HOME » NEWS » State » HD KUMARASWAMY DARES MEDIA TO REVEAL THE NAME OF EX CM INVOLVED IN DRUG CASE AS ALLEGED SNVS

ಡ್ರಗ್ಸ್ ಪ್ರಕರಣದಲ್ಲಿ ಕಪೋಲಕಲ್ಪಿತ ವರದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ಕುಮಾರಸ್ವಾಮಿ

ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಿಎಂ ಭಾಗಿಯಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಯಾರು ಆ ಸಿಎಂ ಎಂದು ಹೆಸರು ಬಹಿರಂಗಪಡಿಸಬೇಕು. ಅದು ಸುಳ್ಳಾದರೆ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

news18-kannada
Updated:October 3, 2020, 3:15 PM IST
ಡ್ರಗ್ಸ್ ಪ್ರಕರಣದಲ್ಲಿ ಕಪೋಲಕಲ್ಪಿತ ವರದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ಕುಮಾರಸ್ವಾಮಿ
ಹೆಚ್.ಡಿ. ಕುಮಾರಸ್ವಾಮಿ ಫೈಲ್ ಚಿತ್ರ
  • Share this:
ಬೆಂಗಳೂರು(ಅ. 03): ಡ್ರಗ್ಸ್ ಪ್ರಕರಣದಲ್ಲಿ ದಿನೇ ದಿನೇ ಸ್ಫೋಟಕ ಸುದ್ದಿಗಳನ್ನ ಬಿತ್ತರಿಸುತ್ತಿರುವ ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಟಿವಿ ಆ್ಯಂಕರ್ (ಅನುಶ್ರೀ) ಮೂರು ಪಕ್ಷಗಳ ಪ್ರಭಾವಿ ನಾಯಕರ ಜೊತೆ ಚರ್ಚೆ ಮಾಡಿದ್ಧಾರೆ. ಎರಡು ಬಾರಿ ಸಿಎಂ ಆದವರ ಜೊತೆ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಜೊತೆಯೂ ಸಮಾಲೋಚನೆ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿಗಳನ್ನ ಮಾಧ್ಯಮಗಳ ಬಿತ್ತರಿಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಹರಿಹಾಯ್ದರು. ಯಾರು ಆ ಮುಖ್ಯಮಂತ್ರಿ ಎಂದು ಸತ್ಯ ಹೇಳಬೇಕು. ಇಲ್ಲದಿದ್ದರೆ ಕಪೋಲಕಲ್ಪಿತ ಸುದ್ದಿಗಳನ್ನ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ ಮಾಡಿದರು. ಹಾಗೆಯೇ ಈ ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ತಾನು ಮೊದಲೇ ಹೇಳಿದ್ದ ಎಂದೂ ಹೆಚ್​ಡಿಕೆ ಅಭಿಪ್ರಾಯಪಟ್ಟರು.

“ದೊಡ್ಡ ದೊಡ್ಡ ವ್ಯಕ್ತಿಗಳು ಈ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಪೋಲಕಲ್ಪಿತ ಸುದ್ದಿಗಳು ಬರುತ್ತಿವೆ. ಟಿವಿ ನಿರೂಪಕಿಗೆ ಲಿಂಕ್ ಇರುವ ಬಗ್ಗೆ ಮಂಗಳೂರು ಪೊಲೀಸರು ನೋಟೀಸ್ ಕೊಟ್ಟ ತಕ್ಷಣ ಆಕೆ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿಯನ್ನ ಟಿವಿಯಲ್ಲಿ ನಿನ್ನೆ ನೋಡಿದೆ. ಎರಡು ಬಾರಿ ಸಿಎಂ ಆಗಿದ್ದವರು ಹಾಗೂ ಮಾಜಿ ಸಿಎಂ ಮಗನ ಜೊತೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಎರಡು ಬಾರಿ ಸಿಎಂ ಆಗಿದ್ದವ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತು ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿಯಾಗಿದ್ದವರಿದ್ದಾರೆ. ಆದರೆ, ಯಾರು ಆ ಸಿಎಂ ಆದು ಹೆಸರು ಹೇಳಬೇಕಲ್ಲ” ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದೆ; ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಲೇವಡಿ

ಮಂಗಳೂರು ರಿಪೋರ್ಟರ್ (ಪವರ್ ಟಿವಿ) ಈ ಸುದ್ದಿ ಕೊಟ್ಟಿದ್ದಾರೆ. ನನ್ನದೇ ಮೂಲಗಳಿಂದ ವಿಚಾರಿಸಿದಾಗ ಆ ರಿಪೋರ್ಟರ್​ಗೆ ಮಾಹಿತಿ ಕೊಟ್ಟವರು ಶಿವಪ್ರಕಾಶ್ ನಾಯಕ್ ಎಂದು ಗೊತ್ತಾಗಿದೆ. ತನಿಖೆ ನಡೆಯುವಾಗ ಮಾಹಿತಿ ಹೇಗೆ ಮಾಧ್ಯಮಗಳಿಗೆ ಸೋರಿಕೆ ಆಯಿತು? ಸರ್ಕಾರ ಜನರ ಗಮನ ಬೇರೆಡೆಗೆ ಸೆಳೆಯಲು ಈ ರೀತಿ ಮಾಡುತ್ತಿದೆಯಾ? ನಾನು ಈಗ ಮಾತನಾಡದಿದ್ದರೆ ಜನರು ತಮಗೆ ಬೇಕಾದ ಹಾಗೆ ಕಲ್ಪನೆ ಮಾಡಿಕೊಳ್ಳುತ್ತಾರೆ. ಪ್ರತೀ ದಿನ ಒಂದೊಂದು ಹೆಸರು ಹೊರಬರುತ್ತಿದೆ. ರಿಪೋರ್ಟರ್​ಗೆ ಮಾಹಿತಿ ಕೊಟ್ಟ ಆ ವ್ಯಕ್ತಿ ಸತ್ಯ ಹೇಳಬೇಕು. ಸುಳ್ಳು ಮಾಹಿತಿ ನೀಡಿದ್ದರೆ ಆತನನ್ನು ಬಂಧಿಸಬೇಕು. ಮಾಧ್ಯಮಗಳಿಗೂ ಜವಾಬ್ದಾರಿ ಇರಬೇಕು. ಧೈರ್ಯವಾಗಿ ಹೆಸರನ್ನು ಹೇಳಬೇಕು. ಯಾರೋ ಒಬ್ಬರ ತೇಜೋವಧೆ ಮಾಡಲು ಮಾಧ್ಯಮಗಳು ಮುಂದಾದರೆ ಸುಮ್ಮನೆ ಇರಲು ಸಾಧ್ಯವಿಲ್ಲ. ಕಪೋಲ ಕಲ್ಪಿತ ಸುದ್ದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇಬ್ಬರಿಗೂ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಉತ್ತರ ಪ್ರದೇಶ ರಾಮ ರಾಜ್ಯವಲ್ಲ, ರಾವಣ ರಾಜ್ಯ; ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿ

ಡ್ರಗ್ಸ್ ಪ್ರಕರಣದಲ್ಲಿ ಸಂಬಂಧ ಇರುವ ಯಾವನೇ ಮುಖ್ಯಮಂತ್ರಿ ಇರಲಿ. ಆತನ ಬಗ್ಗೆ ತನಿಖೆ ಆಗಲಿ. ಸರ್ಕಾರ ಸಾರ್ವಜನಿಕವಾಗಿ ತನಿಖೆ ಮಾಡಲಿ ಎಂದು ಹೆಚ್​ಡಿಕೆ ಒತ್ತಾಯಿಸಿದರು.

ಇದೇ ವೇಳೆ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನ ಭೇಟಿ ಮಾಡಿದ ಕುಮಾರಸ್ವಾಮಿ, ರೈತರಿಗೆ ಸೇರಿದ 500 ಎಕರೆಯಷ್ಟು ಒಣಭೂಮಿಯನ್ನು ಕೈಗಾರಿಕೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿರುವ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 700ಕ್ಕೂ ಹೆಚ್ಚು ಎಕರೆ ನೀರಾವರಿ ಭೂಮಿಯನ್ನ ಸ್ವಾಧೀನ ಪಡಿಸಿಕೊಂಡಿದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರೆನ್ನಲಾಗಿದೆ.ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: October 3, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories