ಮಗನಿಗಾಗಿ ಹೆಚ್​ಡಿಕೆ ವಿದೇಶಕ್ಕೆ; ಭಿನ್ನಮತ ಶಮನಕ್ಕಾಗಿ ಅಪ್ಪ ಕರೆದ ಸಭೆ ರದ್ದು?

ಸಭೆ ಮೇಲೆ ಸಭೆ ನಡೆಸುತ್ತಿರುವ ಭಿನ್ನಮತೀಯರ ಅಳಲನ್ನು ಕೇಳಿ ಸಮಸ್ಯೆಗೆ ಪರಿಹಾರ ಹುಡುಕಲು ದೇವೇಗೌಡರು ಭರವಸೆ ನೀಡಿದ್ದಾರೆ. ತಮ್ಮ ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಸಮ್ಮುಖದಲ್ಲಿ ಪರಿಷತ್ ಸದಸ್ಯರ ಸಭೆ ನಡೆಸುವುದಾಗಿ ಗೌಡರು ಆಶ್ವಾಸನೆ ನೀಡಿದ್ದಾರೆ. ಆ ಸಭೆ ನ. 6ಕ್ಕೆ ನಿಗದಿಯಾಗಿದೆ.

news18-kannada
Updated:November 4, 2019, 12:32 PM IST
ಮಗನಿಗಾಗಿ ಹೆಚ್​ಡಿಕೆ ವಿದೇಶಕ್ಕೆ; ಭಿನ್ನಮತ ಶಮನಕ್ಕಾಗಿ ಅಪ್ಪ ಕರೆದ ಸಭೆ ರದ್ದು?
ಎಚ್​​.ಡಿ ಕುಮಾರಸ್ವಾಮಿ
  • Share this:
ಬೆಂಗಳೂರು(ನ. 04): ಜಾತ್ಯತೀತ ಜನತಾ ದಳದೊಳಗೆ ಎದ್ದಿರುವ ಬಂಡಾಯದ ಬಿಸಿ ಏರುತ್ತಲೇ ಇದೆ. ಜೆಡಿಎಸ್​ನ ವಿಧಾನಪರಿಷತ್ ಸದಸ್ಯರು ಪದೇ ಪದೇ ಅಸಮಾಧಾನ ಧ್ವನಿ ಎತ್ತುತ್ತಲೇ ಇದ್ಧಾರೆ. ಭಿನ್ನಮತದಿಂದಾಗಿ ಸಿಎಂ ಕುರ್ಚಿ ಕಳೆದುಕೊಂಡಿರುವ ಕುಮಾರಸ್ವಾಮಿ ಈಗ ಪಕ್ಷದೊಳಗೆ ಎದ್ದಿರುವ ಹೊಸ ಬಂಡಾಯದ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಲಂಡನ್ ನಗರಿಗೆ ಪ್ರಯಾಣ ಬೆಳಸುತ್ತಿರುವುದು ಕೌತುಕ ಮೂಡಿಸಿದೆ.

ಇನ್ನೊಂದೆಡೆ, ಜೆಡಿಎಸ್ ಪಕ್ಷದೊಳಗೆ ಎದ್ದಿರುವ ಭಿನ್ನಮತವನ್ನು ಶಮನ ಮಾಡಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಸರ್ಕಸ್ ನಡೆಸುತ್ತಿದ್ದಾರೆ. ಸಭೆ ಮೇಲೆ ಸಭೆ ನಡೆಸುತ್ತಿರುವ ಭಿನ್ನಮತೀಯರ ಅಳಲನ್ನು ಕೇಳಿ ಸಮಸ್ಯೆಗೆ ಪರಿಹಾರ ಹುಡುಕಲು ದೇವೇಗೌಡರು ಭರವಸೆ ನೀಡಿದ್ದಾರೆ. ತಮ್ಮ ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಸಮ್ಮುಖದಲ್ಲಿ ಪರಿಷತ್ ಸದಸ್ಯರ ಸಭೆ ನಡೆಸುವುದಾಗಿ ಗೌಡರು ಆಶ್ವಾಸನೆ ನೀಡಿದ್ದಾರೆ. ಆ ಸಭೆ ನ. 6ಕ್ಕೆ ನಿಗದಿಯಾಗಿದೆ. ಆದರೆ, ಕುಮಾರಸ್ವಾಮಿ ಅವರು ಮಗ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾ ಪ್ರಾಜೆಕ್ಟ್​ಗೆ ಸಂಬಂಧಿಸಿದಂತೆ ತಮ್ಮ ಪತ್ನಿ ಸಮೇತರಾಗಿ ಇವತ್ತೇ ಲಂಡನ್​ಗೆ ಹೋಗುತ್ತಿದ್ದಾರೆ. ನಾಲ್ಕು ದಿನಗಳ ಪ್ರವಾಸ ಮುಗಿಸಿ ಅವರು ವಾಪಸ್ ಬರುವುದೇ ನ. 8ಕ್ಕೆ.

ಇದನ್ನೂ ಓದಿ: ಅನ್ನದಾತರ ನೆರವಿಗೆ ಧಾವಿಸಿದ ಮಾಜಿ ಸಿಎಂ ಎಚ್​​ಡಿಕೆ: ರೈತರ ಸಹಾಯವಾಣಿ ಕೇಂದ್ರ ಆರಂಭ

ಅಧಿಕಾರ ಇದ್ದಾಗ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಂಗಣ್ಣು ಬೀರುತ್ತಿರುವ ಜೆಡಿಎಸ್ ಪರಿಷತ್ ಸದಸ್ಯರಿಗೆ ಈ ಕುಮಾರಸ್ವಾಮಿ ಅವರು ವಿದೇಶಕ್ಕೆ ಹಾರುತ್ತಿರುವುದು ಇನ್ನಷ್ಟು ಕಣ್ಣು ಕೆಂಪಗಾಗಿಸಿದೆ. ಕುಮಾರಸ್ವಾಮಿ ಲಂಡನ್​ನಿಂದ ವಾಪಸ್ ಬರುವವರೆಗೂ ದೇವೇಗೌಡರ ಸಭೆ ನಡೆಯುವ ಸಾಧ್ಯತೆ ಇಲ್ಲ.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 4, 2019, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading