HD Kumaraswamy: ನೆಹರುರನ್ನು ನೆನೆಯಿರಿ, ರಾಹುಲ್ ಗಾಂಧಿನ 5 ದಿನ ತನಿಖೆಗೆ ಕರಿಬೇಕಾ? ಕಾಂಗ್ರೆಸ್ ಬಗ್ಗೆ HDK ಮೃದುಧೋರಣೆ?

ರಾಹುಲ್‌ಗಾಂಧಿಯವರಿಗೆ ಇಡಿ ಐದು ದಿನ ನಿರಂತರವಾಗಿ ವಿಚಾರಣೆಗೆ ಕರೆದಿದ್ದಾರೆ. ಆ ಸಂಸ್ಥೆಯವರಿಗೆ ನಾನು ಹೇಳೋದು, ಮಾಹಿತಿ ತೆಗೆಯಲು ನಿಮಗೆ ಐದು ದಿನ ಬೇಕಾ? ಯಾತಕ್ಕೆ ನಿತ್ಯ ಕರಿತಿದ್ದೀರಿ, ಏನು ಸಂದೇಶ ಕೊಡೋಕೆ ಕರಿತಿದ್ದೀರಿ.

ಎಚ್​ ಡಿ ಕುಮಾರಸ್ವಾಮಿ

ಎಚ್​ ಡಿ ಕುಮಾರಸ್ವಾಮಿ

  • Share this:
ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ರಾಜ್ಯ ಭೇಟಿಯನ್ನು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (H. D. Kumaraswamy) ಟೀಕಿಸಿದರು. ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮೋದಿ ಭಾಷಣ ಮಾಡಿದ್ದಾರೆ. ಪ್ರಧಾನಿ ಆ ಸ್ಥಾನದಲ್ಲಿ ನಿಂತು ಮಾತನಾಡಬೇಕಾದರೆ ಯೋಚನೆ ಮಾಡಬೇಕು. ಯಾವ ಸರ್ಕಾರಗಳು ಏನು ಮಾಡೇ ಇಲ್ಲಾ, ನಾನೇ ಎಲ್ಲಾ ಮಾಡಿದ್ದೇನೆ ಎಂಬ ರೀತಿ ಸಾರ್ವಜನಿಕ ಭಾಷಣ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇರೆ ಸರ್ಕಾರಗಳು ಈ ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿಕೊಳ್ಳವುದು ದೊಡ್ಡತನ. ಬೇರೆ ಸರ್ಕಾರಗಳು ಏನು ಮಾಡೇ ಇಲ್ಲ, ಎಲ್ಲಾ ಕಾರ್ಯಕ್ರಮಗಳು ನನ್ನಿಂದ ಆಗಿದೆ ಅನ್ನುವ ಭಾವನೆ ಪ್ರಧಾನಿಗೆ ಇದೆ. ನೆಹರು ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕೆ, ನೀರಾವರಿಗೆ ಇಟ್ಟಿದ್ದ ಬಜೆಟ್ ಎಷ್ಟು. ಅವರೆಲ್ಲಾ ಈ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು ಎಂದು ಮಾತಿನಲ್ಲೇ ಚಾಟಿ ಬೀಸಿದರು.

32 ಕೋಟಿ ಖರ್ಚು ಬೇಕಿತ್ತಾ?

ಮೋದಿ ಅವರದ್ದು ಕೇವಲ ಭಾಷಣ ಅಷ್ಟೇ. ಮುಂದೆ ಚುನಾವಣೆ ಇದೆ, ಇನ್ನೂ ಹನ್ನೊಂದು ಭಾರಿ ರಾಜ್ಯಕ್ಕೆ ಬರ್ತಾರೆ. ಕೋವಿಡ್, ಫ್ಲಡ್ ಬಂದಾಗ ರಾಜ್ಯಕ್ಕೆ ಬರಲಿಲ್ಲ. ಜನ ಎಚ್ಚರಿಕೆಯಿಂದ ತೀರ್ಮಾನ ಮಾಡಬೇಕು. ಪ್ರಧಾನಮಂತ್ರಿಗಳ ಭದ್ರತೆಗಾಗಿ 32 ಕೋಟಿ ಖರ್ಚು ಮಾಡಿದ್ದಾರೆ. ಅದೇ 32 ಕೋಟಿಯಲ್ಲಿ ಗ್ರಾಮ ಪಂಚಾಯ್ತಿ ಉದ್ದಾರ ಮಾಡಬಹುದಿತ್ತು. ಭಾಷಣದಲ್ಲಿ ರಾಜ್ಯ ಸರ್ಕಾರದ 40 ಪರ್ಸೆಂಟ್ ಕಮಿಷನ್ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಮಾಹಿತಿ ತೆಗೆಯಲು ನಿಮಗೆ ಐದು ದಿನ ಬೇಕಾ?

ರಾಹುಲ್‌ಗಾಂಧಿಯವರಿಗೆ ಇಡಿ ಐದು ದಿನ ನಿರಂತರವಾಗಿ ವಿಚಾರಣೆಗೆ ಕರೆದಿದ್ದಾರೆ. ಆ ಸಂಸ್ಥೆಯವರಿಗೆ ನಾನು ಹೇಳೋದು, ಮಾಹಿತಿ ತೆಗೆಯಲು ನಿಮಗೆ ಐದು ದಿನ ಬೇಕಾ? ಯಾತಕ್ಕೆ ನಿತ್ಯ ಕರಿತಿದ್ದೀರಿ, ಏನು ಸಂದೇಶ ಕೊಡೋಕೆ ಕರಿತಿದ್ದೀರಿ. ಸಂಪೂರ್ಣ ದಾಖಲೆ ನಿಮ್ಮ ಬಳಿ ಇದೆ. ಕಂಪನಿ ಪ್ರಾರಂಭ, ಹಣ ಎಲ್ಲಿಂದ ಬಂತು ಎಲ್ಲಾ ನಿಮ್ಮ ಬಳಿ ಇದೆ. ಐದು ದಿನ ಪ್ರತಿ ನಿತ್ಯ ಹತ್ತು ಗಂಟೆ ನಿಮ್ಮ ಕಚೇರಿಯಲ್ಲಿ ಕರೆದು ಕೂರಿಸಿಕೊಂಡು ಏನು ತನಿಖೆ ಮಾಡುತ್ತಿದ್ದೀರಾ. ಏನು ವಿಷಯ ಸಂಗ್ರಹ ಮಾಡುತ್ತಿದ್ದೀರಿ, ಅದಕ್ಕೆ ಇಷ್ಟು ದಿನ ಬೇಕಾ ಎಂದು ಇಡಿ ತನಿಖೆ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: JDS MLA Slaps: ಪ್ರಿನ್ಸಿಪಾಲ್ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ ಶ್ರೀನಿವಾಸ್: ವಿಡಿಯೋ ವೈರಲ್

ಮಾಹಿತಿ ಪಡೆಯಲು ಅರ್ಧ ಅಥವಾ ಒಂದು ಗಂಟೆ ಕೆಲಸ ಇರಬಹುದು. ಈಗಾಗಲೇ ಮಾಹಿತಿ ಪಡೆದಿದ್ದರೂ ಯಾತಕ್ಕೆ ತಳ್ಳುತ್ತಿದ್ದೀರಾ. ಜನರ ಮುಂದೆ ಒಂದು ವ್ಯವಸ್ಥಿತ ಅನುಮಾನ ತರುವ ಕೆಲಸ ಒಂದು ಭಾಗ. ಅವರನ್ನು ಹೆದರುಸೋದು ಇನ್ನೊಂದು ಭಾಗ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಅದು ಬಿಟ್ಟು ದಿನಾ ಯಾಕೆ ಕಿರುಕುಳ ಕೊಡೋದು ಎಂದು ಪ್ರಶ್ನೆ ಮಾಡಿದರು.

ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ

ಸಿಎಂ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಎಚ್​ಡಿಕೆ ಕುಟುಕಿದರು. ಕೀ ಇರೋದೆ ಬೇರೆ ಕಡೆ, ಪಾಪ ಅವರೇನು ಮಾಡ್ತಾರೆ ಅವರ ಬಗ್ಗೆ ನನಗೆ ಕನಿಕರ ಇದೆ. ಸ್ವತಂತ್ರವಾಗಿ ಸಿಎಂ ಅಧಿಕಾರ ನಡೆಸಲು ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು. ಅವರಿಂದ ಸ್ವಾತಂತ್ರ್ಯವಾಗಿ ಯಾವುದೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಎಲ್ಲವೂ ಕೂಡ ಕೇಶವಕೃಪಾದಿಂದ ಬರಬೇಕು. ಅಲ್ಲಿಂದ ಬರೋದೆ ಅಂತಿಮ ನಿರ್ಧಾರ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
Published by:Kavya V
First published: