• Home
 • »
 • News
 • »
 • state
 • »
 • HD Kumaraswamy: ಅವನ್ಯಾವನೋ ಪಂಚಾಯಿತಿ ಚುನಾವಣೆಗೆ ನಿಂತು ಗೆಲ್ಲಲಿ; BL Santhoshಗೆ ಹೆಚ್​ಡಿಕೆ ಸವಾಲು

HD Kumaraswamy: ಅವನ್ಯಾವನೋ ಪಂಚಾಯಿತಿ ಚುನಾವಣೆಗೆ ನಿಂತು ಗೆಲ್ಲಲಿ; BL Santhoshಗೆ ಹೆಚ್​ಡಿಕೆ ಸವಾಲು

ಹೆಚ್ ಡಿ ಕುಮಾರಸ್ವಾಮಿ , ಬಿಎಲ್​ ಸಂತೋಷ್

ಹೆಚ್ ಡಿ ಕುಮಾರಸ್ವಾಮಿ , ಬಿಎಲ್​ ಸಂತೋಷ್

ನಮ್ಮದು ತಾಯಿ ಹೃದಯ ಆಗಿರೋದರಿಂದ ಕಣ್ಣೀರು ಹಾಕುತ್ತೇವೆ. ವಿನಃ ರಾಜಕೀಯಕ್ಕಾಗಿ ಅಲ್ಲ. ನಾವು ರೈತರ ಮಕ್ಕಳೇ, ಈ ಮಣ್ಣಿನ ಮಕ್ಕಳು.  ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.

 • News18 Kannada
 • 2-MIN READ
 • Last Updated :
 • Ramanagara, India
 • Share this:

ಜೆಡಿಎಸ್ ಆಯೋಜನೆಯ ಪಂಚರತ್ನ ಯಾತ್ರೆ (JDS Pancharatna Yatre) ಮುಂದುವರಿದಿದೆ. ಸದ್ಯ ಹಳೆ ಮೈಸೂರು ಭಾಗದಲ್ಲಿ ರಥಯಾತ್ರೆ ನಡೆಯುತ್ತಿದ್ದು, ಜೆಡಿಎಸ್ (JDS) ಬೃಹತ್​ ಮೆರವಣಿಗೆಗಳ ಜೊತೆ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದೆ. ನಿನ್ನೆ ಚನ್ನಪಟ್ಟಣದಲ್ಲಿ (Channapatna) ನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ (Former CM HD Kumaraswamy), ತಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ (National Party) ಎಚ್ಚರಿಕೆ ನೀಡಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh, National General Secretary (Org), BJP) ವಿರುದ್ಧ ಕುಮಾರಸ್ವಾಮಿ ಗುಡುಗಿದರು. ಮೊದಲು ಅವನ್ಯಾವನೋ ಒಂದು ಪಂಚಾಯಿತಿ ಚುನಾವಣೆಗೆ (Panchayat Election) ನಿಂತು ಗೆಲ್ಲಲ್ಲಿ ಎಂದು ಸವಾಲು ಹಾಕಿದರು.


ನಮ್ಮ ಪಕ್ಷದ ಕಾರ್ಯಕ್ರಮದ ಬಗ್ಗೆ ಮಾತನಾಡೋದು ಬೇಡ. ನಮಗೆ ಮಾನವೀಯತೆ ಇದೆ. ನಮ್ಮದು ತಾಯಿ ಹೃದಯ ಆಗಿರೋದರಿಂದ ಕಣ್ಣೀರು ಹಾಕುತ್ತೇವೆ. ವಿನಃ ರಾಜಕೀಯಕ್ಕಾಗಿ ಅಲ್ಲ. ನಾವು ರೈತರ ಮಕ್ಕಳೇ, ಈ ಮಣ್ಣಿನ ಮಕ್ಕಳು.  ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.


ಹೆಚ್ ಡಿ ಕುಮಾರಸ್ವಾಮಿ


ಚನ್ನಪಟ್ಟಣ, ರಾಮನಗರ ನನ್ನ ಎರಡು ಕಣ್ಣುಗಳು


ಬಹಳ ಜನ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದರು. ಚನ್ನಪಟ್ಟಣದಲ್ಲಿ ಮತ್ತೆ ನಿಲ್ತಾರೋ, ಬಿಟ್ಟು ಹೋಗ್ತಾರೋ ಅಂತ ಪ್ರಚಾರ ಮಾಡಿದ್ರು. ನನ್ನ ಕೆಲ ಕ್ಷೇತ್ರದ ಮುಖಂಡರು ಚನ್ನಪಟ್ಟಣ ಜೊತೆಗೆ ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.


ಚನ್ನಪಟ್ಟಣದಲ್ಲಿ ಕುತಂತ್ರದಿಂದಲೇ ನನ್ನ ಸೋಲಿಸಬಹುದು ಅಂತ ಆ ಮಾತು ಹೇಳಿದ್ರು. ಆದ್ರೆ ನಾನು ಹೇಳಿದ್ದು ಟೂರಿಂಗ್ ಟಾಕೀಸ್ ಅಲ್ಲಪ್ಪಾ ಅಂತ ಇದೊಂದು ಬಾರಿ ಕಾರ್ಯಕರ್ತರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದೀರಿ‌. ನಿಮ್ಮ ಒತ್ತಡಕ್ಕೆ ಮಣಿದು ನಾನು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡ್ತಿದ್ದೀನಿ. ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.


ನಾನು ಸಿಎಂ ಆಗಬೇಕು ಅನ್ನೋದು ದೈವ ಇಚ್ಛೆ


ಕನಕಪುರ ತಾಲೂಕಿನ ಸಾತನೂರಿನಲ್ಲಿ ಮಧ್ಯರಾತ್ರಿ 1:45 ಗಂಟೆಗೆ ಹೋದೆ. ಅರ್ಧ ರಾತ್ರಿಯಲ್ಲೂ ಕನಕಪುರ ಜನ ನಮ್ಮನ್ನ ಸ್ವಾಗತ ಮಾಡಿದ್ರು. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್ ಕಂಪನಿ ಹತ್ತಿರ ಹೋಗಿ ಒಬ್ಬೊಬ್ಬರು ಒಂದು ಪ್ಯಾಕೆಟ್ ತಗೊಂಡು ಬಂದರು. ಆದರೆ ನಾನು ರೈತರ ಜಮೀನು ಉಳಿವಿಗಾಗಿ ಹೋರಾಟ ಮಾಡಿದೆ ಎಂದರು.


ಹೆಚ್ ಡಿ ಕುಮಾರಸ್ವಾಮಿ


ಆದರೆ ಆಗಿನ ಸಮ್ಮಿಶ್ರ ಸರ್ಕಾರದ ಮಹಾ ನಾಯಕರು ನನ್ನ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಹಣ ಇಲ್ಲ ಹೇಗೆ ಸಾಲಮನ್ನಾ ಮಾಡ್ತಾರೆ ಅಂತ ಅಂದ್ರು. ಆದ್ರೆ ಸರ್ಕಾರ ಇದ್ದ ಹದಿನಾಲ್ಕು ತಿಂಗಳಲ್ಲಿ ರೈತರ ಸಾಲಮನ್ನಾ ಮಾಡಿದೆ ಎಂದು ಹೇಳುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.‌


ನಾನು ಕುತಂತ್ರದ ರಾಜಕೀಯ ಮಾಡಲ್ಲ, ಯೋಗೇಶ್ವರ್ ವಿರುದ್ಧ ವಾಗ್ದಾಳಿ


ಇಲ್ಲಿನ ಭಗೀರಥ ಅಂತ ಕಟೌಟ್ ಹಾಕಿಸಿಕೊಳ್ಳುವನು ನನ್ನ ಬಗ್ಗೆ ಮಾತಾಡ್ತಾನೆಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರೇಳದೆ ಟಾಂಗ್ ನೀಡಿದರು.‌ 6 ತಿಂಗಳಲ್ಲಿ ಮೂರು ಜನ ತಹಶೀಲ್ದಾರ್ ಬಂದ್ರೂ ಯಾವ ಅಧಿಕಾರಿಗಳ ಹತ್ತಿರ ಮಂತ್ಲಿ ಕಲೆಕ್ಟ್ ಮಾಡಿಲ್ಲ ನಾನು, ಅವರ ಯೋಗ್ಯತೆ ಏನು ಅಂತ ನನಗೆ ಗೊತ್ತು. ಅವನು ವರ್ಗಾವಣೆ ಮಾಡಿಸ್ತೇನೆ ಅಂತ ಅಧಿಕಾರಿಗಳಿಗೆ ಭಯ. ಏನೆಲ್ಲಾ ನಡೆಯುತ್ತಿದೆ ಅಂತ ನನಗೆ ಚೆನ್ನಾಗಿ ಗೊತ್ತು ಎಂದು ಯೋಗೇಶ್ವರ್ ವಿರುದ್ಧ ಆರೋಪ ಮಾಡಿದರು.


ಇದನ್ನೂ ಓದಿ: HD Kumaraswamy And Garlands: ಕುಮಾರಸ್ವಾಮಿಗೆ ಕೊತ್ತಂಬರಿ ಸೊಪ್ಪು, ಚಕೋತಾ ಹಾರಗಳು; ಫೋಟೋಗಳಲ್ಲಿ


ಈ ರಾಜ್ಯದ ಸಿಎಂ ಆಗಿದ್ದು ನಾನು ಆಕಸ್ಮಿಕ, ಯಾಕಂದ್ರೆ ಬೇರೆಯವರ ಮುಲಾಜಿಗೆ ಸೀಮಿತವಾಗಿದ್ದೆ. ಹಾಸನದಲ್ಲಿ ಹುಟ್ಟಿದ್ರೂ ಇಡೀ ದೇಶಕ್ಕೆ ಪರಿಚಯ ಮಾಡಿದ್ದು ರಾಮನಗರ ಜನತೆ. ರಾಮನಗರ ಜನತೆ ಕೊಟ್ಟ ಶಕ್ತಿ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದರು.

Published by:Mahmadrafik K
First published: