• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಕಾಂಗ್ರೆಸ್-ಬಿಜೆಪಿ​ಗೆ ಶಾಕ್ ನೀಡಿದ ಹೆಚ್​ಡಿಕೆ; ಇತ್ತ BSY ಮಾಜಿ ಆಪ್ತನಿಗೆ JDS ಟಿಕೆಟ್

Karnataka Politics: ಕಾಂಗ್ರೆಸ್-ಬಿಜೆಪಿ​ಗೆ ಶಾಕ್ ನೀಡಿದ ಹೆಚ್​ಡಿಕೆ; ಇತ್ತ BSY ಮಾಜಿ ಆಪ್ತನಿಗೆ JDS ಟಿಕೆಟ್

ಹೆಚ್​ ಡಿ ಕುಮಾರಸ್ವಾಮಿ

ಹೆಚ್​ ಡಿ ಕುಮಾರಸ್ವಾಮಿ

Gubbi Constituency : ಇಂದು ಮಧ್ಯಾಹ್ನ ಗುಬ್ಬಿಯಲ್ಲಿರುವ ಬೆಟ್ಟಸ್ವಾಮಿ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.

  • Share this:

ತುಮಕೂರು: ಗುಬ್ಬಿ ವಿಧನಸಭಾ ಕ್ಷೇತ್ರದಲ್ಲಿ (Gubbi Constituency) ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಶಾಕ್ ನೀಡದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಟ್ಟಸ್ವಾಮಿ (Bettaswamy) ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹೊನ್ನಗಿರಿಗೌಡ (Honnagiri Gowda) ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಇಂದು ಮಧ್ಯಾಹ್ನ ಗುಬ್ಬಿಯಲ್ಲಿರುವ ಬೆಟ್ಟಸ್ವಾಮಿ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಒಂದು ಬಾರಿ ಭೇಟಿ ನೀಡಿ ಮಾತುಕತೆ ನಡೆದಿದೆ. ಇದೀಗ ಮತ್ತೊಮ್ಮೆ ಬೆಟ್ಟಸ್ವಾಮಿ ಹಾಗೂ ಹೊನ್ನಗಿರಿಗೌಡ ಜೊತೆಗೆ ಕುಮಾರಸ್ವಾಮಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ.


ಗುಬ್ಬಿ ಕ್ಷೇತ್ರದ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಬಾರಿ ಗುಬ್ಬಿ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿಯಾಗಿ ಎಸ್.ಆರ್.ಶ್ರೀನಿವಾಸ್ ಸ್ಪರ್ಧೆ ಮಾಡಲಿದ್ದಾರೆ. ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿತ್ತು.


ಬಿಎಸ್​ವೈ ಮಾಜಿ ಆಪ್ತನಿಗೆ ಜೆಡಿಎಸ್ ಟಿಕೆಟ್


ಬಿಜೆಪಿ ಟಿಕೆಟ್ ವಂಚಿತ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಜಿ ಆಪ್ತ ಎನ್.ಆರ್.ಸಂತೋಷ್​ಗೆ ಜೆಡಿಎಸ್ ಟಿಕೆಟ್ ನೀಡಿದೆ. ಎನ್.ಆರ್.ಸಂತೋಷ್ (NR Santosh) ಅರಸೀಕೆರೆಯಿಂದ ಸ್ಪರ್ಧೆ ಮಾಡಲಿದ್ದಾರೆ.


ಅರಸೀಕೆರೆ ಶಾಸಕರಾಗಿದ್ದ, ಶಿವಲಿಂಗೇಗೌಡರು ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಶಿವಲಿಂಗೇಗೌಡರು ಈ ಬಾರಿ ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ.




ಜೆಡಿಎಸ್ ಪಕ್ಷದ ಪ್ರಣಾಳಿಕೆ ರೂಪದ ಭರವಸೆಯ ಪತ್ರ


ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಣಾಳಿಕೆ ರೂಪದ ಭರವಸೆಯ ಪತ್ರ ಬಿಡುಗಡೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೀಡುವ ಸವಲತ್ತುಗಳ ಬಗ್ಗೆ ಜೆಡಿಎಸ್ ಭರವಸೆ ನೀಡಿದೆ.


ಇದನ್ನೂ ಓದಿ:  Laxman Savadi ಕಾಂಗ್ರೆಸ್ ಸೇರಿದ್ದು ಸಂತಸ ತಂದಿದೆ: ರಮೇಶ್ ಜಾರಕಿಹೊಳಿ

top videos


    ಪಂಚರತ್ನ, ಸಾಲಮನ್ನಾ, ಮಹಿಳೆಯರಿಗೆ ನೀಡಲಾಗುವ ಸವಲತ್ತು, ಆಟೋ ಡ್ರೈವರ್ ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳ ಅನಾವರಣಗೊಳಿಸಲಾಗಿದೆ.

    First published: