ಬಾಂಬ್ ಇಟ್ಟವರ ಪತ್ತೆ ಕಷ್ಟವಲ್ಲ; ಆದರೆ, ಸುಳ್ಳು ಕಥೆ ಸೃಷ್ಟಿಸಬೇಡಿ: ಪೊಲೀಸರಿಗೆ, ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ

ಸರ್ಕಾರವೇ ಜನತೆಯಲ್ಲಿ ಸಂಘರ್ಷದ ಮನೋಭಾವವನ್ನು ಉಂಟು ಮಾಡುತ್ತಿದೆ. ಇದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದೆ. ಆ ರೀತಿಯ ಅನುಮಾನಗಳು ನನ್ನಲ್ಲಿ ಸೃಷ್ಟಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಶಂಕಿಸಿದ್ಧಾರೆ.

news18
Updated:January 20, 2020, 4:59 PM IST
ಬಾಂಬ್ ಇಟ್ಟವರ ಪತ್ತೆ ಕಷ್ಟವಲ್ಲ; ಆದರೆ, ಸುಳ್ಳು ಕಥೆ ಸೃಷ್ಟಿಸಬೇಡಿ: ಪೊಲೀಸರಿಗೆ, ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ
ಹೆಚ್​.ಡಿ. ಕುಮಾರಸ್ವಾಮಿ.
  • News18
  • Last Updated: January 20, 2020, 4:59 PM IST
  • Share this:
ಚಿಕ್ಕಮಗಳೂರು(ಜ. 20): ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿ ನಿಜವಾದ ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಕೆಲ ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ತನಿಖೆ ವಿಳಂಬ ಮಾಡಿ 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿ ಮಾಡಿಬಿಡುವ ಸಾಧ್ಯತೆ ಇದೆ ಎಂದು ಆತಂಕಪಟ್ಟಿದ್ದಾರೆ. ಶೃಂಗೇರಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದಲ್ಲಿ ಪಾಲ್ಗೊಂಡಿರುವ ಕುಮಾರಸ್ವಾಮಿ ಅವರು ಬಿಡುವಿನ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮೇಲಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ಧಾರೆ.

ಮಂಗಳೂರಿನಲ್ಲಿ ಬಾಂಬ್ ಇಟ್ಟವರು ಯಾರು ಎಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆ ಜಾಗದಲ್ಲಿ ಸಿಸಿಟಿವಿ ಇರುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಹೆಚ್ಚಲು ಪೊಲೀಸರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಮುಖ್ಯಮಂತ್ರಿಗಳು ಪೊಲೀಸರನ್ನು ಆಗ್ರಹಿಸಿದ್ಧಾರೆ.

ಇದನ್ನೂ ಓದಿ: ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ವಾಂತಿಯಾಗುತ್ತೆ - ಮತ್ತೊಂದು ಅಪರೇಷನ್ ಕಮಲದ ವಿರುದ್ಧ ಹೊರಟ್ಟಿ ಕಿಡಿ

ನನಗೆ ಕೆಲ ಪೊಲೀಸರ ಮೇಲೆ ಅನುಮಾನ ಇದೆ. ಸರ್ಕಾರ ಮತ್ತು ಪೊಲೀಸರು ಸಮಾಜ ಒಡೆಯುವ ಕೆಲಸ ಮಾಡಬಾರದು. ಸಮಾಜದಲ್ಲಿ ಅಪನಂಬಿಕೆ ಉಂಟಾಗಬಾರದು. ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಹಲವು ಸಮಸ್ಯೆಗಳಿವೆ. ನಿಮ್ಮಲ್ಲಿ ಅಧಿಕಾರ ಇದೆ. ತನಿಖೆ ಯಾವುದರಿಂದಲಾದರೂ ಮಾಡಿಕೊಳ್ಳಿ. ಆದರೆ ಜನರ ವಿಶ್ವಾಸ, ನಂಬಿಕೆ ಕಳೆಯುವ ಕೆಲಸ ಮಾಡಬೇಡಿ. ಪೊಲೀಸರು ಸಂಶಯದ ಹೇಳಿಕೆ ನೀಡಬೇಡಿ ಎಂದು ಕುಮಾರಸ್ವಾಮಿ ತಿಳಿಸಿದ್ಧಾರೆ.

ಸರ್ಕಾರವೇ ಜನತೆಯಲ್ಲಿ ಸಂಘರ್ಷದ ಮನೋಭಾವವನ್ನು ಉಂಟು ಮಾಡುತ್ತಿದೆ. ಇದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದೆ. ಆ ರೀತಿಯ ಅನುಮಾನಗಳು ನನ್ನಲ್ಲಿ ಸೃಷ್ಟಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಶಂಕಿಸಿದ್ಧಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಸಜೀವ ಬಾಂಬ್​ ಪತ್ತೆ ಹಿನ್ನೆಲೆ; ಬೆಂಗಳೂರು ಸೇರಿ ಎಲ್ಲೆಡೆ ಹೈ ಅಲರ್ಟ್​ ಘೋಷಣೆ

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಇತ್ತೀಚೆಗೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವುದೋ ಒಂದು ವರ್ಗದ ಓಲೈಕೆಗೆ ಅಮಾಯಕರನ್ನು ಬಲಿ ತೆಗೆದುಕೊಳ್ಳಬೇಡಿ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.ಕಲ್ಲು ಹೊಡೆದದ್ದು ಕ್ಯಾಮೆರಾದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ತಿಂಗಳಾದರೂ ಕಲ್ಲು ಹೊಡೆದಿರುವುದನ್ನು ಸಮಾಜದ ಮುಂದೆ ಯಾಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ ಅವರು, ಜನರಲ್ಲಿ ಭಯಭೀತ ವಾತಾವರಣ ಸೃಷ್ಟಿಸುವ ಬದಲು ನೆಮ್ಮದಿಯಿಂದ ಜನರು ಬದುಕುವ ಹಾಗೆ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ತಿಳಿಹೇಳಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ