• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • HD Kumaraswamy: ‘ಪ್ರಹ್ಲಾದ್​ ಜೋಶಿಯವರನ್ನ ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್​ಡಿಕೆ ಹೊಸ ಬಾಂಬ್!

HD Kumaraswamy: ‘ಪ್ರಹ್ಲಾದ್​ ಜೋಶಿಯವರನ್ನ ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್​ಡಿಕೆ ಹೊಸ ಬಾಂಬ್!

ಹೆಚ್​​ಡಿ ಕುಮಾರಸ್ವಾಮಿ/ಪ್ರಹ್ಲಾದ್​ ಜೋಶಿ

ಹೆಚ್​​ಡಿ ಕುಮಾರಸ್ವಾಮಿ/ಪ್ರಹ್ಲಾದ್​ ಜೋಶಿ

ನಮ್ಮ ಕಡೆಯ ಬ್ರಾಹ್ಮಣ ಸಮಾಜದವರು ಸರ್ವೇ ಜನಾಃ ಸುಖಿನೋ ಭವಂತು ಅಂತಾರೆ. ಜೋಶಿ ಮಹಾರಾಷ್ಟ್ರ ಭಾಗದ ಪೇಶ್ವಾ ವಂಶಕ್ಕೆ ಸೇರಿದವರು. ಇವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore, India
 • Share this:

ಬೆಂಗಳೂರು: ಪಂಚರತ್ನ ಯಾತ್ರೆ (Pancharatna Yatra) ವೇಳೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಪ್ರಹ್ಲಾದ್ ಜೋಶಿಯವರೇ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ. ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡಲು ಆರ್​​ಎಸ್​ಎಸ್ (RSS)​ ಹುನ್ನಾರ ಮಾಡಿದೆ. ಜೊತೆಗೆ ರಾಜ್ಯದಲ್ಲಿ 8 ಜನ ಡಿಸಿಎಂ ಮಾಡಿ, ಒಬ್ಬ ಸಿಎಂ ಮಾಡುವ ಯೋಜನೆ ಅವರಿಗಿದೆ. ಈಗಾಗಲೇ ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ ಎಂದು ತಿಳಿಸಿದ್ದಾರೆ.


ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜೆಡಿಎಸ್​ ಪಕ್ಷ ಹಾಗೂ ಹೆಚ್​ಡಿ ದೇವೇಗೌಡ ಅವರ ಕುಟುಂಬ ರಾಜಕಾರಣ ಅಂತ ಆರೋಪ ಮಾಡಿದ್ದ ಪ್ರಹ್ಲಾದ್​ ಜೋಶಿ ಅವರ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ: Hassan JDS Ticket Fight: ಕುಮಾರಸ್ವಾಮಿ ಮಾತೇ ಅಂತಿಮ, ನಮ್ಮಿಬ್ಬರನ್ನು ಬೇರೆ ಮಾಡಲು ಆಗಲ್ಲ- ಗೊಂದಲಕ್ಕೆ ತೆರೆ ಎಳೆದ ಹೆಚ್​ಡಿ ರೇವಣ್ಣ


ಜೋಶಿ  ದಕ್ಷಿಣ ಭಾರತದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ


ಇವತ್ತು ಪ್ರಹ್ಲಾದ್​​ ಜೋಶಿ ಅವರನ್ನು ಮುಂದಿನ ಚುನಾವಣೆ ನಂತರ ಈ ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂಬುವುದು ಆರ್​​ಎಸ್​​ಎಸ್​​ನ ಹುನ್ನಾರ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಪ್ರಹ್ಲಾದ್​ ಜೋಶಿ ಅವರು ನಮ್ಮ ದಕ್ಷಿಣ ಭಾರತದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ. ಬ್ರಾಹ್ಮಣ ವೃತ್ತಿಯಲ್ಲೂ, ಸಂಸ್ಕಾರದಲ್ಲೂ ಎರಡು ಮೂರು ಭಿನ್ನವಾದ ವಿಧಗಳಿವೆ. ಇವರು ಶೃಂಗೇರಿ ಮಠದ ಒಡೆದ ಪೇಶವರ ಗ್ರೂಪ್​ನವರು. ಪೇಶ್ವೆಗಳು ಶೃಂಗೇರಿಯ ಮಠವನ್ನು ಒಡೆದಂತವರು, ಅಲ್ಲಿಯ ದೇವರನ್ನು ಒಡೆದ ವರ್ಗಕ್ಕೆ ಸೇರಿದವರು ಎಂದು ಆರೋಪಿಸಿದರು.


ಇವರು ಮಹಾತ್ಮ ಗಾಂಧಿ ಅವರನ್ನು ಕೊಂದ ವರ್ಗಕ್ಕೆ ಸೇರಿವರು ಇವರು. ಅವರು ನಮ್ಮ ಹಳೆ ಕರ್ನಾಟದ ಬ್ರಾಹ್ಮಣರಲ್ಲ. ಅವರನ್ನು ಕರ್ನಾಟಕ ಮುಂದಿನ ಮುಖ್ಯಮಂತ್ರಿ ಮಾಡಲು ಈಗಾಗಲೇ ಆರ್​ಎಸ್​ಎಸ್​ನಲ್ಲಿ ತೀರ್ಮಾನಗಳಾಗಿದೆ. ಆದ್ದರಿಂದ ನಿನ್ನೆಯಿಂದ ನನ್ನ ವಿರುದ್ಧ ಗದಾಪ್ರಹಾರ ಪ್ರಾರಂಭ ಮಾಡಿದ್ದಾರೆ.
ಇವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ


ನಮ್ಮ ಕಡೆಯ ಬ್ರಾಹ್ಮಣ ಸಮಾಜದವರು ಸರ್ವೇ ಜನಾಃ ಸುಖಿನೋ ಭವಂತು ಅಂತಾರೆ. ಜೋಶಿ ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಕ್ಕೆ ಸೇರಿದವರು. ಇವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ದೇಶ ಒಡೆಯುವುದು, ಕುತಂತ್ರದ ರಾಜಕಾರಣ ಮಾಡುವುದು, ದೇಶ ಭಕ್ತಿ ಅಂತ ಹೆಸರಿನಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತಹವರನ್ನು ಮಾರಣಹೋಮ ಮಾಡುವುದು, ಈ ಪ್ರವರ್ಗದವರಿಂದ ಬಂದವರದ್ದಾಗಿದೆ.


ಇದನ್ನೂ ಓದಿ: Union Budget 2023: ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್​ಡಿ ಕುಮಾರಸ್ವಾಮಿ ಟೀಕೆ


ಎಂಟು ಮಂದಿ ಉಪಮುಖ್ಯಮಂತ್ರಿಗಳನ್ನು ಮಾಡಲು ಮುಂದಾಗಿದ್ದಾರೆ


ಈ ಸಂದರ್ಭದಲ್ಲಿ ನಾನು ನಾಡಿನ ವೀರ ಶೈವ ಸಮಾಜ, ಒಕ್ಕಲಿಗ, ದಲಿತ, ಹಿಂದುಳಿದ ಸಮುದಾಯಗಳಿಗೆ ಹೇಳುತ್ತಿದ್ದೇನೆ. ಬಿಜೆಪಿ ಈ ಹುನ್ನಾರದ ಬಗ್ಗೆ ಕರ್ನಾಟಕ ಜನ ಕುತಂತ್ರಕ್ಕೆ ಮರುಳಾಗಬೇಡಿ. ಈ ರಾಜ್ಯವನ್ನು ಇವ್ರು ಒಡೆಯುತ್ತಾರೆ. ಇಂತಹ ವ್ಯಕ್ತಿಗಳನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಹುನ್ನಾರ ನಡೆಯುತ್ತಿರುವ ಬಗ್ಗೆ ನನಗೆ ವಿಷಯ ಬಂದಿದೆ. ಅಲ್ಲದೇ ಎಂಟು ಮಂದಿ ಉಪಮುಖ್ಯಮಂತ್ರಿಗಳನ್ನು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಆರ್​​ಎಸ್​ಎಸ್​ ಮೀಟಿಂಗ್ ಮಾಡಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.

Published by:Sumanth SN
First published: