂಡ್ ರನ್‌ ಅಲ್ಲ 

ಯಾವುದೇ ದಾಖಲೆ ಇಲ್ಲದೆ ಅರೋಪ ಮಾಡಿ ಕುಮಾರಸ್ವಾಮಿ  ಹಿಟ್ ಅಂಡ್ ರನ್ ಮಾಡ್ತಾರೆ ಎಂದಿದ್ದ ಅಶ್ವಥ್ ನಾರಾಯಣ್ ಟ್ವೀಟ್ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಕಾಲದಲ್ಲಿ ಸಾವಿರಾರು ಪ್ರಕರಣ ದಾಖಲೆ ಸಮೇತ ಜನತೆ ಮುಂದೆ ಇಟ್ಟಿದ್ದು ಇದೆ ಕುಮಾರಸ್ವಾಮಿ. ಕುಮಾರಸ್ವಾಮಿ ಯಾವತ್ತು ಹಿಟ್ ರನ್ ಕೇಸ್ ಮಾಡಲ್ಲ.‌ ಕಲ್ಲಪ್ಪ ಹಂಡಿಬಾಗ್ ಸಿದ್ದರಾಮಯ್ಯ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡ್ರು. ಕುರುಬ ಸಾಮಾಜದ ನಿಷ್ಟಾವಂತ ಅಧಿಕಾರಿ ಅವರ ಕುಟುಂಬಕ್ಕೆ ರಕ್ಷಣೆ ಕೊಟ್ಟಿದ್ದು ಕುಮಾರಸ್ವಾಮಿ.‌

ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಿಗೆ ರಕ್ಷಣೆ ಇರಲಿಲ್ಲ, ಆ ಯುವಕನ ರಕ್ಷಣೆಗೆ ನಿಂತಿದ್ದು ಕುಮಾರಸ್ವಾಮಿ. ನಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ. ನನ್ನ ಸುದ್ದಿಗೆ ಯಡಿಯೂರಪ್ಪ ಕೂಡ ಬಂದ್ರು, ಅಪ್ಪ ಮಕ್ಕಳನ್ನ ಮುಗಿಸೋದೆ ನನ್ನ ಕೆಲಸ ಅಂದ್ರು ಕೊನೆಗೆ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ವ್ಯಂಗ್ಯವಾಡಿದರು.

ಈ ದುಡ್ಡಿನ ಮದ ಇವರನ್ನ ರಕ್ಷಣೆ ಮಾಡಲ್ಲ, ರಕ್ಷಣೆ ಮಾಡೋರು ಈ ನಾಡಿನ ಜನತೆ.‌ ಈ ಮದ ಇಳಿಸೋದು ಹೇಗೆ ಅಂತ ಕುಮಾಸ್ವಾಮಿಗೆ ಗೊತ್ತಿದೆ. ಅದಕ್ಕೆ ಟೈಂ ಬರುತ್ತೆ, ಅವ್ರು ಬದುಕಿರುತ್ತಾರೆ. ನಾನು ಬದುಕಿರುತ್ತೇನೆ. ಏನು ಎಂಬುದನ್ನ ತೋರಿಸುತ್ತೇನೆ ಎಂದು ಕಿಡಿಕಾರಿದರು.ಸಿಎಂ ಬದಲಾವಣೆ ವಿಚಾರ ನನಗೆ ಬೇಡ

ಇನ್ನು ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿ, ನಮಗೆನು ಸಂಬಂಧ ಅವರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬಿಡ್ತಾರೊ ನನಗೇನು..? ನನಗೆ 2023 ರ ಚುನಾವಣೆ ಬಗ್ಗೆ ಗಮನ ಇರೋದು, ರಾಜಕೀಯದಲ್ಲಿ ಹಲವಾರು ಮಾಹಿತಿ ಹೊರಬರುತ್ತದೆ. ಅವರ ಪಕ್ಷದಲ್ಲಿ ಹಲವಾರು ಆಂತರಿಕ ಬೆಳವಣಿಗೆ ಇರಬಹುದು. ಅದನ್ನ ಕಟ್ಟಿಕೊಂಡು ನನಗೇನು? ನನಗೆ ಬೇಕಿರೋದು ಜನರ ಕಷ್ಟದಲ್ಲಿ ಜನರಿಗೆ ಆಗಬೇಕು. ಯಾರು ಮುಖ್ಯಮಂತ್ರಿ ಆಗ್ತಾರೆ ನನಗೇನು, ನನ್ನ ಆದ್ಯತೆ ಜನರ ಬದುಕು ಕಟ್ಟಿಕೊಡಿ ಎನ್ನೋದು ಎಂದರು.‌

ಇದನ್ನೂ ಓದಿ:  Property Issue: ಆಸ್ತಿಗಾಗಿ ಮರ್ಡರ್ ಪ್ಲಾನ್! ಗಂಡ-ಹೆಂಡ್ತಿ ಸೇರಿ ಕುಟುಂಬದ ನಾಲ್ವರನ್ನು ಕೊಂದೇ ಬಿಟ್ರು

ಧರ್ಮದ ವಿಚಾರವೇ ಇವರಿಗೆ ಲಾಭ

ಇನ್ನು ಈದ್ಗಾ ಮೈದಾನ ವಿವಾದ ವಿಚಾರವಾಗಿ ಮಾತನಾಡಿ,ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಧರ್ಮದ ದಂಗಲ್ ಜೀವಾಳ. ಹುಬ್ಬಳ್ಳಿ ಈದ್ಗಾ ಮೈದಾನದ ವಿಚಾರದಲ್ಲಿ  25 ವರ್ಷ ಜನನ ಸಾಯಿಸಿದ್ರು, ದೇವೇಗೌಡರು ಮುಖ್ಯಮಂತ್ರಿ ಆಗಿ ಉಳಿಸಿಕೊಟ್ರು. ಈಗ ಕರಾವಳಿಯಿಂದ ಬೆಂಗಳೂರಿನ ಚಾಮರಾಜಪೇಟೆಗೆ ಧರ್ಮದ ದಂಗಲ್ ಬಂದಿದೆ. ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸ್ತಾರೋ ನೋಡೋಣ ಎಂದರು.
Published by:Mahmadrafik K
First published: