• Home
  • »
  • News
  • »
  • state
  • »
  • H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ

ಎಲ್ಲಾ ಪಕ್ಷದವರಿಗಿಂತ ಮುಂಚೆಯೇ ಬಾದಾಮಿಯಲ್ಲಿ ಹೆಚ್​.ಡಿ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಇನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಇಲ್ಲಿ ನಿಲ್ತಾರೋ ಗೊತ್ತಿಲ್ಲ  ಎಂದು ಕಾಲೆಳೆದಿದ್ದಾರೆ.

  • Share this:

ಬಾಗಲಕೋಟೆ (ಮೇ 9): ಮುಂದಿನ ಚುನಾವಣೆಯಲ್ಲಿ (Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಾದಾಮಿಯಲ್ಲೇ ಸ್ಪರ್ಧೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ (H.D Kumaraswamy), ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಉತ್ತಮವಾದ ಅಭಿವೃದ್ಧಿ   ಮಾಡಿದ್ದೀನಿ ಅಂತ ಭಾವನೆ ಇಟ್ಟುಕೊಂಡಿದ್ದಾರೆ. ಅವರ ಕಾರ್ಯಕರ್ತರು ಅವರನ್ನ ಕರೀತಾರೆ. 8 ರಿಂದ 10 ಕ್ಷೇತ್ರಗಳು ಅವರನ್ನ ಕರೀತಿರ್ತಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಇಷ್ಟು ವರ್ಷ ಸುದೀರ್ಘ ರಾಜಕೀಯ ಮಾಡಿದವರು. ಅವರು ನಿಲ್ಲಬಹುದು ಗೆಲ್ಲಬಹುದು ಇಲ್ಲ ಅಂತ ನಾನು ಹೇಳಲ್ಲ. ನಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡೋದಾಗಿ ಹೇಳಿದ್ರು. ಬಾದಾಮಿಯಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿ ಹನುಮಂತ ಮಾವಿನ ಮರದ್​ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.


‘ಸಿದ್ದು ಇನ್ನು ಕ್ಷೇತ್ರ ಹುಡುಕುತ್ತಿದ್ದಾರೆ‘


ಎಲ್ಲಾ ಪಕ್ಷದವರಿಗಿಂತ ಮುಂಚೆಯೇ ಬಾದಾಮಿಯಲ್ಲಿ ಹೆಚ್​.ಡಿ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಇನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಇಲ್ಲಿ ನಿಲ್ತಾರೋ ಗೊತ್ತಿಲ್ಲ  ಎಂದು ಕಾಲೆಳೆದಿದ್ದಾರೆ. ಮನುಷ್ಯನಿಗೆ ಸೋಲು ಗೆಲುವು ಎಲ್ಲ ಸರ್ವೇ ಸಾಮಾನ್ಯ. ನಾವು ಸೋತಿದ್ದೇವೆ, ಅವರು ಎಲ್ಲಿ ನಿಲ್ಲಬೇಕು ಅನ್ನೋದನ್ನ ಆ ಪಕ್ಷ ತೀರ್ಮಾನ ಮಾಡುತ್ತೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ರು. ಇನ್ನು ನಮ್ಮ ಗುರಿ ಏನಿದ್ರೂ 123 ಸ್ಥಾನ ಗೆಲ್ಲೋದು ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಶಾಂತ ಕದಡೋರನ್ನು ಒದ್ದು ಒಳಗೆ ಹಾಕಿ


ಸಮಾಜದಲ್ಲಿ ಶಾಂತಿ ಕದಡುತ್ತಿರುವ ಮುತಾಲಿಕ್​ ಅಂತಹವರನ್ನು ಒದ್ದು ಒಳಗೆ ಹಾಕಬೇಕು. ಮಾಧ್ಯಮಗಳ ಮುಂದೆ ಬಂದು ಸಮಾಜದ ಶಾಂತಿ ಹಾಳು ಮಾಡುವವರನ್ನು ಸರ್ಕಾರ ನಿಯಂತ್ರಿಸಬೇಕು. ಸಾಮಾಜಿಕ ಕಲಹಗಳಾದ ಮೇಲೆ ಅವುಗಳನ್ನು ತಿದ್ದುವ ಕಾರ್ಯಮಾಡಿ ಪ್ರಯೋಜನ ಇಲ್ಲ. ಸರ್ಕಾರ ಆಜಾನ್​ ಬಗ್ಗೆ ಕೋರ್ಟ್‌ ಏನು ತೀರ್ಪು ನೀಡಿದೆ ಎಂಬುದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಶಾಂತಿ ಕದಡುವವರನ್ನು ಒದ್ದು ಒಳಗಡೆ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.


ಇದನ್ನೂ ಓದಿ: Karnataka Politics: ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ- ಸಿ.ಟಿ ರವಿ


ಜನರ ಜೀವನದ ಜೊತೆ ಆಟವಾಡಬೇಡಿ


ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವ ಉಳಿಸೋಕೆ ಹನುಮಾನ ಚಾಲೀಸಾ ಹೇಳ್ತಿದ್ದಾರೆ ಅಂತಾ ಏನಿಲ್ಲ, ದಿನಂಪ್ರತಿ ಮನೆಯಲ್ಲಿ ನಾವು ಹೇಳೋಲ್ವೆ?. ಏನಾದ್ರೂ ಸಮಸ್ಯೆ ಆದ್ರೆ, ಆರೋಗ್ಯ ತೊಂದರೆ ಆದ್ರೆ ಹನುಮಾನ ಚಾಲೀಸಾ ಪಠಣ ನಾವು ಮಾಡುತ್ತೇವೆ. ಇದು ಈಗಿನ ನಿಜವಾದ ಸಮಸ್ಯೆ ಅಲ್ಲ, ಹೋದ ವರ್ಷದ ಬೆಳೆ ವಿಮೆ ದುಡ್ಡೇ ಬಂದಿಲ್ಲ, ಇದಕ್ಕೆ ನಮ್ಮ ಹೋರಾಟ ಇರಬೇಕು. 120 ರೂ.ಪೆಟ್ರೋಲ್, 100 ಡೀಸೆಲ್​, ಸಾವಿರ ರೂಪಾಯಿ ಗ್ಯಾಸ್ ರೇಟ್ ಏರಿಕೆಯಾಗಿದೆ. ಈ ವಿಷಯ ಹಿಡಿದುಕೊಂಡು ನಾವು ಹೊರಟಿದ್ದೇವೆ. ಜನರು ಸಾಯಿತ್ತಿದ್ದಾರೆ, ಜನರ ಜೀವನದ ಜೊತೆ ಆಟವಾಡಬೇಡಿ. ಇದರ ಬಗ್ಗೆ ಹೋರಾಟಗಾರರು, ಸಂಘಟನೆಗಳು ಮಾತನಾಡಬೇಕು ಎಂದರು.


40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ 


ಶಾಸಕ ಯತ್ನಾಳ್‌ ಹೇಳಿಕೆ ವಿಚಾರವಾಗಿ ಮಾತನಾಡಿ, ಒಬ್ಬ ಜವಾಬ್ದಾರಿಯುತ ಶಾಸಕರು, ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಆಪಾದನೆ ಮಾಡಿದ್ದಾರೆ. ಪಾಪದ ಹಣದ ಮೂಲಕ ಕೆಲವು ಎಂಎಲ್​ಎಗಳನ್ನು ತೆಗೆದುಕೊಂಡು ಈ ಸರ್ಕಾರ ಮಾಡಿದ್ದಾರೆ. ಇದು ಪರಿಶುದ್ಧ ಸರ್ಕಾರವಾ, ಜನ ಇವರನ್ನು ಆಯ್ಕೆ ಮಾಡಿದ್ದಾರಾ.?


ಇದನ್ನೂ ಓದಿ: PSI Recruitment Scam: ಅಕ್ರಮವಾಗಿ ಎಕ್ಸಾಂ ಬರೆದು ಸಕ್ಸಸ್ ಆಗಿದ್ದಕ್ಕೆ ಫೋಟೋಶೂಟ್, ಸಿಬ್ಬಂದಿಗೆ 4000 ಕೊಟ್ಟ ದಿವ್ಯಾ ಹಾಗರಗಿ


ನಾನು ಪ್ರಧಾನಮಂತ್ರಿಗಳ ಮೇಲೆ ಚರ್ಚೆ ಮಾಡಲ್ಲ.ಅವರನ್ನು ಬಿಟ್ಟು ಕೆಲ ಮುಖಂಡರು, ಚುನಾವಣೆ ತಂತ್ರಗಾರಿಕೆ ಮಾಡೋರು ಇದ್ದಾರಲ್ಲ ಅವರ ಜೊತೆ ಇರೋರು ಪರಿಶುದ್ಧರಿಲ್ಲ. ಬಿಜೆಪಿ ಅನ್ನೋದು ಭ್ರಷ್ಟ ಜನರ ಸರ್ಕಾರ ಅಂತ ಅನ್ನಬೇಕಾಗಿದೆ. ಆಲಿ ಬಾಬಾ ಮತ್ತು 40 ಮಂದಿ ಕಳ್ಳರ ರೀತಿಯ ಸಚಿವ ಸಂಪುಟ ಇದಾಗಿದೆ. 40 ಮಂದಿ ಕಳ್ಳರ ಸರ್ಕಾರ ಎಂದು ಲೇವಡಿ ಮಾಡಿದರು.

Published by:ಪಾವನ ಎಚ್ ಎಸ್
First published: