ಬೆಂಗಳೂರು (ನ. 1): ಸಿಎಂ ಬಿ.ಎಸ್. ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ. ಈ ಬಾರಿ ವಿಜಯೇಂದ್ರ ಅವರ ಆಟ ನಡೆಯುತ್ತೋ, ನಮ್ಮ ಆಟ ನಡೆಯುತ್ತೋ ಎಂಬುದನ್ನು ನೋಡೋಣ. ವಿಜಯೇಂದ್ರ ಅವರ ಆಟ ನಡೆಯುತ್ತಿರುವುದೇ ಹಣದಿಂದ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಈಗಾಗಲೇ ವಿಜಯೇಂದ್ರ ಅವರ ಡ್ರಾಮಾ ಹಳಸಿದೆ. ವಿಜಯೇಂದ್ರನವರ ಆಟ ನಡೆಯುತ್ತಿರುವುದು ಹಣದಿಂದ. ವಿಜಯೇಂದ್ರ ದೊಡ್ಡ ಸಾಧನೆ ಮಾಡಿದ್ದಾರಾ? ಅವರ ತಂದೆಯ ಸಹಿಯನ್ನು ಇವರೇ ಮಾಡಿಕೊಂಡು ಏನೇನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ತಂದೆ ಹೆಸರಲ್ಲಿ ದುಡ್ಡು ಹೊಡೆದಿದ್ದಾರೆ. ಅದನ್ನು ತಂದು ಈಗ ಇಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಇದರಿಂದ ಏನೋ ಚುನಾವಣಾ ತಂತ್ರ ಮಾಡ್ತೀನಿ ಎಂದು ಹೊರಟಿದ್ದಾರೆ. ಇದು ಎಲ್ಲಾ ಸಮಯದಲ್ಲೂ ಉಪಯೋಗಕ್ಕೆ ಬರುವುದಿಲ್ಲ. ಅವರ ಡ್ರಾಮ ನಡೆಯುತ್ತೋ, ನಮ್ಮ ಡ್ರಾಮ ನಡೆಯುತ್ತೋ ಎಂಬುದನ್ನು ಚುನಾವಣೆ ಫಲಿತಾಂಶದಂದು ನೋಡೋಣ ಎಂದು ಹೆಚ್ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬಿ.ವೈ ವಿಜಯೇಂದ್ರ ಅವರ ಡ್ರಾಮಾ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಆರ್ಆರ್ ನಗರದಲ್ಲಿ ಭ್ರಷ್ಟಾಚಾರದ ಹಣದಿಂದ ಚುನಾವಣೆ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಭ್ರಷ್ಟಾಚಾರದ ಹಣದ ಮೂಲಕ ಚುನಾವಣೆ ನಡೆಸುತ್ತಿದ್ದಾರೆ. ಇವರಿಬ್ಬರೂ ಒಂದೇ ಮನೆಯಲ್ಲಿ ಕುಳಿತಿದ್ದಾರೆ. ಇವರಿಬ್ಬರ ಕಿತ್ತಾಟದಿಂದ ಆರ್ಆರ್ ನಗರದಲ್ಲಿ ಜೆಡಿಎಸ್ಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ