ನನ್ನ ಬಗ್ಗೆ ಯಾವುದೇ ರಹಸ್ಯ ಇದ್ದರೂ ಬಯಲು ಮಾಡಲಿ: ಯತ್ನಾಳ್​ಗೆ HD Kumaraswamy ಸವಾಲು

ನಾವು ಹಿಂದುಗಳು ಅಲ್ವೇ, ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿಎಸ್​​ವೈ ರಾಜಕಾರಣ ಮಾಡ್ತಾರೆ. ಹೆಸರಿಗೆ ಮಾತ್ರ ಹಿಂದುತ್ವ ಹೆಸರು ಹೇಳ್ತಾರೆ. ಒಂದು ಕಡೆಗೆ ಮುಸ್ಲಿಂರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳ್ತಾರೆ. ಮತ್ತೊಂದೆಡೆ ಮುಸ್ಲಿಂ ನಮ್ಮೊಂದಿಗೆ ಬರುಬೇಕು ಎನ್ನುತ್ತಾರೆ.

ಎಚ್​ಡಿಕೆ

ಎಚ್​ಡಿಕೆ

  • Share this:
ವಿಜಯಪುರ: ಸಿಂದಗಿ, ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ(BY Election) ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಅವರ ರಹಸ್ಯ ಇದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (Basangouda Patil Yatnal )ಹೇಳಿಕೆಗೆ ಎಚ್​ಡಿಕೆ ಸವಾಲು ಹಾಕಿದರು. ನನ್ನ ಚರಿತ್ರೆ ಇದ್ದರೆ, ತಂದು ಬಿಡಿ. ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲಾನು ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆ ತರುವಂತೆ ಯತ್ನಾಳ್​​ಗೆ ಕುಮಾರಸ್ವಾಮಿ ಸವಾಲು ಹಾಕಿದರು. ಇನ್ನು RSS ವಿರೋಧಿಸುವ ಮೂಲಕ ಮುಸ್ಲಿಮರ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (bs yediyurappa) ಹೇಳಿಕೆಗೂ ಪ್ರತಿಯಾಗಿ ಎಚ್​ಡಿಕೆ ವಾಗ್ಬಾಣ ಬಿಟ್ಟರು.

ಬಿಜೆಪಿಯವರು ಸಮಯ ಸಾಧಕರು

ನಾವು ಹಿಂದುಗಳು ಅಲ್ವೇ, ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿಎಸ್​​ವೈ ರಾಜಕಾರಣ ಮಾಡ್ತಾರೆ. ಹೆಸರಿಗೆ ಮಾತ್ರ ಹಿಂದುತ್ವ ಹೆಸರು ಹೇಳ್ತಾರೆ. ಒಂದು ಕಡೆಗೆ ಮುಸ್ಲಿಂರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳ್ತಾರೆ. ಮತ್ತೊಂದೆಡೆ ಮುಸ್ಲಿಂ ನಮ್ಮೊಂದಿಗೆ ಬರುಬೇಕು ಎನ್ನುತ್ತಾರೆ. ಬಿಜೆಪಿಯವರು ಸಮಯ ಸಾಧಕರು, ಅವರಿಗೆ ಯಾವ ಯಾವ ಸಂದರ್ಭದಲ್ಲಿ ಏನನ್ನು ಹೇಳಬೇಕು ಎಂಬುವುದು ಗೊತ್ತಿದೆ. ಬಿಜೆಪಿಯವರು ಹೇಳಿದ್ದು ಮರೆತು ಹೋಗ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕಟೀಲ್​ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಡ್ರಗ್​ ಪೆಡ್ಲರ್ ಎಂಬ ನಳೀನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಕಿಡಿಕಾರಿದರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಹತಾಶೆಯಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷ ಅದ್ರು ಅವರಿಗೆ ಮಾಧ್ಯಮದಲ್ಲಿ ಮತ್ತು ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ . ಹಾಗಾಗಿ ಹತಾಶವಾಗಿ  ತಾನು ಸುದ್ದಿಯಲ್ಲಿ ಇರಬೇಕು ಅಂತ ಈ ರೀತಿಯ ಹೇಳಿಕೆ ನೀಡ್ತಿದ್ದಾರೆ. ಹತಾಶವಾಗಿ ಕಟೀಲ್ ಪ್ರಜ್ಞೆ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಕುಹಕವಾಡಿದರು.

ಇದನ್ನೂ ಓದಿ: ಟೀಕೆ ಮಾಡೋರಿಗೆ ನೆನಪಿರಲಿ, ದೇಶದ ಪ್ರಧಾನಿ-ರಾಷ್ಟ್ರಪತಿ ಕೂಡ RSSನವರು: HDKಗೆ ಯಡಿಯೂರಪ್ಪ ತಿರುಗೇಟು

ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಡ್ರಗ್ಸ್​​ ಹೆಚ್ಚಾಗಿದೆ. ನನಗೆ ಅನುಮಾನವಿದೆ ಇದ್ರಲ್ಲಿ ಹೆಚ್ಚು ಜನ ಸಿಕ್ಕಿ ಬಿದ್ದಿರುವರು ಬಿಜೆಪಿ ನಾಯಕರೇ ಇದ್ದಾರೆ. ಕಲಬುರ್ಗಿಯಲ್ಲಿ 6 ಕೋಟಿ ಗಾಂಜಾ ಸಿಕ್ಕಿದ್ದು ಚಂದ್ರಕಾಂತ ಬಿಜೆಪಿ ಕಾರ್ಯಕರ್ತ. ಇದ್ರಿಂದ ಗೊತ್ತಾಗುತ್ತೆ ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ಶಾಮೀಲ್ ಇದೆ ಎಂದು ಆರೋಪಿಸಿದರು. ಪುಕ್ಸಟ್ಟೆ ಪ್ರಚಾರಕೋಸ್ಕರ ವ್ಯೆಯಕ್ತಿಕವಾಗಿ ಮಾತಾಡಬೇಡಿ. ಮಾನಸಿಕ ಅಸ್ವಸ್ಥರಾಗಿದ್ದಾರೆ ನಮ್ಮಲ್ಲೆ ಡಾಕ್ಟರ್ ಇದ್ದಾರೆ ಟ್ರಿಟ್ಮೆಂಟ್ ಕೊಡಿಸುತ್ತೇವೆ. ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ ಇದರಿಂದ ಏನು ಸಮಸ್ಯೆ ಇಲ್ಲ. ಆ ಸಮಸ್ಯೆ ಇದ್ರೆ ನಾವು ಸಹಕಾರ ಕೊಟ್ಟು ನಿಮಗೆ ಟ್ರಿಂಟ್ ಮೆಂಟ್ ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು. ನಮ್ಮ ಲೀಡರ್ ಬಗ್ಗೆ ಮಾತಾಡಿದ್ರೆ ನಾವು ನಿಮ್ಮ ಲೀಡರ್ ಬಗ್ಗೆ ಮಾತಾಡಬೇಕಾಗುತ್ತೆ. ನೀವು ನಮ್ಮ ಲೀಡರ್ ಬಗ್ಗೆ ಸಾರ್ವಜನಿಕವಾಗಿ ಹೇಳೊಕೆ ರೇಡಿಯಿದ್ದರೆ, ನಿನ್ಮ ಲೀಡರ್ ಗಳ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನ ಕೇಳೊಕೆ ರೆಡಿ ಇರಬೇಕು ಎಂದು ಎಚ್ಚರಿಸಿದರು.

ಡಿಕೆಶಿನ ಹುಚ್ಚಾಸ್ಪತ್ರೆಗೆ ಸೇರಿಸಬೇಕು

ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ಹಾನಗಲ್ ನ ಗಡಿಯಂಕನಹಳ್ಳಿ ಫಾರ್ಮ್ ಹೌಸ್ ನಲ್ಲಿ ಶಾಸಕ ರಾಜುಗೌಡ ವಾಗ್ದಾಳಿ ನಡೆಸಿದರು. ಡಿಕೆಶಿ ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕೆಪಿಸಿಸಿ ಅದ್ಯಕ್ಷರು ಹುಚ್ಚಾಸ್ಪತ್ರೆಗೆ ಭೇಟಿ ನೀಡ್ತೀವಿ ಅಂತ ಹೇಳಿದ್ದಾರೆ. ಅವರು ಭೇಟಿ ನೀಡಿದರೆ ಖಂಡಿತ ನಾವು ಹಣ್ಣು ಹಂಪಲು ತಗೊಂಡು ಬಂದು ಆರೋಗ್ಯ ವಿಚಾರಿಸ್ತೀವಿ. ಕೊರೋನಾಗೆ ಹೇಗೆ ಫ್ರೀ ಟ್ರೀಟಮೆಂಟ್ ಕೊಟ್ಟಿದ್ರೋ ಅದೇ ರೀತಿ ಹುಚ್ಚಾಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸುವಂತೆ ಸಿಎಂಗೆ ಮನವರಿಕೆ, ಮನವಿ ಮಾಡುತ್ತೇವೆ ಎಂದು ಕುಹಕವಾಡಿದರು. ಡಿಕೆಶಿ ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆ ಸೋತಿದ್ದಾರೆ. ಸೋತ ಮೇಲೆ ಪಾಪ ಎಲ್ಲಿಗೆ ಹೋಗಬೇಕು ಅವರು? ಅವರು ಹುಚ್ಚಾಸ್ಪತ್ರೆಗೆ ಹೋಗಬೇಕು ಎಂದು ವ್ಯಂಗ್ಯವಾಡಿದರು.
Published by:Kavya V
First published: