'ಎಲ್ಲಾದರೂ ಚೆನ್ನಾಗಿರು, ಸುಮ್ಮನೆ ನನ್ನ ಬಗ್ಗೆ ಚರ್ಚೆ ಮಾಡಬೇಡ'; ಜಿಟಿ ದೇವೇಗೌಡರಿಗೆ ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ

HD Kumaraswamy: ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಪಾಪ ಎಲ್ಲಾದರೂ ಒಂದು ಕಡೆ ನೀನು ಚೆನ್ನಾಗಿ ಇರು. ಆದರೆ, ಸುಮ್ಮನೆ ಪದೇ ಪದೇ ನೀನು ನನ್ನ ಬಗ್ಗೆ ಚರ್ಚೆ ಮಾಡಬೇಡ ಎಂದು ಮಾಜಿ ಸಚಿವ ಜಿಟಿ ದೇವೇಗೌಡರಿಗೆ ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ

  • Share this:
ಬೆಂಗಳೂರು (ಡಿ. 21): ಪಕ್ಷ ಬಿಡುವವರನ್ನು ಯಾರೂ ಹಿಡಿದಿಟ್ಟುಕೊಳ್ಳಲಾಗದು. ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ನಿಮ್ಮ ರಾಜಕೀಯ ಜೀವನ ನೋಡಿಕೊಳ್ಳಲು ನಿಮ್ಮ ನಿಮ್ಮ ದಾರಿ ನೋಡಿಕೊಳ್ಳಿ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಪಾಪ ಎಲ್ಲಾದರೂ ಒಂದು ಕಡೆ ನೀನು ಚೆನ್ನಾಗಿ ಇರು. ಆದರೆ, ಸುಮ್ಮನೆ ಪದೇ ಪದೇ ನೀನು ನನ್ನ ಬಗ್ಗೆ ಚರ್ಚೆ ಮಾಡಬೇಡ ಎಂದು ಮಾಜಿ ಸಚಿವ ಜಿಟಿ ದೇವೇಗೌಡರಿಗೆ ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರ ಸರ್ಕಾರ ಬೀಳುತ್ತೆ ಅಂತ ಗೊತ್ತಿದ್ದೂ ನಾನು ವಿದೇಶಕ್ಕೆ ಹೋದೆ ಅಂತ ಒಬ್ಬರು ಹೇಳಿದ್ದಾರೆ. ನಾನು ಸರ್ಕಾರ ಉಳಿಸಿ ಏನು ಮಾಡಬೇಕಿತ್ತು? ನೀವು ಸದೃಢವಾಗಿ ಬೆಳೆಯಲು, ಆರ್ಥಿಕವಾಗಿ ಬೆಳೆಯಲು ಇನ್ನೂ ಸರ್ಕಾರವನ್ನು ಉಳಿಸಬೇಕಿತ್ತಾ? ಎಂದು ಹೆಸರು ಪ್ರಸ್ತಾಪ ಮಾಡದೆ ಮಾಜಿ ಸಚಿವ ಜಿಟಿ ದೇವೇಗೌಡರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೈತ್ರಿ ಸರ್ಕಾರ ಉಳಿಸಿಕೊಳ್ಳೋದು ನನಗೆ ದೊಡ್ಡ ವಿಷಯವಾಗಿರಲಿಲ್ಲ. ನನ್ನ ಅವಧಿಯಲ್ಲಿ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕೊಡಿ ಅಂದಿರಲಿಲ್ಲ. ನಾನೂ ಬಿಜೆಪಿಯ ಹತ್ತು ಜನರ ಕೈಯಲ್ಲಿ ರಾಜೀನಾಮೆ ಕೊಡಿಸಿ ಸರ್ಕಾರ ಉಳಿಸಬಹುದಾಗಿತ್ತು. ನನ್ನ ಬಗ್ಗೆ ಪದೇಪದೆ ಮಾತನಾಡಬೇಡಿ. ನಿಮ್ಮ ರಾಜಕೀಯ ಶಕ್ತಿ ತುಂಬಿಕೊಳ್ಳಲು ನಿಮ್ಮ ದಾರಿ ನೋಡಿಕೊಳ್ಳಿ. ನಾನು ಯಾರ ಮೇಲೂ ಆರ್ಥಿಕ ಹೊರೆ ಹೊರಿಸಿಲ್ಲ. ನೀವು ಎಲ್ಲೋ ಚೆನ್ನಾಗಿರಿ. ನಾನು ಸರ್ಕಾರವನ್ನು ಉಳಿಸಿಕೊಳ್ಳಲಿಲ್ಲ ಅಂತ ನಿಮಗೂ ಗೊತ್ತಿದೆ. ಅಪಮಾರ್ಗದಿಂದ ನಾನು ಹಣ ಮಾಡಿಲ್ಲ ಎಂದು ಜಿಟಿಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನನ್ನ ಬಗ್ಗೆ ನೀನು ಪದೇ ಪದೇ ಮಾತಾಡಬೇಡಪ್ಪ. ಪಕ್ಷ ಬಿಡುವವರನ್ನು ಯಾರೂ ಹಿಡಿದಿಟ್ಟುಕೊಳ್ಳಲಾಗದು. ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ನಿಮ್ಮ ರಾಜಕೀಯ ಜೀವನ ನೋಡಿಕೊಳ್ಳಲು ನಿಮ್ಮ ನಿಮ್ಮ ದಾರಿ ನೋಡಿಕೊಳ್ಳಿ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಪಾಪ ಎಲ್ಲಾದರೂ ಒಂದು ಕಡೆ ನೀನು ಚೆನ್ನಾಗಿ ಇರು. ಆದರೆ, ಸುಮ್ಮನೆ ಪದೇ ಪದೇ ನೀನು ನನ್ನ ಬಗ್ಗೆ ಚರ್ಚೆ ಮಾಡಬೇಡ ಎಂದು ಮಾಜಿ ಸಚಿವ ಜಿಟಿ ದೇವೇಗೌಡರಿಗೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: HD Kumaraswamy: ನನ್ನ ನಿಜವಾದ ರಾಜಕಾರಣ ಶುರುವಾಗೋದೇ 2023ಕ್ಕೆ!; ವಿಪಕ್ಷಗಳಿಗೆ ಹೆಚ್​ಡಿ ಕುಮಾರಸ್ವಾಮಿ ಸವಾಲು

ಕೆಲವರು ಜೆಡಿಎಸ್​ ಪಕ್ಷ ಬಿಡುವ ವಿಚಾರವಾಗಿಯೂ ವ್ಯಂಗ್ಯವಾಡಿರುವ ಹೆಚ್​ಡಿ ಕುಮಾರಸ್ವಾಮಿ, ನಿಜವಾದ ಖಾಯಿಲೆ ಬಂದರೆ ಔಷಧಿ ಕೊಡಬಹುದು. ಆದರೆ ಖಾಯಿಲೆ ನೆಪದಲ್ಲಿ ನಾಟಕ ಮಾಡೋರಿಗೆ ಏನು ಔಷಧಿ ಕೊಡೋದು? ನನ್ನಿಂದ ಯಾರಿಗೂ ಯಾವುದೇ ಅನ್ಯಾಯ ಆಗಿಲ್ಲ. ಆದರೆ ಅವರ ರಾಜಕೀಯ ಜೀವನದ ದೃಷ್ಟಿಯಿಂದ ಪಕ್ಷ ಬಿಟ್ಟು ಹೋಗ್ತಿದ್ದಾರೆ. ಅವರು ಪಕ್ಷ ಬಿಟ್ಟು ಹೋಗಲಿ. ಅದಕ್ಕೆ ನನ್ನದೇನೂ ತಕರಾರು ಇಲ್ಲ. ಜೆಡಿಎಸ್ ಗೆ ಯಾರ ಅನಿವಾರ್ಯತೆಯೂ ಇಲ್ಲ. ಯಾರು ಯಾರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದರ ಬಗ್ಗೆ ನಾನು ಮಾನಸಿಕವಾಗಿ ಸಿದ್ಧನಾಗಿಬಿಟ್ಟಿದ್ದೇನೆ. ನಮ್ಮ ಪಕ್ಷದಿಂದ ಯಾರು ಯಾರನ್ನು ಕರೆದುಕೊಂಡು ಹೋಗಬೇಕೋ ಅವರನ್ನು ಕರೆದುಕೊಂಡು ಹೋಗಲಿ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇದೆಲ್ಲಾ ಜೆಡಿಎಸ್ ಗೆ ಒಂದು ಶಾಪ, ಇವರೆಲ್ಲರೂ ಜೆಡಿಎಸ್​ನಿಂದ ಬೆಳೆಯುತ್ತಾರೆ, ಕೊನೆಗೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇವರಿಂದಲೇ ನಮ್ಮ ಪಕ್ಷ ಉಳಿದುಕೊಂಡಿದ್ಯಾ? ಇಲ್ಲಿಯವರೆಗೆ ಪಕ್ಷ ಉಳಿದಿರೋದು ಪಕ್ಷದ ಕಾರ್ಯಕರ್ತರಿಂದ. ನೀವು ಯಾವ ರೀತಿ ಚುನಾವಣೆ ಮಾಡಿದಿರಿ ಎಂಬುದು ಗೊತ್ತಿದೆ. ಒಳ ಒಪ್ಪಂದದ ಬಗ್ಗೆ ಅವರು ಹೇಳಿರೋದು ತುರುವೇಕೆರೆ ದೃಷ್ಟಿಯಿಂದ. ತುರುವೇಕೆರೆಯಲ್ಲಿ ಜೆಡಿಎಸ್ ಕೃಷ್ಣಪ್ಪ ಸೋಲಿಸೋಕೆ ಯಾರು ಕಾರಣ? ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಇದೇ ಶ್ರೀನಿವಾಸ್ ಕಾರಣ. ಆದರೂ ಶ್ರೀನಿವಾಸ್ ಅವರನ್ನು ನಾನು ಮಂತ್ರಿ ಮಾಡಿದೆ. ಅವರಿಗೆ ಪಾಪ ಆರ್ಥಿಕ, ಜಲ ಸಂಪನ್ಮೂಲ ಇಲಾಖೆ ಕೊಡಬೇಕಿತ್ತು. ಆದರೆ, ನಾನು ಸಣ್ಣ ಖಾತೆ ಕೊಟ್ಟುಬಿಟ್ಟೆ. ಅದಕ್ಕೆ ಅವರಿಗೆ ಕೋಪ ಬಂದಿದೆ ಎಂದು ಹೆಚ್​ಡಿ ಕುಮಾಸಸ್ವಾಮಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಹೆಚ್​ಡಿ ಕುಮಾರಸ್ವಾಮಿ, ಯಡಿಯೂರಪ್ಪ ನಿಜವಾಗಿಯೂ ದುಡಿಮೆ ಮಾಡಿ ಬಂದಿದ್ದಾರೆ. ಪಕ್ಷ ಸಂಘಟನೆಯ ಕಷ್ಟವೂ ಅವರಿಗೆ ಗೊತ್ತಿದೆ. ಜೆಡಿಎಸ್‌ ಗೆ ಯಾರೂ ಶಾಕ್ ಕೊಡಲು ಸಾಧ್ಯ ಇಲ್ಲ. ನಮ್ಮ ಮನೆಯ ಬಾಗಿಲು ತೆರೆದಿದೆ. ಯಾರನ್ನ ಬೇಕಾದರೂ ಕರೆದುಕೊಂಡು ಹೋಗಲಿ. ಯಾರ್ಯಾರು ಹೋಗ್ತಾರೆ ಅನ್ನೋದು ಗೊತ್ತಿದೆ. ಅದರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ. ಸಿದ್ದರಾಮಯ್ಯ ಅವರಪ್ಪರಾಣೆ ಕುಮಾರಸ್ವಾಮಿ ಸಿಎಂ ಆಗೋದಿಲ್ಲ ಅಂದಿದ್ದರು. ಆದರೆ, ನಾನು ಮತ್ತೆ ಸಿಎಂ ಆದೆ. ಜೆಡಿಎಸ್‌ ಯಾವುದೇ ಪಕ್ಷದ ಜೊತೆ ವಿಲೀನ ಆಗುವುದಿಲ್ಲ. ನಮ್ಮಲ್ಲಿ ಯಾವುದೇ ದ್ವಂದ್ವ ನಿಲುವು ಇಲ್ಲ. ಎಲ್ಲಾ ಪಕ್ಷಗಳಿಗೂ ಇದನ್ನೇ ಹೇಳುತ್ತೇನೆ. ಜೆಡಿಎಸ್ ವಿಲೀನದ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Published by:Sushma Chakre
First published: