ಗ್ರಾಮವಾಸ್ತವ್ಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ವಿಚಾರ; ಬಿಜೆಪಿ ನಾಯಕರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಎಚ್​ಡಿಕೆ

ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಗ್ರಾಮ ವಾಸ್ತವ್ಯ ಮಾಡಿದ್ದೆವು. ಆಗ ಟೀಕೆ ಮಾಡಿರಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಎಚ್​​ಡಿಕೆ ಕಿಡಿಕಾರಿದ್ದಾರೆ.

Rajesh Duggumane | news18
Updated:June 26, 2019, 7:57 AM IST
ಗ್ರಾಮವಾಸ್ತವ್ಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ವಿಚಾರ; ಬಿಜೆಪಿ ನಾಯಕರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಎಚ್​ಡಿಕೆ
ಕುಮಾರಸ್ವಾಮಿ ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಕಾಣಿಸಿಕೊಂಡಿದ್ದು ಹೀಗೆ
  • News18
  • Last Updated: June 26, 2019, 7:57 AM IST
  • Share this:
ಬೆಂಗಳೂರು (ಜೂ.26): ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ ಕಂಟೋನ್ಮೆಂಟ್ ರೈಲ್ವೆ ‌ನಿಲ್ದಾಣದಿಂದ ಉದ್ಯಾನ್ ಎಕ್ಸ್​​ಪ್ರೆಸ್ ರೈಲಿನಲ್ಲಿ ರಾಯಚೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಬೆಳಗ್ಗೆ ‌5.45ರ ಸುಮಾರಿಗೆ ಅವರು ರಾಯಚೂರು ತಲುಪಿದ್ದಾರೆ. ಸಿಎಂ ಜೊತೆ ಸಚಿವ ಸಾ ರಾ ಮಹೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಸೇರಿ ಹಲವು ಪ್ರಮುಖರು ಪ್ರಯಾಣ ಬೆಳೆಸಿದ್ದಾರೆ. ಕುಮಾರಸ್ವಾಮಿ ಗ್ರಾಮವಾಸ್ಯವ್ಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಕುಮಾರಸ್ವಾಮಿ ರೈಲು ಏರುವುದಕ್ಕೂ ಮೊದಲು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

“ಗ್ರಾಮ ವಾಸ್ತವ್ಯಕ್ಕೆ ನಾನು ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡುವ ಪ್ರಶ್ನೆಯೇ ಇಲ್ಲ. ಈ ಕಾರ್ಯಕ್ರಮದಿಂದ ಶಾಲೆಯಲ್ಲಿ ಶೌಚಾಲಯ ಕಟ್ಟಿಸಬಹುದು. ಇದರಿಂದ ಮಕ್ಕಳಿಗೆ ಅನುಕೂಲ ಆಗುತ್ತದೆ. ಶೌಚಾಲಯ ಕಟ್ಟಿಸಲು ದುಂದು ವೆಚ್ಚ ಮಾಡುವುದಿಲ್ಲ,” ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಎಚ್​ಡಿಕೆ ತಿರುಗೇಟು ನೀಡಿದರು.

ಇದನ್ನೂ ಓದಿ: ತಾಜ್​ ಹೋಟೆಲ್​ನಲ್ಲಿ ನಿದ್ದೆ ಬರಲ್ಲ ಎಂದು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ; ಸಿಎಂ ಎಚ್​​ಡಿಕೆ

“ನಾನು ಗಾಂಧೀಜಿ ಪರಿಕಲ್ಪನೆ ಇಟ್ಟುಕೊಂಡು ಗ್ರಾಮವಾಸ್ತವ್ಯ ಮಾಡುತ್ತಿದ್ದೇನೆ. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಗ್ರಾಮ ವಾಸ್ತವ್ಯ ಮಾಡಿದ್ದೆವು. ಆಗ ಟೀಕೆ ಮಾಡಿರಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಎಚ್​​ಡಿಕೆ ಕಿಡಿಕಾರಿದ್ದಾರೆ. ಬಿಜೆಪಿಯಿಂದ ನಾನು ಯಾವುದೇ ಪಾಠ ಕಲಿಯಬೇಕಿಲ್ಲ,” ಎಂದು ಎಚ್​​ಡಿಕೆ ಕಿಡಿಕಾರಿದರು.

ಮಾನ್ವಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡುವ ಕುಮಾರಸ್ವಾಮಿಯವರ ಕಾರ್ಯಕ್ರಮಗಳ ಪಟ್ಟಿ ಹೀಗಿದೆ.

1. ಬೆಳಿಗ್ಗೆ 5.20ರಿಂದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ2. ಬಳಿಕ ಸರ್ಕಾರಿ ಬಸ್‌ನಲ್ಲಿ ಮಾನ್ವಿಯತ್ತ ಪ್ರಯಾಣ

3. ಕರೇಗುಡ್ಡಕ್ಕೆ ಆಗಮನ, ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ

4. ಬೆಳಗ್ಗೆ 10 ರಿಂದ ಜನರಿಂದ ಅಹವಾಲು ಸ್ವೀಕಾರ

5. ಸಂಜೆ 6 ಗಂಟೆ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ

6. ಕರೇಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ

7. ಜೂನ್ 27ರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೀದರ್‌ಗೆ ಪ್ರಯಾಣ

First published: June 26, 2019, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading