• Home
  • »
  • News
  • »
  • state
  • »
  • H D Kumaraswamy: ಧಮ್​ ಇದ್ರೆ ನೀವೇ ತನಿಖೆ ಮಾಡಿಸಿ; CM ಬೊಮ್ಮಾಯಿಗೆ ಕುಮಾರಸ್ವಾಮಿ ಸವಾಲ್​!

H D Kumaraswamy: ಧಮ್​ ಇದ್ರೆ ನೀವೇ ತನಿಖೆ ಮಾಡಿಸಿ; CM ಬೊಮ್ಮಾಯಿಗೆ ಕುಮಾರಸ್ವಾಮಿ ಸವಾಲ್​!

ಹೆಚ್​.ಡಿ ಕುಮಾರಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ

ಹೆಚ್​.ಡಿ ಕುಮಾರಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ನೀಡಿದ್ದ ಹೇಳಿಕೆಗೆ ಇಲ್ಲಿ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು ದಾಖಲೆಗಳನ್ನು ರಾಹುಲ್‌ಗೆ ಕಳುಹಿಸಿ ಏನು ಮಾಡುತ್ತೀರಿ? ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ ಎನ್ನುವ ಥರದ ಮಾತುಗಳನ್ನು ಬಿಡಿ ಎಂದು ಟೀಕಿಸಿದರು.

  • Share this:

ಮೈಸೂರು (ಅ.19): ಕಾಂಗ್ರೆಸ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಡುವೆ ನಡೆಯುತ್ತಿರುವ ಏಟು-ಎದುರೇಟಿನ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ (Former CM H.D Kumaraswamy) ಎಂಟ್ರಿ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಸಿಎಂ ಆಗಿದ್ದ  ಅವಧಿಯಲ್ಲಿ ನೇಮಕಾತಿಯಲ್ಲಿ (Recruitment) ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್‌ ಗಾಂಧಿಗೆ (Rahul Gandhi) ಕಳುಹಿಸುತ್ತೀರೇಕೆ? ನಿಮಗೆ ಧಮ್ ಇದ್ದರೆ ಸಚಿವ ಸಂ‍ಪುಟದಲ್ಲಿಟ್ಟು ತನಿಖೆ ಮಾಡಿಸಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.


 ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ


ಮುಖ್ಯಮಂತ್ರಿಯು ಬೀದರ್ ಜಿಲ್ಲೆಯ ಔರಾದ್‌ನಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ನೀಡಿದ್ದ ಹೇಳಿಕೆಗೆ ಇಲ್ಲಿ ತಿರುಗೇಟು ಕೊಟ್ಟ ಅವರು, ದಾಖಲೆಗಳನ್ನು ರಾಹುಲ್‌ಗೆ ಕಳುಹಿಸಿ ಏನು ಮಾಡುತ್ತೀರಿ? ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ ಎನ್ನುವ ಥರದ ಮಾತುಗಳನ್ನು ಬಿಡಿ ಎಂದು ಟೀಕಿಸಿದರು.


ರಾಹುಲ್‌ ಗಾಂಧಿಗೆ ದಾಖಲೆ ಕೊಡ್ತೀನಿ ಎಂದ ರಾಹುಲ್​


ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ನಡೆದ ಪೊಲೀಸ್‌ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಹಗರಣಗಳ ಕುರಿತಾದ ದಾಖಲೆಗಳನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ನೀಡುತ್ತೇನೆ. ಅಂದು ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿ, ಸಚಿವರ ವಿರುದ್ಧ ರಾಹುಲ್‌ ಗಾಂಧಿಯವರು ಕ್ರಮ ಕೈಗೊಳ್ಳುತ್ತಾರಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಎಸೆದಿದ್ದಾರೆ.


ಇದನ್ನೂ ಓದಿ: Sonia Gandhi-Mallikarjuna Kharge: ಖರ್ಗೆ ನಿವಾಸಕ್ಕೆ ತೆರಳಿ ಶುಭಕೋರಿದ ಸೋನಿಯಾ ಗಾಂಧಿ; ಕಾಂಗ್ರೆಸ್​ ನೂತನ ಅಧ್ಯಕ್ಷರ ಮನೆಯಲ್ಲಿ ಸಂಭ್ರಮ


ಅವ್ರು ಎಷ್ಟು ಪರ್ಸೆಂಟೇಜ್‌ ಹೊಡೆದಿದ್ದಾರೆ


ಬೀದರ್‌ ಜಿಲ್ಲೆಯ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ ಅವರು ರಾಹುಲ್‌ ಗಾಂಧಿ ಅವರು ನಮ್ಮ ಸರ್ಕಾರದ ಅವಧಿಯಲ್ಲಿ ಹಗರಣಗಳು ನಡೆದಿವೆ ಎಂದು ಆರೋಪಿಸುತ್ತಿದ್ದಾರೆ. ನಮ್ಮದು ಪರ್ಸೆಂಟೇಜ್‌ ಸರ್ಕಾರ ಎನ್ನುತ್ತಿದ್ದಾರೆ. ಆದರೆ, ಅರ್ಜಿ ಹಾಕದಿದ್ದರೂ ನೌಕರಿ ಕೊಡುವ ವ್ಯವಸ್ಥೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿತ್ತು. ಆಗ ಅವರು ಎಷ್ಟು ಪರ್ಸೆಂಟೇಜ್‌ ಹೊಡೆದಿರಬಹುದು ಎಂದು ತಿರುಗೇಟು ನೀಡಿದರು.


ನ.1ಕ್ಕೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್​


ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನ.1ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಯಾರೊಂದಿಗೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. 123 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.


ಸಿದ್ದರಾಮಯ್ಯ ಅವರೇ ಕ್ಷೇತ್ರ  ಹುಡುಕುತ್ತಿದ್ದಾರೆ


ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಅಭ್ಯರ್ಥಿಗಳಿದ್ದಾರೆಯೇ? ಸ್ವತಃ ಸಿದ್ದರಾಮಯ್ಯ ಅವರೇ ಕ್ಷೇತ್ರ ಹುಡುಕುತ್ತಿದ್ದಾರೆ. ಅಭ್ಯರ್ಥಿಗಳಿಲ್ಲದೇ ನಮ್ಮವರನ್ನು ಸೆಳೆಯಲು ಆ ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.


ಕೆಲವರ ಕೆಲಸ ನನಗೆ ಬೇಸರ ತಂದಿದೆ


ಜನತಾ ಜಲಧಾರೆ ಕಾರ್ಯಕ್ರಮ ಕೆಲವರು ಸಮರ್ಪಕವಾಗಿ ಬಳಕೆ ಮಾಡಿಕೊಂಡ್ರು. ಇನ್ನೂ ಕೆಲವರ ಕೆಲಸ ನನಗೆ ಬೇಸರ ತಂದಿದೆ. ದೇವೇಗೌಡರು ಪಕ್ಷೇತರ ಶಾಸಕರಾಗಿ ತಮ್ಮ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ನೀವುಗಳು ಮನಸ್ಸು ಮಾಡಿದ್ರೆ ನಮ್ಮ ಗುರಿ ಮುಟ್ಟಲು ಕಷ್ಟ ಆಗಲ್ಲ ಎಂದು ಸಂಭಾವ್ಯ ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.


ಇದನ್ನೂ ಓದಿ: Traffic Rules: ಸೀಟ್ ಬೆಲ್ಟ್ ಹಾಕದಿದ್ರೆ ಬೀಳುತ್ತೆ ಭಾರೀ ದಂಡ! ಟ್ರಾಫಿಕ್ ಪೊಲೀಸರ ಆದೇಶ​


ಇವತ್ತು ವಿಧಾನಸಭೆಯಲ್ಲಿ ಇರುವ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರನ್ನು ನೋಡಿದಾಗ ಶೇ80 ರಷ್ಟು ಮಂದಿ ಜನತಾ ಪರಿವಾರದವರು ಎಂಬುದು ತಿಳಿಯಿರಿ. 2013ರಲ್ಲಿ ನಮ್ಮ ಹೋರಾಟದ ಫಲ ಕಾಂಗ್ರೆಸ್ಗೆ ಸಿಕ್ಕಿತು. ನಾವು ಹೋರಾಟ ಮಾಡಿ ಯಡಿಯೂರಪ್ಪ ಹೊರಗೆ ಬಂದ್ರು, ಶ್ರೀರಾಮುಲು ಬೇರೆ ಪಕ್ಷ ಕಟ್ಟಿದ್ರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: