ಇವರು ಗೆದ್ದಿರೋದು ಕೆಲಸದಿಂದಲ್ಲ, ಕುಕ್ಕರ್ ಮಿಕ್ಸಿ ಕೊಟ್ಟು; ಸುಧಾಕರ್​ ವಿರುದ್ಧ ಎಚ್​ಡಿಕೆ ವಾಗ್ದಾಳಿ

ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ, ಮಂಚೇನಹಳ್ಳಿ ತಾಲೂಕು ಮಾಡಿಲ್ಲ ಅಂತ ಹೇಳುತ್ತಾರೆ. ಆದರೆ ಈ ಶಾಸಕ ನನ್ನ ಬಳಿ ಯಾವತ್ತು ಮನವಿ ಮಾಡಿಲ್ಲ. ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸುಧಾಕರ್ ಮತ್ತು ಎಂಟಿಬಿ ನಾಗರಾಜ್​​ ಎಂದು ನೇರವಾಗಿ ಆರೋಪ ಮಾಡಿದರು.

Latha CG | news18-kannada
Updated:November 26, 2019, 2:22 PM IST
ಇವರು ಗೆದ್ದಿರೋದು ಕೆಲಸದಿಂದಲ್ಲ, ಕುಕ್ಕರ್ ಮಿಕ್ಸಿ ಕೊಟ್ಟು; ಸುಧಾಕರ್​ ವಿರುದ್ಧ ಎಚ್​ಡಿಕೆ ವಾಗ್ದಾಳಿ
ಕಾಂಗ್ರೆಸ್​ ಶಾಸಕ ಸುಧಾಕರ್​​, ಸಿಎಂ ಕುಮಾರಸ್ವಾಮಿ
  • Share this:
ಚಿಕ್ಕಬಳ್ಳಾಪುರ(ನ.26): ರಾಜ್ಯದಲ್ಲಿ ಉಪಚುನಾವಣೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್​ ಅಭ್ಯರ್ಥಿ ರಾಧಾಕೃಷ್ಣ ಪರ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರ ಸೂಚನೆಯಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.  ಮುಂದಿನ ಐದು ವರ್ಷಗಳಿಗೆ ನೀವು ಶಾಸಕರನ್ನು ಆಯ್ಕೆ ಮಾಡಿ ಎಂದು ಎಚ್​ಡಿಕೆ ಮತದಾರರಿಗೆ ಕರೆ ನೀಡಿದರು.

ನಾವು ಯಾರ ಮನೆ ಬಾಗಿಲಿಗೂ ಅಧಿಕಾರಕ್ಕಾಗಿ ಹೋಗಲಿಲ್ಲ. ಕಾಂಗ್ರೆಸ್‌ನ ನಾಯಕರು ನಮ್ಮ ಬಳಿ ಬಂದು ಸಿಎಂ ಆಗಿ ಅಂದರು. ರಾಹುಲ್ ಹಾಗೂ ಸೋನಿಯ ಗಾಂಧಿ ಒತ್ತಾಯ ಮಾಡಿ ನನಗೆ ಸಿಎಂ‌ ಮಾಡಿದ್ದರು. 14 ತಿಂಗಳು ಸಂತೋಷವಾಗಿ ಆಡಳಿತ ನಡೆಸಿಲ್ಲ.  ಪ್ರತಿದಿನ ಅಧಿಕಾರದಿಂದ ಇಳಿಸಲು ಹುನ್ನಾರಗಳು ನಡೆಯುತ್ತಿದ್ದವು. ಯಾವುದನ್ನೂ ಲೆಕ್ಕಿಸದೆ ರೈತರ ಸಾಲಮನ್ನಾ ಮಾಡುವ ನಿರ್ಧಾರ ಮಾಡಿದ್ದೆ ಎಂದು ಮೈತ್ರಿ ಸರ್ಕಾರದ ದಿನಗಳನ್ನು ಸ್ಮರಿಸಿದರು.

2008ರಲ್ಲಿ ಬಿಎಸ್‌ವೈ ಸಿಎಂ ಆಗಿದ್ದಾಗ 17 ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಯಡಿಯೂರಪ್ಪನವರಿಗೆ ಒಂದು ಖಯ್ಯಾಲಿ ಇದೆ. ಅವರು ಸಿಎಂ ಆದಾಗ ಅಕ್ರಮವಾಗಿ ಹಣ ಸಂಗ್ರಹಿಸಿ ಶಾಸಕರನ್ನು ಖರೀದಿ ಮಾಡುತ್ತಾರೆ. ದನ,ಕುರಿ, ಕೋಳಿಗಳನ್ನು ಖರೀದಿ ಮಾಡುವಂತೆ ಶಾಸಕರನ್ನು ಖರೀದಿ ಮಾಡುವ ಖಯ್ಯಾಲಿ ಅವರದ್ದು ಎಂದು ಟೀಕಿಸಿದರು.

Labour Code: ಕಂಪನಿಗಳಿಗೆ ಲಾಭ; ನೌಕರರಿಗೆ ಆತಂಕ; ಕೇಂದ್ರದ ಹೊಸ ಕಾರ್ಮಿಕ ಕಾನೂನಿನ ಮುಖ್ಯಾಂಶಗಳು

ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸುಧಾಕರ್​​, ಎಂಟಿಬಿ ನಾಗರಾಜ್​

ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ, ಮಂಚೇನಹಳ್ಳಿ ತಾಲೂಕು ಮಾಡಿಲ್ಲ ಅಂತ ಹೇಳುತ್ತಾರೆ. ಆದರೆ ಈ ಶಾಸಕ ನನ್ನ ಬಳಿ ಯಾವತ್ತು ಮನವಿ ಮಾಡಿಲ್ಲ. ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸುಧಾಕರ್ ಮತ್ತು ಎಂಟಿಬಿ ನಾಗರಾಜ್​​ ಎಂದು ನೇರವಾಗಿ ಆರೋಪ ಮಾಡಿದರು.

"ನಾನು ಅನಿತಾ ಅಕ್ಕನ ಸಂಬಂಧಿ ಅಂತಾನೆ. ಕುತ್ತಿಗೆ ಕುಯ್ಯೋ ಕೆಲಸ ಮಾಡುತ್ತಾನೆ.  ಇವರು ಗೆದ್ದಿರೋದು ಕೆಲಸದಿಂದಲ್ಲ, ಕುಕ್ಕರ್ ಮಿಕ್ಸಿ ಕೊಟ್ಟು," ಎಂದು ಅನರ್ಹ ಶಾಸಕ ಸುಧಾಕರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಜೆಡಿಎಸ್​ ನಾಯಕ ಕೆ.ಪಿ. ಬಚ್ಚೇಗೌಡರಿಗೆ ಬಿಎಸ್​ವೈ  25 ಕೋಟಿ ಆಮಿಷ ಒಡ್ಡಿದ್ದರು. ಆದರೆ ಅವರುಯಡಿಯೂರಪ್ಪನವರ ಆಮಿಷಕ್ಕೆ ಒಳಗಾಗಲಿಲ್ಲ. ಇವರು ಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳದಿದ್ದರೂ, ನಾವು 136 ಕೋಟಿ ಹಣ ಕೊಟ್ಟಿದೇವೆ. ಸಾಲಮನ್ನಾ ಮಾಡಿರುವುದು ದೇಶದ ಇತಿಹಾಸದಲ್ಲಿ ದಾಖಲೆ ವಿಷಯ. ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ನಾನು ಸ್ಪಂದಿಸಿದ್ದೇನೆ. ಬೀದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದೇನೆ ಎಂದು ತಮ್ಮ ಯೋಜನೆಗಳ ಬಗ್ಗೆ ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಎಂಟಿಬಿ ನಾಗರಾಜ್, ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ದೂರು

ಸುಧಾಕರ್ ಸಿದ್ದರಾಮಯ್ಯಗೆ ಕಮೀಷನ್ ಕೊಡಿಸುವ ಬದಲು, ಮೆಡಿಕಲ್ ಕಾಲೇಜು ಮಾಡಿಸಿ ಅಂತ ಕೇಳಬಹುದಿತ್ತಲ್ವ? ಚಿಕ್ಕಬಳ್ಳಾಪುರದವರಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗಲ್ಲ. ನೀಟ್ ಮುಖಾಂತರ ಹೊರ ರಾಜ್ಯದವರು ಬರುತ್ತಾರೆ ಎಂದರು.

ನನಗೆ ಹಣ ಮಾಡುವ ಹುಚ್ಚಿಲ್ಲ, ನಿಮ್ಮ ಪ್ರೀತಿಯೆ ನನ್ನ ಆಸ್ತಿ. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿದವನಲ್ಲ. ಬಿಎಸ್‌ವೈ 15 ಜನ ಅನರ್ಹರಿಗೋಸ್ಕರ ಪ್ರಾಣ ಕೊಡ್ತಿನಿ ಅಂತಾರೆ. ಇವರು ಪ್ರಾಣ ಕೊಡಬೇಕಿರುವುದು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ.  ಇಂತಹ ಮುಖ್ಯಮಂತ್ರಿ ಹೊಂದಿರೋದು ನಮ್ಮ ರಾಜ್ಯದ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಲಿಂಗಾಯತರ ಮುಖ್ಯಮಂತ್ರಿಯೋ....?  ಅಥವಾ 6.5ಕೋಟಿ ಜನದ ಮುಖ್ಯಮಂತ್ರಿಗಳೋ...? ಆದರೆ ಒಕ್ಕಲಿಗ ಸಮುದಾಯದ ಬಂಧುಗಳು ಬಿಜೆಪಿ‌ಗೆ ಮತಹಾಕಬೇಡಿ ಎಂದು ಹೇಳುವ ಸಂಕುಚಿತ ಮನೋಭಾವನೆ ನನಗಿಲ್ಲ.  ಯಡಿಯೂರಪ್ಪನವರ ಅವಧಿಯಲ್ಲಿ ಒಂದು ಪೈಸೆಯೂ ಈ ಜಿಲ್ಲೆಗೆ ಬಂದಿಲ್ಲ. ಅವರು  ಹಣ ಬಿಡುಗಡೆ ಮಾಡುತ್ತಿರುವುದು ಶಿವಮೊಗ್ಗ, ಶಿಕಾರಿಪುರಕ್ಕೆ ಮಾತ್ರ. ಯಡಿಯೂರಪ್ಪ ಚಿಕ್ಕಬಳ್ಳಾಪುರವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಇದುವರೆಗೂ ಅದೆಷ್ಟು ತಾಲೂಕುಗಳನ್ನು ದತ್ತು ತೆಗೆದುಕೊಂಡರು. ನಾನು ಬೂಕನಕೆರೆಯಲ್ಲಿ ಹುಟ್ಟಿ ಬೆಳೆದಿದ್ದು. ಇಲ್ಲಿ ಕೆಲಸ ಮಾಡಿಲ್ಲ ಎನ್ನುವ ನೋವು ನನಗಿದೆ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಅಂತಾರೆ. ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರಾ​ ಶಾಸಕ ದೇವಾನಂದ ಎಫ್​.ಚವ್ಹಾಣ?

ಮೋದಿ ಸೂಟು-ಬೂಟು ಹಾಕಿಕೊಂಡು ಪೋಸ್​ ಕೊಡ್ತಾರೆ

ಎಲ್ಲರೂ ಮೋದಿ ಮೋದಿ ಅಂತಾರೆ. ಅವರು ದೇಶದಲ್ಲಿ ಇರುವುದೇ ಕಡಿಮೆ. ಹೆಚ್ಚಿನ ಸಮಯವನ್ನು ವಿದೇಶಗಳಲ್ಲಿ ಕಳೆಯುತ್ತಾರೆ. ಸೂಟು ಬೂಟು ಹಾಕೊಂಡು ಫೋಸ್ ಕೊಡ್ತಾರೆ. ಕಾಶ್ಮೀರದಲ್ಲಿ 40ಸಾವಿರ ಪೊಲೀಸರನ್ನು ನಿಯೋಜಿಸಿದ್ದಾರೆ. 11 ಸಾವಿರ ಜನರನ್ನು ಮನೆಗಳಲ್ಲಿ ಬಂಧಿಸುವಂತೆ ಮಾಡಿದ್ದಾರೆ.ಅನೇಕರು ನಿರುದ್ಯೋಗಿಗಳಾಗಿದ್ದಾರೆ.  ಇನ್ನು ಎಷ್ಟು ದಿನ ಇಂತಹ ಸರ್ಕಾರ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ, ಬಿಎಸ್​ವೈ ಹಾಗೂ ಸುಧಾಕರ್ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು. ಸಿದ್ದರಾಮಯ್ಯ, ಬಿಎಸ್‌ವೈ, ಸುಧಾಕರ್ ಬರಲಿ. ನಾನು ಮಾಡಿರುವ ತಪ್ಪು ಏನೆಂದು ಜನ ಹೇಳಲಿ. ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ. ನಾನು ತಪ್ಪು ಮಾಡಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದರು.

First published: November 26, 2019, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading