ಬೆಂಗಳೂರು: ಹಾಸನ (Hassan) ಜೆಡಿಎಸ್ (JDS) ಸಿಂಹಾಸನ ಕದನಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹಾಸನದ ಕಾರ್ಯಕರ್ತ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ವರೂಪ್ (Swaroop) ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟಿಕೆಟ್ ಘೋಷಣೆ ಮಾಡಿದ್ದಾರೆ. ಇದರ ನಡುವೆಯೇ ದೇವೇಗೌಡರ (HD Devegowda) ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೇವಣ್ಣ ಅವರ ನೇತೃತ್ವದಲ್ಲೇ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯುತ್ತದೆ ಎಂದು ಟಿಕೆಟ್ ಪಡೆದ ಸ್ವರೂಪ್ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಸನ ಸಿಂಹಾಸನ ಗುದ್ದಾಟದಲ್ಲಿ ಎಚ್ಡಿಕೆಗೆ ಗೆಲುವು
ಹಾಸನ ಟಿಕೆಟ್ ಕದನ ಆರಂಭದಿಂದಲೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಟಿಕೆಟ್ ಜೆಡಿಎಸ್ ಕಾರ್ಯಕರ್ತನಿಗೆ ನೀಡಲಾಗುತ್ತದೆ ಎಂದು ಹೇಳುತ್ತಾ ಬಂದಿದ್ದರು. ಆದರೆ ರೇವಣ್ಣ ಕುಟುಂಬ ಎಷ್ಟೇ ಕಾರ್ಯತಂತ್ರ ನಡೆಸಿದರೂ ಕೂಡ ಎಚ್‌ಡಿಕೆ ನಿರ್ಧಾರದಲ್ಲಿ ಬದಲಾವಣೆ ಆಗಿರಲಿಲ್ಲ. ಸದ್ಯ ಸ್ವರೂಪ್ಗೆ ಟಿಕೆಟ್ ಘೋಷಣೆಯಾಗಿದ್ದು, ಕುಮಾರಸ್ವಾಮಿ ಅವರು ಹಾಸನ ಸಿಂಹಾಸನ ಗುದ್ದಾಟದಲ್ಲಿ ಗೆಲುವು ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ನನ್ನನ್ನು ಕುಮಾರಣ್ಣರನ್ನು ಬೇರೆ ಮಾಡಲು ಆಗೋದಿಲ್ಲ
ಹಾಸನ ಜಿಲ್ಲೆಯ ಚಿತ್ರೀಕರಣ 60 ವರ್ಷಗಳ ಕಾಲ ದೇವೇಗೌಡರಿಗೆ ತಿಳಿದಿದೆ. ನಾನು 6 ತಿಂಗಳಿನಿಂದ ಹಾಸನ ಟಿಕೆಟ್ ದೇವೇಗೌಡರು, ಕುಮಾರಣ್ಣ, ಸಿಎಂ ಇಬ್ರಾಹಿಂ ಅವರು ಫೈನಲ್ ಮಾಡುತ್ತಾರೆ ಅಂತ ಹೇಳಿದ್ದೆ. ಆದ್ದರಂತೆ ಸ್ವರೂಪ್ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ ಎಂದು ಎಚ್ಡಿ ರೇವಣ್ಣ ಟಿಕೆಟ್ ಘೋಷಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು, ಚಾಮರಾಜ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರನ್ನು ಕಣಕ್ಕೆ ಇಳಿಸಿಲಾಗುತ್ತದೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಪಟ್ಟು ಹಿಡಿದ ಕಾರಣ ರೇವಣ್ಣ ಕುಟುಂಬ ಹಾಸನ ಟಿಕೆಟ್ನಿಂದ ಹಿಂದೆ ಸರಿದಿದ್ದು, ಭವಾನಿ ಅವರ ಮನವೊಲಿಕೆ ಮಾಡಲು ಹಾಸನ ಕ್ಷೇತ್ರದ ಬದಲು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಗೆಲ್ಲುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಕಣಕ್ಕಿಳಿಸುವ ಸಾಧ್ಯತೆ ಇದೇ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ