ನಾವು ಕೊಟ್ಟಿದ್ದು ಲಾಲಿಪಾಪ್, ಇವರು ಕೊಟ್ಟಿದ್ದು ಕಾಟನ್ ಕ್ಯಾಂಡಿಯಾ? ಬಜೆಟ್ ವಿರುದ್ಧ ಹೆಚ್​ಡಿಕೆ ಕಿಡಿ

ಕರ್ನಾಟಕ ಸರಕಾರ 48 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದನ್ನು ಲಾಲಿಪಾಪ್ ಎಂತಾರೆ, ಇವರು ರಾಜ್ಯದ ರೈತರಿಗೆ ಕೊಡುತ್ತಿರುವುದು 3.57 ಸಾವಿರ ಕೋಟಿ. ಇದನ್ನೇನು ಬೊಂಬೆ ಮಿಠಾಯಿ ಎನ್ನಬೇಕಾ? ಎಂದು ಹೆಚ್​ಡಿಕೆ ಪ್ರಶ್ನಿಸಿದರು.

Vijayasarthy SN | news18
Updated:February 1, 2019, 8:34 PM IST
ನಾವು ಕೊಟ್ಟಿದ್ದು ಲಾಲಿಪಾಪ್, ಇವರು ಕೊಟ್ಟಿದ್ದು ಕಾಟನ್ ಕ್ಯಾಂಡಿಯಾ? ಬಜೆಟ್ ವಿರುದ್ಧ ಹೆಚ್​ಡಿಕೆ ಕಿಡಿ
ಕುಮಾರಸ್ವಾಮಿ
Vijayasarthy SN | news18
Updated: February 1, 2019, 8:34 PM IST
- ಕೃಷ್ಣ ಜಿ.ವಿ.,

ಬೆಂಗಳೂರು(ಫೆ. 01): ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯೆಲ್ ಇವತ್ತು ಮಂಡಿಸಿದ ಬಜೆಟ್ ನಿರಾಸೆ ತಂದಿದೆ ಎಂದು ಟೀಕಿಸಿದವರ ಸಾಲಿನಲ್ಲಿ ಕುಮಾರಸ್ವಾಮಿ ಕೂಡ ಒಬ್ಬರು. ಚುನಾವಣೆಪೂರ್ವದಲ್ಲಿ ಕೇಂದ್ರದಿಂದ ಮಂಡನೆಯಾಗುವ ಬಜೆಟ್ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಚುನಾವಣೆಗೆ ಮತ ಪಡೆಯುವುದಕ್ಕಾದರೂ ಜನೋಪಯೋಗಿ ಯೋಜನೆಗಳನ್ನ ಘೋಷಿಸಬಹುದೆಂದು ಭಾವಿಸಿದ್ದರು. ಇವೆಲ್ಲಾ ನಿರೀಕ್ಷೆಗಳೂ ಹುಡಿಯಾಗಿವೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಇನ್ನೂ ಕಟುವಾಗಿ ಮಾತನಾಡಿದ ಸಿಎಂ ಹೆಚ್​ಡಿಕೆ, ಈ ಬಜೆಟನ್ನು ಆರೆಸ್ಸೆಸ್ ಅಥವಾ ಬಿಜೆಪಿ ಹೆಡ್​ಕ್ವಾರ್ಟರ್ಸ್​ನಿಂದ ತಯಾರಿಸಿದಂತಿದೆ ಎಂದು ವ್ಯಂಗ್ಯವಾಡಿದರು.

ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಕೊಡುವ ಯೋಜನೆ ಬಗ್ಗೆ ಬಿಜೆಪಿ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಈ ಯೋಜನೆಯಿಂದ ಎಷ್ಟು ರೈತರಿಗೆ ಲಾಭ ಸಿಗುತ್ತದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೇಂದ್ರದಲ್ಲಿ ನಾವು ಸರ್ಕಾರ ರಚಿಸುತ್ತೇವೆ, ಮತ್ತೆ ಹೊಸ ಬಜೆಟ್​ ಮಂಡಿಸುತ್ತೇವೆ; ಸಿದ್ದರಾಮಯ್ಯ ವಿಶ್ವಾಸ

“12 ಕೋಟಿ ರೈತರಿಗೆ 75 ಸಾವಿರ ಕೋಟಿ ಹಣ ತೆಗೆದಿಟ್ಟಿದ್ದೇವೆ ಎಂದು ಬಜೆಟ್​ನಲ್ಲಿ ಹೇಳಿದ್ದಾರೆ. ಬಜೆಟ್ ಅನುಷ್ಠಾನಕ್ಕೆ ಬಂದರೆ ಕರ್ನಾಟಕದ 59 ಲಕ್ಷ ರೈತರಿಗೆ ಸಿಗುವುದು 3,579 ಕೋಟಿ ರೂ ಮಾತ್ರ. ನಮ್ಮ ಸರಕಾರ ರೈತರ 48 ಸಾವಿರ ಕೋಟಿ ರೂ ಸಾಲ ಮನ್ನಾ ಘೋಷಿಸಿದಾಗ ಪ್ರಧಾನಿ ಅವರು ಅದನ್ನು ಲಾಲಿಪಾಪ್ ಎಂದು ವ್ಯಂಗ್ಯವಾಡಿದ್ದರು. ಆದರೆ, ಇವರು ಕೊಟ್ಟಿರುವುದೇನು? ಕಾಟನ್ ಕ್ಯಾಂಡಿ ಎಂದು ಕರೆಯಬೇಕಾ?” ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: ಠಾಣೆಗೆ ಠಾಣೆಯೇ ಎತ್ತಂಗಡಿ – ಕುಮಾರಸ್ವಾಮಿ ಲೇಔಟ್ ಠಾಣೆಯ 71 ಸಿಬ್ಬಂದಿ ವರ್ಗಾವಣೆ“ಈ ಬಜೆಟ್​ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಪ್ರತಿಯೊಬ್ಬರಿಗೂ ನಿರಾಸೆ ತರುವ ಬಜೆಟ್ ಇದು. ಹೆತ್ತ ತಾಯಿಯನ್ನು ಮಕ್ಕಳು ಹೊಗಳುವಂತೆ ಬಿಜೆಪಿಯವರು ಬಜೆಟ್ ಬಗ್ಗೆ ಹೊಗಳಿಕೆ ನೀಡುತ್ತಿದ್ದಾರೆ ಅಷ್ಟೇ. ಈ ಕೇಂದ್ರ ಬಜೆಟ್​ನಿಂದ ದೇಶದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಅನ್ನೋದು ಸುಳ್ಳು….

“ನರೇಗಾ ಮತ್ತಿತರ ಯೋಜನೆ ಬಗ್ಗೆ ಯಾವುದೇ ಸದ್ದೇ ಇಲ್ಲ. ರಾಜ್ಯದ ಸಬರ್ಬನ್ ರೈಲಿನ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾವವೇ ಇಲ್ಲ. ರಾಜ್ಯದಿಂದ 18 ಬಿಜೆಪಿ ಸಂಸದರಿದ್ದರೂ ಈ ರೈಲು ಯೋಜನೆಗೆ ದಿಕ್ಕು ನೀಡಲಾಗಲಿಲ್ಲ. ಇದಕ್ಕಾಗಿ ಬಿಜೆಪಿ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ರಾಜ್ಯದ ಬಿಜೆಪಿ ಮುಖಂಡರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Union Budget 2019| ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಅನುಕೂಲಕರ ಬಜೆಟ್​ ಇದು; ಪ್ರಧಾನಿ ಮೋದಿ ಬಣ್ಣನೆ

ಕೇಂದ್ರಕ್ಕೆ ಹೋಲಿಸಿದರೆ ತಮ್ಮ ಸರಕಾರ ಸಾಕಷ್ಟು ಜನಪರ ಕಾರ್ಯಗಳನ್ನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ರಾಜ್ಯದ ರೈತರಿಗೆ 11 ಸಾವಿರ ಕೋಟಿ ವಿದ್ಯುತ್ ಸಬ್ಸಿಡಿ ಕೊಡುತ್ತಿದೆ. 1200 ಕೋಟಿ ರೂ ಹಾಲಿನ ಸಬ್ಸಿಡಿ ಕೊಡುತ್ತಿದೆ. ಬರಗಾಲ ಇದ್ದರೂ ತಮ್ಮ ಸರಕಾರ ರೈತರ ಪರವಾಗಿ ಕೆಲಸ ಮಾಡಿದೆ. ನಾಡಿನ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಇದನ್ನೂ ಓದಿ: ಮುಂದಿನ 10 ವರ್ಷಗಳಿಗೆ ಮೋದಿ ಸರಕಾರದ 10 ಆಯಾಮಗಳು

ಇದೇ ವೇಳೆ, ಸಮ್ಮಿಶ್ರ ಸರಕಾರದ ರೈತರ ಸಾಲ ಮನ್ನಾ ಕ್ರಮವನ್ನು ಲಾಲಿಪಾಪ್ ಎಂದು ಪ್ರಧಾನಿ ಮೋದಿ ಬಣ್ಣಿಸಿದ ಸಂಗತಿಯನ್ನು ಇತರ ಮುಖಂಡರೂ ಉಲ್ಲೇಖಿಸಿ ಲೇವಡಿ ಮಾಡಿದರು. ತಮ್ಮ ಸರಕಾರ ಮಾಡಿದ್ದು ಲಾಲಿಪಾಪ್ ಆದರೆ ಕೇಂದ್ರ ಸರಕಾರ ರೈತರಿಗೆ ಕೊಟ್ಟ ಆಫರ್ ಅನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಅವರು ಇದು ಪಾಪ್ ಕಾರ್ನ್ ಬಜೆಟ್ ಎಂದು ವ್ಯಂಗ್ಯವಾಡಿದರು.
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ